14/4/2022 ಗುರುವಾರ ಬೆಳಿಗ್ಗೆ, ಶಿವಮೊಗ್ಗ ನಗರದ, ಬಿ.ಹೆಚ್. ರಸ್ತೆಯ ಗಾಡಿಕೊಪ್ಪ ಸರ್ಕಲ್ ನಲ್ಲಿ ಇರುವ ಶಿವಮೊಗ್ಗ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಒಕ್ಕೂಟದ ಕಛೇರಿಯಲ್ಲಿ, ಡಾ. ಭೀಮ್ ರಾವ್ ಅಂಬೇಡ್ಕರ್ ರವರ 131ನೇ ಜನ್ಮದಿನಾಚರಣೆಯನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಶ್ರೀಯುತ ಚನ್ನವೀರಪ್ಪ ಗಾಮನಗಟ್ಟಿ ರವರು, ಎಲ್ಲಾ ಧರ್ಮದ, ವರ್ಗದ, ಬೀದಿ ಬದಿ ವ್ಯಾಪಾರಸ್ಥರು ಒಗ್ಗಟ್ಟಿನಿಂದ ಸೌಹಾರ್ದದಿಂದ ವ್ಯಾಪಾರ ವ್ಯಹಿವಾಟುಗಳು ಮಾಡಬೇಕು, ಎಲ್ಲಾ ಮನುಷ್ಯರಿಗೂ ಅತಿಯಾಸೆ ಸಹಜ ಆದರೆ ದುರಾಸೆ ಇರಬಾರದು, ಇಂದು ನಗರದಲ್ಲಿ ಕೆಲವು ಬೀದಿ ಬದಿ ವ್ಯಾಪಾರಿಗಳ ದುರಾಸೆಯಿಂದ ಪಾಲಿಕೆ ನೀಡಿದ ಜಾಗಕ್ಕಿಂತ ಮಿತಿಮೀರಿ ತನ್ನ ಬಾವುಗಳನ್ನು ಚಾಚಿ ಪುಟ್ ಪಾತ್ ಆಕ್ರಮಿಸಿಕೊಂಡಿರುವರು, ಸಾರ್ವಜನಿಕರ ದೂರಿನ ಅನ್ವಯ ಪಾಲಿಕೆ ತೆರವು ಕಾರ್ಯಾಚರಣೆ ಆರಂಭಿಸಿದೆ, ಕಾನೂನು ನಿಯಮಗಳನ್ನು ಉಲ್ಲಂಘಿನೆ ಮಾಡುವ ವ್ಯಾಪಾರಿಗಳ ಬೆಂಬಲಕ್ಕೆ ಸಂಘಟನೆ ಬರುವುದಿಲ್ಲ.

ವಿಭಿನ್ನ, ವಿಶಿಷ್ಟ ಆಹಾರ ತಯಾರಿಸುವ, ಬೀದಿ ಬದಿ ವ್ಯಾಪಾರಿಗಳಿಗೆ ಉಚಿತ ಕಾಶ್ಮೀರ್ ಪ್ರವಾಸ ವಿದೆ, ಹೋಗುವಂತವರು, ತಮ್ಮ ಹೆಸರನ್ನು ನೀಡಿ, ಹಾಗೂ ತಮ್ಮ ವ್ಯಾಪಾರದ ಸ್ಥಳದಲ್ಲಿ ಸ್ವಚ್ಛತೆ ಇರಲಿ, ಕೊರಳಿನಲ್ಲಿ ಪಾಲಿಕೆ ನೀಡಿದ ಗುರುತಿನ ಚೀಟಿ ಇರಲಿ, ಎಂದು ತಿಳಿಸಿದರು.

ಸಂವಿಧಾನ ಶಿಲ್ಪಿ, ಡಾ. ಬಿ.ಆರ್. ಅಂಬೇಡ್ಕರ್ ರವರು, ದಿನಾ ದಲಿತರ, ಶೋಷಿತರ ಪರವಾಗಿ, ಸೌಲಭ್ಯಗಳ ವಂಚಿತರ ಏಳಿಗೆಗಾಗಿ, ಭವ್ಯ ಭಾರತ ನಿರ್ಮಾಣಕ್ಕೆ ಶ್ರಮಿಸಿದ್ದರು, ಇಂತಹ ಮಹಾನ್ ನಾಯಕರ ಜಯಂತಿಯನ್ನು ಕೇವಲ ಹಾರವ ಹಾಕಿ, ಪುಷ್ಪಾರ್ಚನೆ ಮಾಡಿ ಭಾಷಣದೊಂದಿಗೆ ಮುಕ್ತಾಯ ವಾಗಬಾರದು, ರೋಗಿಗಳಿಗೆ ರಕ್ತದಾನ, ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ಪಾರ್ಕ್, ದೇವಾಲಯ ಇಂತಹ ಸ್ಥಳಗಳನ್ನು ಸ್ವಚ್ಛತೆ ಮಾಡಬೇಕು, ಹಾಗೂ ನಾಯಕರ ಜನ್ಮದಿನದಂದು ಒಂದು ಗಿಡವ ನೆಟ್ಟು ಪಾಲನೆ ಪೋಷಣೆ ಮಾಡುವುದರ ಮೂಲಕ ಬಿಸಿಲಿನ ತಾಪಮಾನ ಕಡಿಮೆ ಮಾಡಬೇಕು ಎಂದು ಹೇಳಿದರು.

ಭಾವಚಿತ್ರಕ್ಕೆ ಪುಷ್ಪಾರ್ಚನೆ ನಂತರ ಅಶೋಕ ನಗರ, ನಾಗರಾಜ ಪುರ ಬಡಾವಣೆಯ ಸುವರ್ಣ ಸಾಂಸ್ಕೃತಿಕ ಭವನಕ್ಕೆ ಹೋಗುವ ರಸ್ತೆಯಲ್ಲಿ ಡಾ.ಭೀಮ್ ರಾವ್ ಅಂಬೇಡ್ಕರ್ ರವರ 131 ವರ್ಷದ ಜನ್ಮದಿನದ ಪ್ರಯುಕ್ತ ಸಸಿಯ ನೆಡಲಾಯಿತು, ಈ ಸಾಲಿನಲ್ಲಿ ನೆಟ್ಟಂತಹ ಗಿಡಗಳಿಗೆ ಒಕ್ಕೂಟದ ಸದಸ್ಯರಿಂದ ಪಾತಿಮಾಡಲಾಯಿತು.

ಈ ಸಂದರ್ಭದಲ್ಲಿ ಶ್ರೀ ಮಣಿ ಗೌಂಡರ್, ಶ್ರೀ ಮತಿ ರಂಗಮ್ಮ, ಶ್ರೀಮತಿ ಗೌರಮ್ಮ, ಶ್ರೀ ನಾಗರಾಜ್, ಶ್ರೀ ರವಿ, ಶ್ರೀ ಮೂರ್ತಿ ಇನ್ನೂ ಇತರರೂ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…