“ಮಹಿಳಾ ಸಬಲೀಕರಣಕ್ಕಾಗಿ ಯೋಗ”

ಈ ಬಾರಿಯ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಧ್ಯೇಯವಾಕ್ಯ ‘ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ’ ಎಂಬುದಾಗಿದ್ದು ಇದರ ಉದ್ದೇಶವು ಮಹಿಳೆಯರ ಯೋಗಕ್ಷೇಮವನ್ನು ಕೇಂದ್ರೀಕರಿಸುವ ಮತ್ತು ಜಾಗತಿಕ ಆರೋಗ್ಯ ಮತ್ತು ಶಾಂತಿಯನ್ನು ಉತ್ತೇಜಿಸುವುದಾಗಿದೆ.


ಭಾರತದ ದೇಶದ ಪರಂಪರೆ, ಇತಿಹಾಸ ತನ್ನದೇ ಆದ ಸಾಂಸ್ಕøತಿಕ ಶ್ರೀಮಂತಿಕೆಯನ್ನು ಹೊಂದಿದ್ದು ಜ್ಞಾನ, ವಿಜ್ಞಾನ, ತಂತ್ರಜ್ಞಾನದ ಜೊತೆ ಪ್ರಕೃತಿಯೊಂದಿಗೆ ಮನುಷ್ಯನ ಜೀವನ ಕ್ರಮ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳಲು ಬೇಕಾದ ಅನೇಕ ನೀತಿ ನಿಯಮಗಳನ್ನು ಹಾಕಿಕೊಟ್ಟಿದ್ದು ಅದರಲ್ಲಿ ಯೋಗ ಅತ್ಯಂತ ಮಹತ್ವವಾದ ಒಂದು ಆರೋಗ್ಯಕರ ಜೀವನ ಕ್ರಮವಾಗಿದೆ.
ಭಾರತ ದೇಶವನ್ನು ಭರತರಾಜ ಆಳ್ವಿಕೆ ಮಾಡಿದಕ್ಕಾಗಿ ಭರತಖಂಡ, ಭಾರತ ದೇಶ ಎಂದು ನಾಮಕರಣಗೊಂಡಿದ್ದರೂ ಸಹ ನಾವು ಭಾರತ ಮಾತೆ ಎಂದು ಕರೆಯುತ್ತೇವೆ. ಈ ದೇಶದಲ್ಲಿ ಸ್ತ್ರೀಯರನ್ನು ಶಕ್ತಿಯ ಪ್ರತೀಕ ಎಂದು ಆಧ್ಯಾತ್ಮಿಕವಾಗಿ ಪೂಜಿಸಲಾಗುತ್ತದೆ. ಮಾತೃಸ್ವರೂಪ ಎಂದು ಗೌರವಿಸಲಾಗುತ್ತದೆ.
ಮಹಿಳೆಯರ ಯೋಗಕ್ಷೇಮವನ್ನು ಕೇಂದ್ರೀಕರಿಸುವ ಮತ್ತು ಜಾಗತಿಕ ಆರೋಗ್ಯ ಮತ್ತು ಶಾಂತಿಯನ್ನು ಉತ್ತೇಜಿಸುವ ಜೊತೆಗೆ ಯೋಗವನ್ನು ವ್ಯಾಪಕ ಆಂದೋಲನ ಮೂಲಕ ಮಹಿಳೆಯರನ್ನು ಸಬಲೀಕರಗೊಳಿಸುವುದು ಈ ಬಾರಿಯ ಯೋಗ ದಿನಾಚರಣೆ ಉದ್ದೇಶವಾಗಿದೆ.


ಮಹಿಳೆಯರಲ್ಲಿ ಕಂಡು ಬರುವ ಪಿಸಿಓಎಸ್/ಪಿಸಿಒಡಿ, ಒತ್ತಡ ನಿರ್ವಹಣೆ, ಮತ್ತು ಅವರ ವಯಸ್ಸು, ಅವರ ದೈಹಿಕ, ಮಾನಸಿಕ, ಭಾವನಾತ್ಮಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮವನ್ನು ಒಳಗೊಳ್ಳುವ ಸಮಗ್ರ ಸಾಧನ ಯೋಗಾಭ್ಯಾಸ.
ಸಶಕ್ತ ಮಹಿಳೆಯರು ಸಮಾಜದಲ್ಲಿ ಅವರ ಸಾಮಥ್ರ್ಯದ ಮೂಲಕ ಸ್ವಾವಲಂಬನೆಗಾಗಿ, ಸಮಾಜದ ಬದಲಾವಣೆಗಾಗಿ ನಾಯಕಿಯಾಗಿ, ಶಿಕ್ಷಕಿ, ವೈದ್ಯೆ, ವಕೀಲರಾದಿಯಾಗಿ ಹಲವಾರು ಕ್ಷೇತ್ರದಲ್ಲಿ ತನ್ನದೇ ಆದ ಪಾತ್ರವನ್ನು ನಿರ್ವಹಿಸುತ್ತಾಳೆ.

ಯೋಗ ದಿನಾಚರಣೆಯ ಇತಿಹಾಸ:
ಸುಮಾರು 6000 ವರ್ಷಗಳ ಪ್ರಾಚೀನ ಆರೋಗ್ಯ ಪದ್ಧತಿಯಾದ ಯೋಗಕ್ಕೆ ಜಾಗತಿಕ ಮಾನ್ಯತೆ ನೀಡಬೇಕು ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಮಿಷನ್ 2014ರಲ್ಲಿ ಪ್ರಸ್ತಾವ ಸಲ್ಲಿಸಿತ್ತು. ಆ ಪ್ರಸ್ತಾವವನ್ನು ಪುರಸ್ಕರಿಸಿದ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು, ಪ್ರತಿ ವರ್ಷ ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು ಒಪ್ಪಿಗೆ ಸೂಚಿಸಿದ್ದವು.
2015 ರ ಜೂನ್ 21ನೇ ದಿನವನ್ನು ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನವಾಗಿದೆ. ಏಕೆಂದರೆ ಇಡೀ ವಿಶ್ವಕ್ಕೆ ನಮ್ಮ ಭಾರತ ಕೊಟ್ಟ ಅಮೂಲ್ಯ ಕೊಡುಗೆಯಾದ ಯೋಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲು ಅವಕಾಶ ಕಲ್ಪಿಸಿದ ದಿನವಾಗಿದೆ.


ಪತಂಜಲಿ ಯೋಗ ಭಾರತಕ್ಕμÉ್ಟೀ ಸೀಮಿತವಾಗಿಲ್ಲ. ಆಸ್ಟ್ರೇಲಿಯಾ, ಯುರೋಪ್ ಸೇರಿದಂತೆ ಸಪ್ತಸಾಗರದಾಚೆಗಿನ ಅಮೆರಿಕಾ ಸೇರಿದಂತೆ 177ಕ್ಕೂ ಹೆಚ್ಚು ದೇಶಗಳಲ್ಲಿ ಯೋಗಾಭ್ಯಾಸ ಮಾಡಲಾಗುತ್ತಿದೆ. ಭಾರತದಲ್ಲಿ ಯೋಗವನ್ನು ಕಲಿತು, ವಿದೇಶಗಳಲ್ಲಿ ಅದೆμÉ್ಟೂೀ ಮಂದಿ ಯೋಗ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಾ ಉದ್ಯೋಗವನ್ನು ಕಂಡುಕೊಂಡಿದ್ದಾರೆ.
ಮೊಟ್ಟ ಮೊದಲ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜಗತ್ತಿನ ಮೂಲೆಮೂಲೆಗಳಲ್ಲಿ ಆಚರಿಸಲಾಯ್ತು. ಭಾರತದ ಆಯುಷ್ ಸಚಿವಾಲಯದ ನೇತೃತ್ವದಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯ ರಾಜಪಥದಲ್ಲಿ ವಿಜೃಂಭಣೆಯಿಂದ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಹಾಗೂ ವಿಶ್ವದ 84 ರಾಷ್ಟ್ರಗಳ ಗಣ್ಯರು ಈ ಐತಿಹಾಸಿಕ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದರು. ಅಂದು ಯೋಗದ ವಿವಿಧ ಆಸನಗಳನ್ನು ಅಭ್ಯಾಸಿಸಲಾಯಿತು.


2015ರ ಬಳಿಕ ಪ್ರತಿ ವರ್ಷ ಜೂನ್ 21ರಂದು ವಿಶ್ವ ಯೋಗ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ. ಈ ವರ್ಷ 10 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಗಾಗಿ ಭಾರತ ಸೇರಿದಂತೆ ಜಗತ್ತೇ ಸಿದ್ಧವಾಗಿದೆ.
ವರ್ಷದಲ್ಲಿ ಜೂನ್ 21 ನೇ ತಾರೀಖು ಉತ್ತರ ಗೋಳಾರ್ಧದ ಅತಿ ಉದ್ದದ ಹಾಗೂ ದಕ್ಷಿಣ ಗೋಳಾರ್ಧದ ಅತಿ ಚಿಕ್ಕ ದಿನವಾಗಿರುವುದರಿಂದ, ಈ ದಿನವನ್ನೇ ಯೋಗ ದಿನಾಚರಣೆಗೆ ಆಯ್ಕೆ ಮಾಡಲಾಗಿದೆ. ವರ್ಷದಲ್ಲಿ ಈ ದಿನ ಮಾತ್ರ ಅತಿ ಹೆಚ್ಚು ಹಗಲಿರುತ್ತದೆ. ಪ್ರತಿವರ್ಷ ಯೋಗ ದಿನಾಚರಣೆಯಂದು ಯೋಗ, ಧ್ಯಾನ, ಪ್ರಾಣಾಯಾಮ, ಸಭೆಗಳು, ಚರ್ಚೆಗಳು, ಸಾಂಸ್ಕøತಿಕ ಪ್ರದರ್ಶನಗಳು ಇತ್ಯಾದಿ ಕಾರ್ಯಕ್ರಮಗಳನ್ನು ಎಲ್ಲೆಡೆ ಆಯೋಜಿಸಲಾಗುತ್ತದೆ.

ಆರೋಗ್ಯ ಸಮತೋಲನೆ-ಮಾನಸಿಕ ನೆಮ್ಮದಿಗಾಗಿ ಯೋಗ:
ಯೋಗಾಭ್ಯಾಸದಿಂದ ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಂಡು ಮತ್ತು ವೇಗದ ಜಗತ್ತಿನಲ್ಲಿ ಸಮತೋಲನವನ್ನು ಕಂಡುಕೊಳ್ಳಬಹುದಾಗಿದ್ದು ಯೋಗವು ಒತ್ತಡವನ್ನು ಕಡಿಮೆ ಮಾಡುವ, ವಿಶ್ರಾಂತಿಯನ್ನು ಉತ್ತೇಜಿಸುವ ಮತ್ತು ಯೋಗಕ್ಷೇಮವನ್ನು ಹೆಚ್ಚಿಸುವ ಸಾಮಥ್ರ್ಯವನ್ನು ಹೊಂದಿದೆ. ಯೋಗ ಅಭ್ಯಾಸವನ್ನು ಎಲ್ಲಾ ವಯಸ್ಸಿನವರೂ ಮಾಡಬಹುದು. ವೈಯಕ್ತಿಕ ಅಗತ್ಯಗಳು ಮತ್ತು ಗುರಿಗಳಿಗೆ ತಕ್ಕಂತೆ ಮಾಡಬಹುದಾದ ಆಸನಗಳು ಇವೆ. ಯೋಗವು ಪ್ರತಿಯೊಬ್ಬರ ಜೀವನದಲ್ಲಿ ಸಮತೋಲನ ಮತ್ತು ಸಾಮರಸ್ಯದ ಭಾವನೆಯನ್ನು ಬೆಳೆಸುವ ಮೂಲಕ ದೇಹ ಮತ್ತು ಮನಸ್ಸಿನ ಮೇಲೆ ಉತ್ತಮ ಪರಿಣಾಮಗಳನ್ನು ಬೀರುತ್ತದೆ. ಶಾಂತಿ, ಸಾಮರಸ್ಯ ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

-ರಘು ಆರ್
ಅಪ್ರೆಂಟಿಸ್ ವಾರ್ತಾ ಇಲಾಖೆ