ಮನುಷ್ಯ ನಂಜು ಕಾವಿಡುವುದಕ್ಕೆ ಶುರುವಾದರೆ ಅದಕ್ಕೊಂದು ಔಷದವೇ ಇಲ್ಲ, ಪರಿಹಾರವು ಇಲ್ಲ, ಹಾಗೆಯೇ ಗೋರಿ ಕಟ್ಡಿಬಿಡುತ್ತದೆ ಅಥವಾ ನಶಿಸಿ ಸ್ವತಃ ಗೋರಿ ಕಟ್ಟಿಕೊಳ್ಳುತ್ತದೆ. ಇಂತಹ ನಂಜು ಕಾರುವವರ ನಡುವೆ ಇದ್ದು ಬದುಕಬೇಕು ಎಲ್ಲರಂತಲ್ಲ ವಿಶೇಷಿತರಾಗಿ… ಹೆತ್ತವರ ಒಡಲಿನ ಮಡಿಲಿಗೆ ಕೀರ್ತಿಯ ಯಶಸ್ಸನ್ನು ಕಾಣಿಕೆಯಾಗಿ ಅರ್ಪಿಸಬೇಕು, ಅಪ್ಪನ ಕಷ್ಟಗಳಿಗೆ ನೆರವು ಆಗಬೇಕು ಎಂದುಕೊಂಡು ನಡೆದಿದ್ದು, ಬಹಳಷ್ಟು ಸೋಲುಗಳನ್ನು ಅನುಭವಿಸಿ ನಂತರ ಅಕ್ಷರ ಲೋಕದಲ್ಲಿ ವಿರಾಜಿಸಿದ್ದು ಎಲ್ಲವೂ ವಿವರಿಸುವುದಕ್ಕೆ ತೆರಳುವುದಿಲ್ಲ, ಬಹಳಷ್ಟು ಮನಸುಗಳಿಗೆ ಇದು ಗೊತ್ತಿದೆ.* ಇಂತಿವ ಕಾಲಾವಧಿಯಲ್ಲಿ ಅರ್ಥೈಸಿಕೊಳ್ಳಬೇಕಾದ ಒಂದು ಸತ್ಯ ಏನೆಂದರೆ ಈ ಜೀವಿತ ಬದುಕಿನ ನಮ್ಮಗಳ ನಡುವೆ ಸಾಗಿ ಬರುವವರು ಮುಖ್ಯರು ಅಲ್ಲ, ಅಮುಖ್ಯರು ಅಲ್ಲ, ಹೀಗಾಗಿ ಅನಗತ್ಯ ಚರ್ಚೆಗಳಿಗೆ ಚಿತ್ತವರಿಸಿ ಚಿತೆಯಂತಾಗಿಸಿಕೊಳ್ಳಬಾರದು. ಸಂಘಟನೆಗಳ ತಳಹದಿಯ ಬದುಕಿನ ಜಗುಲಿಗಳಲ್ಲಿ ಕೂತು, ಅಪ್ಪನ ಬೆವರ ತೊಡೆಗಳಲ್ಲಿ ತುಸು ಮಲಗಿ ಕಾಡುತ್ತಿದ್ದ ದಟ್ಟ ಕಡಿದಾದ ಕಣಿವೆಗಳನ್ನು ಅದ್ಯಾಗೆ ದಾಟಬೇಕಿದೆ, ಎಂದು ಚಿತ್ತವರಿಸುತ್ತಲೇ ಇದ್ದ ದಿನಮಾನ. ಒಮ್ಮೆಲೆ ಎಲ್ಲವಕ್ಕೂ ಉತ್ತರ ಸಿಕ್ಕಿದ್ದು ಈ ಪತ್ರಿಕಾ ಹಾಗೂ ಸಾಹಿತ್ಯ ಲೋಕದಿಂದ ಅದು ಸಮಾಜಮುಖಿಯಾಗಿ ಸೇವೆಯಲ್ಲಿಯೂ ತಲ್ಲೀನಗೊಳಿಸುವಂತೆ ಮಾಡಿತು. ಇನ್ನೂ ಆಗಾಗ್ಗೆ ಸಮಸ್ಯೆಗಳನ್ನುಂಟು ಮಾಡಿದವರೇ ಅವರಿಗೊತ್ತಿಲ್ಲದಂತೆ ಈ ಬದುಕಿನ ಅಂಧಕಾರಕ್ಕೆ ದೀವಿಗೆ ಹಿಡಿದಿದ್ದರು, ಬಹುಷ್ಯಃ ಅದರ ಅರಿವಿನ ಕೊರತೆಯಿತ್ತು ಅನಿಸುತ್ತೇ ಹೀಗೆಲ್ಲಾ ನಡೆಯದೆ ಹೋಗಿದಿದ್ದರೆ, ಎನ್ನೊಳಗಿನ ಅಗಾಧತೆ, ಮೌನ, ಧ್ಯಾನ, ವೇಗ, ಕ್ರಿಯಾಶೀಲತೆ, ಅವಲೋಕನ, ಅಧ್ಯಯನಶೀಲತೆ ಸೇವಾ ಮನೋಭಾವಗಳು ಗೋಚರವೇ ಆಗುತ್ತಿರಲಿಲ್ಲ, ಮೊದ-ಮೊದಲಿನ ಸುದ್ದಿಮನೆಯ ಹಾಗೂ ಕೆಲ ಗೆಳೆಯರ ಸಾಂಗತ್ಯದಲ್ಲಿ ಗತಿಸಿದ ರೌದ್ರತೆಗಳು, ಹಿಂಬದಿ ದಾಳಿಗಳು ಹಾಗೂ ಅವರುಗಳ ಪೂರ್ವ ನಿಯೋಜಿತಕ್ಕೊಳಗಾಗಿ ನಾನೆಲ್ಲೋ ಮರ್ಡರ್ ಆಗಿ ಬಿಡುತ್ತೇನೆ, ಅಥವಾ ಸ್ವತಃ ಸಾಮಾಜಿಕ ಹತ್ಯೆಯ ಕೂಪದಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ, ಇದಿಲ್ಲದಿದ್ದರು ನಾನೇ ಎಲಿಮೆಂಟ್ ಹಾದಿ ತುಳಿದು ಬಿಡುತ್ತೇನೆ ಎನ್ನುವ ಭಾವಗಳು ದಟ್ಟವಾಗಿಯೇ ಆವರಿಸಿತ್ತು. ಅಚ್ಚರಿ ಎಂದರೆ ಇಂದಿಗೂ ಯಾವುದೇ ಕ್ಷೇತ್ರವಾಗಲಿ ಅಲ್ಲಿ ನನ್ನನ್ನ ಬಲವಾಗಿ ವಾಮಮಾರ್ಗದಿ ವಿರೋಧಿಸುವ ಸಣ್ಣ ಗುಂಪು ಸಿದ್ದವಾಗುತಿತ್ತು ಇದು ಯಾರ ತಣಿಸುವುದಕ್ಕಾಗಿಯೋ..? ಅಥವಾ ನನ್ನ ವಿರೋಧಿಸುವ ಕಯ್ಯಾಲಿಯಲ್ಲಿ ಅನುಕೂಲತೆಗಳ ಗಳಿಸುವುದಕ್ಕಾಗಿಯೋ..? ಪ್ರಶ್ನಾರ್ಥಕವಾದರೂ ಒಟ್ಟಾರೆ ಗಾರಾ.ಶ್ರೀನಿವಾಸನನ್ನ ವಿರೋಧಿಸುವುದೇ ಕೈಂಕರ್ಯ ಮಾಡಿಕೊಂಡು ಸೃಷ್ಟಿಸಿದ ಸಮಸ್ಯೆಗಳೇ ತನಗೊಂದು ಯಶಸ್ಸು ತಂದು ಕೊಡುತಿತ್ತು, ಎನ್ನೊಳಗಿನ ಕುಬ್ಜತೆಯನ್ನು ತೊಳೆದು ಹಿಗ್ಗಿಸುತಿತ್ತು, ಹೌದು ಸಮಸ್ಯೆ ಎಂಬುದು ಬಲು ಕ್ಲಿಷ್ಟಕರ, ಹೆದರಿಸುವ ಮನೊಧೈರ್ಯ ಇಲ್ಲದಿದ್ದರೆ ಖಂಡಿತವಾಗಿಯೂ ಸಮಸ್ಯೆಗಳಲ್ಲಿಯೇ ಲೀನವಾಗಿ ಬಿಡುವ ಯಾವ ನಿಸ್ಸಂದೇಹವೂ ಇಲ್ಲವಾಗಿದೆ, ಹೆದರಿಸಿ ನಿಂತರೆ ಸಮಸ್ಯೆಗಳೇ ಬದುಕಿಗೊಂದು ಯಶಸ್ಸು ತಂದು ಕೊಡುತ್ತದೆ ಎನ್ನುವುದನ್ನು ಸ್ವತಃ ಅನುಭವಿಸಿದ್ದೇನೆ. ಈ ಸಂದರ್ಭದಲ್ಲಿ ಹೇಳಬೇಕಾದ ಜೀವಂತ ಉದಾಹರಣೆಗಳು ಅನೇಕ, ಆದರೆ ಇಲ್ಲಿ ಒಂದಿಷ್ಟು ಲಗತ್ತಿಸುತ್ತೇನೆ, ಶುರುವಿನಲ್ಲಿ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಆಹ್ವಾನ ಪತ್ರಿಕೆಯನ್ನು ಮುದ್ರಿಸಲಾಗುತಿತ್ತು ಅಚ್ಚರಿ ಎಂದರೆ ಆಹ್ವಾನ ಪತ್ರಿಕೆ ಹಂಚಿದ ಮಾರನೆಯ ದಿನದಲ್ಲಿಯೇ ವೇದಿಕೆಗೆ ಬರುತ್ತೇನೆ ಎಂದಿದ್ದ ಗಣ್ಯಮಾನ್ಯರಲ್ಲೊಂದಿಷ್ಟು ಕ್ಷಮಿಸಿ ನಾನು ಊರಲ್ಲಿ ಇರುವುದಿಲ್ಲ ನಾನು ಕಾರ್ಯಕ್ರಮಕ್ಕೆ ಬರುವುದಕ್ಕೆ ಆಗುವುದಿಲ್ಲ ಎನ್ನುತ್ತಿದ್ದರು, ಹೀಗೆ ಹತ್ತಾರು ಕಾರ್ಯಕ್ರಮಗಳಲ್ಲಿ ಸಂತಸದಿ ಬರುತ್ತೇನೆ ಎಂದವರೇ ಕಾಣೆಯಾಗಿ ಬಿಡುತ್ತಿದ್ದರು, ಆದರೂ ಸಾಮಾಜಿಕ ಕಾರ್ಯಕ್ರಮ ನಿಲ್ಲುತ್ತಿರಲಿಲ್ಲ, ನನಗೆ ಇದರ ಆಂತರಿಕ ಸಂಗತಿಗಳೂ ಗೊತ್ತಾಗುತ್ತಿರಲಿಲ್ಲ, ಸ್ನೇಹದ ಜಗುಲಿಗಳೇ.. ಒಟ್ಟಾರೆ ಸುದ್ದಿ- ಸಾಹಿತ್ಯಗಳ ಹಾದಿಗೆ ಎರಡು ದಶಕಗಳು ಸಂದಿದೆ, ಈ ನಡುವಿನ ಸಮಸ್ಯೆಗಳು ಹತ್ತಾರು ಪುಸ್ತಕಗಳ ರಚನೆಗೆ ಹಾಗೂ ಸಾರಸ್ವತಾ ಲೋಕದಲ್ಲಿ ಅರ್ಪಣೆಗೆ ಸ್ಪೂರ್ತಿ ತುಂಬಿದೆ, ರಾಜ್ಯದ ಉದ್ದಗಲದಲ್ಲಿನ ಸಾಕಷ್ಟು ಸಮಾಜಪರ ಕಾರ್ಯಕ್ರಮಗಳಿಗೆ ಆಹ್ವಾನಿತನಾಗುತ್ತಿದ್ದೇನೆ, ಸುದ್ದಿ ಲೋಕದ ವಿಸ್ತಾರತೆಗೆ ಮತ್ತಷ್ಟು ಪ್ರಯತ್ನ ಮಾಡುತ್ತಲೇ ಇದ್ದೇನೆ, “ಬರೆಯುತ್ತಾರೆ ಗಾರಾ ಶ್ರೀನಿವಾಸ್” ಎನ್ನುವ ಅಂಕಣದ ಮೂಲಕ ಹಲವಾರು ಶ್ರಮಜೀವಿಗಳನ್ನು, ಸಮಾಜಪರ ಚಿಂತಕರನ್ನು, ಪ್ರಗತಿಭೆಗಳನ್ನು, ಜಾಗೃತ ಅರಿವುಗಳ ಲೇಖನಗಳನ್ನು ಸಮಾಜಮುಖಿಯಾಗಿ ಬರೆದು ಬಿತ್ತರಿಸುತ್ತಿದ್ದೇನೆ, ಹೀಗೆ ಬರೆದ ಲೇಖನಗಳನ್ನು ಶಾಶ್ವತೀಕರಣಗೊಳಿಸುವ ಮಹತ್ತರವಾದ ಹೆಜ್ಜೆಗಳಿಟ್ಟು ಅದನ್ನು ಕೃತಿಗೊಳಿಸಿ ಅದಕ್ಕೊಂದು “ಮೈಲಿಗಲ್ಲು” ಎಂದು ನಾಮಾಂಕಿತಗೊಳಿಸಿದ್ದೇನೆ, ಅಲ್ಲದೆ ಇದೇ ಲೇಖನಗಳನ್ನು ವಾಚನಗಳ ಮೂಲಕ ದೃಶ್ಯಮಾಧ್ಯಮದ ಅವತರಣಿಕೆಯಲ್ಲಿ “ಯೂ ಟ್ಯೂಬ್” ನಲ್ಲಿ ಹಾಗೂ ಇತರೇ ಸಾಮಾಜಿಕ ಜಾಲತಾಣದ ಅಪ್ಲಿಕೇಶನ್ ಮೂಲಕ ಪ್ರಚುರಗೊಳಿಸುವ ಎಲ್ಲಾ ಕೈಂಕರ್ಯಗಳಿಗೂ ಮುಂದಾಗಿದ್ದೇನೆ. ಕೊನೆಯದಾಗಿ ಸಾಮಾಜಿಕ ಹಿತಚಿಂತನೆಗಳೊತ್ತು ವಿದ್ಯಾರ್ಥಿಯಾಗಿದ್ದೇನೆ, ಸೇವಾಮನೋಭಾವದಿ ಸಾಗುವುದಕ್ಕಾಗಿ ಹಾಗೂ ಕಲಿಯುವಿಕೆಗಾಗಿ “ಜೆಸಿಐ (ಜ್ಯೂನಿಯರ್ ಛೇಂಬರ್ ಇಂಟರ್ ನ್ಯಾಷನಲ್) ಸಂಸ್ಥೆಯನ್ನು ಆಯ್ಕೆ ಮಾಡಿಕೊಂಡು ಇಲ್ಲಿ ತನಗೆ ತಾನೇ ಅಂಕುಶವನ್ನು ತಿವಿದುಕೊಂಡು ಸಾಗುತ್ತಿದ್ದೇನೆ. ದಿನದ ಪೂರಾ ಸಮಯಗಳು ಚಿಂತನೆ, ಬರಹ, ಸೇವೆ. ಪುಸ್ತಕ, ಸುದ್ದಿಲೋಕದ ವಿಸ್ತಾರತೆ, ನಿಷ್ಕಲ್ಮಶ ಜನಸೇವಾ ಕಾರ್ಯಕ್ರಮ, ಸಮಾಜಕ್ಕೆ ಯುವನಾಯಕರ ನಿರ್ಮಾಣ, ಇದರ ಜೊತೆಗೆ ಕುಟುಂಬದ ಸಖ್ಯದಲ್ಲಿಯೇ ಮಿಂದು ಹೋಗಿರುವ ನನಗೆ ಎಲ್ಲಿದೆ ಸಮಯ ಅನರ್ಥ ನಾದಕ್ಕಾಗಿ. ಖಂಡಿತವಾಗಿಯೂ ಇಲ್ಲ, ನನಗಾವ ಆಹಂಕಾರವೂ ಇಲ್ಲ, ಅಸೂಯೆಗಳು ಜಿಜ್ಞಾಸೆಗಳೂ ಇಲ್ಲ, ಹೇಳಿರುವ ಎಲ್ಲಾ ಸಾಲುಗಳು ಅತಿರಂಜನೆಗಾಗಿ ಬಳಸಿದ ಸಾಲುಗಳಲ್ಲ ಅವೆಲ್ಲವೂ ನೋವುಂಡು ರುಧಿರದನಿಗಳ ತೊಟ್ಟಿಕ್ಕಿಸುತ್ತಲೇ ಸಾಗಿಬಂದ ವಾಸ್ತವ ಸಾಲುಗಳು, ಎರಗಿ ಬಂದ ಎಲ್ಲಾ ಸಮಸ್ಯೆಗಳು ಕಂಗಳಲ್ಲಿ ಬಿಸಿನೀರು ಬತ್ತಿಸಿದೆ ನಿಜ ಆದರೆ ಯಶಸ್ಸಿನೆಡೆ ತನಗೊತ್ತಿಲ್ಲದಂತೆ ಸಾಗಿಸಿದೆ ಎನ್ನುವುದು ಗಟ್ಟಿತನ ಎನ್ನಬೇಕೋ..? ಪವಾಡಸದೃಶ್ಯ ಎನ್ನಬೇಕೋ ..? ಗೊತ್ತಿಲ್ಲ, ಆತ್ಮದ ಗುರು ಎಲ್ಲಿಯವರೆಗೆ ಬಲದಿ ಇರುತ್ತಾನೋ ಅಲ್ಲಿಯವರೆಗೂ ಸಮಸ್ಯೆಗಳೇ ರಕ್ಷಾ ಕವಚವಾಗಿರುತ್ತದೆ ಎಂದು ಈ ಲೇಖನದ ಕೊನೆಯ ಸಾಲನ್ನು ಇಲ್ಲಿ ಬರೆಯುತ್ತಿದ್ದೇನೆ.
ಇನ್ನೂ ಈ ವರುಷದಲ್ಲಿ ನಡೆಯುತ್ತಿರುವ ಬಲು ಸವಾಲುಗಳ “ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ “ಕಸಾಪ” ಚುನಾವಣೆಯಲ್ಲಿ ಜಿಲ್ಲಾಧ್ಯಕ್ಷರ ಚುನಾವಣೆಗೆ ಸ್ಪರ್ಧಿಸಿದ್ದೇನೆ, ಗೆಲ್ಲುವ ನಿರೀಕ್ಷೆಗಳು ಬಲಗೊಂಡಿವೆ, ಗೆದ್ದರೆ ಜಾತಿ-ಮತ-ಪಂಥಗಳಿಗೆ ಅವಕಾಶ ನೀಡದೆ ಒಂದು ಲಕ್ಷಕ್ಕೂ ಅಧಿಕ ಕಸಾಪ ಸದಸ್ಯರನ್ನಾಗಿಸುತ್ತೇನೆ, ಈ ಮೂಲಕ ಪ್ರತಿ ಸೂರಿನ ಜಗುಲಿಗಳು ಸಾಹಿತ್ಯ ವೇದಿಕೆಯನ್ನಾಗಿ ರೂಪಿಸಲು ಪಣತೊಡುತ್ತೇನೆ, ಸೋಲು ಎದುರಾದರೂ ಸರಿ, ಈ ಸೋಲು ಕೂಡ ದೊಡ್ಡದೊಂದು ಸಾಹಿತ್ಯ ಚಳುವಳಿಯಲ್ಲಿಯೇ ಹುಟ್ಟು ಹಾಕಿ ಚಳುವಳಿಯ ಮುಖೇನ ಅನೇಕ ಪ್ರತಿಭೆಗಳಿಗೆ ಜೀವದುಂಬುವ ಕೆಲಸ ಮಾಡುತ್ತದೆ ಈ ಕಾರಣಕ್ಕಾಗಿಯೇ ಈ ಭಾರಿ ಕಸಾಪ ಚುನಾವಣೆಯ ಅಖಾಡದಲ್ಲಿದ್ದೇನೆ ಎಂದು ಅಂಬೋಣಿಸುತ್ತಾ. ಸಮಸ್ಯೆಗಳಿಗೆ ಹೆದರದಿರಿ ಅವುಗಳೇ ಯಶಸ್ಸಿನ ಗುಟ್ಟು ಎಂದು ತಿಳಿಯಿರಿ ಎಂದು ಈ ಲೇಖನಕ್ಕೆ ವಿರಾಮ ನೀಡುತ್ತಿದ್ದೇನೆ.
ಲೇಖನ: ಗಾರಾ. ಶ್ರೀನಿವಾಸ್

CCTV SALES & SERVICE
9880074684
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153