ಶಿವಮೊಗ್ಗ ನಗರದಲ್ಲಿ ಪ್ರಮುಖ ವಿವಿಧ ಏರಿಯಾಗಳಿಗೆ ಜಿಲ್ಲಾಧಿಕಾರಿ ಡಾ.ಅರ್.ಸೆಲ್ವಮಣಿ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಹಾಗೂ ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡ ಭೇಟಿ ನೀಡಿ ಪುಟ್ ಪಾತ್ ಆಕ್ರಮಿಸಿಕೊಂಡ ಎಲ್ಲರ ಸಾಮಾಗ್ರಿಯನ್ನು ತೆರವೂ ಮಾಡಿಸಿದರು.

ಮಹಾನಗರ ಪಾಲಿಕೆ ಆಯುಕ್ತರಾದ ಮಾನ್ಯ ಶ್ರೀ ಮಾಯಾಣ್ಣ ಗೌಡ ರವರು ಮಹಾನಗರ ಪಾಲಿಕೆಯ ಪಟಣ್ಣ ಮಾರಾಟ ಸಮಿತಿ ಸಭೆಯಲ್ಲಿ, ಸಾರ್ವಜನಿಕರಿಂದ ಪುಟ್ ಪಾತ್ ಆಕ್ರಮಿಸಿಕೊಂಡಿರುವರ ವಿರುದ್ದ ಬಹಳಷ್ಟು ದೂರುಗಳು ಬಂದಿವೆ. ಪುಟ್ ಪಾತನ್ನು ಅಕ್ರಮಿಸಿಕೊಳ್ಳುವ ಯಾರೆ ಆಗಲಿ ಅಂಗಡಿ ಮಾಲೀಕರಾಗಲಿ ಅವರ ಜಾಗದ ವ್ಯಾಪ್ತಿ ಮೀರಿ ಪುಟ್ ಪಾತ್ ಆಕ್ರಮಿಸಿಕೊಂಡರೇ ಒಮ್ಮೆ ತೆರವು ಗೊಳಿಸಲು ಹೇಳಿ ಮಾರನೇ ದಿನ ಅದೆ ರೀತಿ ಪುಟ್ ಪಾತನ್ನು ಆಕ್ರಮಿಸಿಕೊಂಡಿರುವುದು ಪುನರಾವರ್ತನೆಯಾದರೆ, ಪುಟ್ ಪಾತ್ ಅಕ್ರಮಿಸಿಕೊಂಡಿರುವ ಸಾಮಾಗ್ರಿಯ ವಶಪಡಿಸಿಕೊಂಡು ಅವರ ಅಂಗಡಿ ಲೈಸೆನ್ಸ್ ಹಾಗೂ ಬೀದಿಬದಿ ವ್ಯಾಪಾರಿಗಳ ಕಾರ್ಡ್ ರದ್ದು ಮಾಡಲು ಹೇಳಿದ್ದರು.

ಅದರಂತೆ ಮಹಾನಗರ ಪಾಲಿಕೆಯ ಸಿಬ್ಬಂದಿಗಳು ನಗರದ ವಿವಿಧ ಬಡಾವಣೆಗಳಲ್ಲಿ, ಒಂದು ವಾರಗಳಿಂದ ಸದ್ದಿಲ್ಲದೆ, ಪುಟ್ ಪಾತನ್ನು ಅಕ್ರಮಿಸಿಕೊಂಡವರಿಗೆ ತೆರವಿಗೆ ಎಚ್ಚರಿಗೆ ನೀಡುತ್ತ ಬಂದು ನಂತರ ತೆರವು ಮಾಡದೆ ಇರುವವರಿಗೆ ತೆರವೂ ಮಾಡುತ್ತಿರುವರು. ಪಾಲಿಕೆ ಅಧಿಕಾರಿಗಳು ಹೋದ ನಂತರ ಮತ್ತೆ ಯಾತವತ್ತಾಗಿ ವ್ಯಾಪಾರಿಗಳು ವ್ಯಾಪಾರ ಮಾಡುತ್ತಿದ್ದರು.

ಪುಟ್ ಪಾತ್ ಅತಿಕ್ರಮಿಗಳ ವಿರುದ್ದ ತೆರವಿನ ಕಾರ್ಯಾಚರಣೆಗೆ ಜಿಲ್ಲಾಧಿಕಾರಿಗಳು, ಜಿಲ್ಲಾರಕ್ಷಣಾಧಿಕಾರಿಗಳು, ಹಾಗೂ ನಗರದ ಆಯುಕ್ತರು ಅತಿಕ್ರಮಣರ ಕಾರ್ಯಾಚರಣೆಗೆ ಇಳಿದರೂ. ಶಿವಪ್ಪನಾಯಕ ವೃತ್ತದಲ್ಲಿ ಬಂದು ಇಳಿಯುತ್ತಿದ್ದಂತೆ, ತೆರವಿಗೆ ಬಂದ ಸುದ್ದಿ ರಸ್ತೆಗೆ ಹರಡಿದ ಸಾಮಾಗ್ರಿ ವ್ಯಾಪಾರಿಗಳ ಕಿವಿಗೆ ಬಿದ್ದೊಡನೆ ಕೆಲವೆ ಕ್ಷಣದಲ್ಲಿ ನಿಶದ್ದ ವಾತವರಣ, ರಸ್ತೆಯಲ್ಲಿ ಎನೂ ಇಲ್ಲದಂತೆ ವಿಶಾಲವಾಗಿ ಕಾಣುತ್ತಿತ್ತು.

ಜಿಲ್ಲಾಧಿಕಾರಿಯಾದ ಸೇಲ್ವಮಣಿ ರವರು ಅಂಗಡಿಯವರು ತಮ್ಮ ಜಾಗದ ವ್ಯಾಪ್ತಿ ಮಿರಿ ರಸ್ತೆಗೆ ಬಂದವರಿಗೆ ಅಂಗಡಿ ಲೈಸೆನ್ಸ್ ರದ್ದು ಮಾಡಲು ಹೇಳಿದರು.ಪುಟ್ ಪಾತಿನ ವರೆಗೂ ಅಂಗಡಿ ಬೊರ್ಡ್ ಮತ್ತು ನೆರಳಿಗೆ ತಗಡಿನ ಶಿಟ್ ಹಾಕಿದವರಿಗೆ ತೆರವಿಗೆ ಸೂಚಿಸಿದರು.

ಜಿಲ್ಲಾ ರಕ್ಷಣಾಧಿಕಾರಿಗಳಾದ ಜಿ.ಕೆ.ಮಿಥುನ್ ಕುಮಾರ್ ರವರು ರಸ್ತೆಗೆ ಅಡ್ಡಾದಿಡ್ಡಿ ಇಟ್ಟ ವಾಹನಗಳನ್ನು ಟೈಗರ್ ಗೆ ಹಾಕಲು ಹೇಳಿದರು‌. ನೋ ಪಾರ್ಕೀಂಗ್ ನಲ್ಲಿ ಬೇಜವಾಬ್ದಾರಿಯಾಗಿ ನಿಲ್ಲಿಸಿದ ವಾಹನಗಳಿಗೆ ಮತ್ತು ಒನ್ ವೇಯಲ್ಲಿ ಬಂದ ವಾಹನಗಳಿಗೆ ಸ್ಥಳದಲ್ಲೆ ದಂಡ ವಿಧಿಸಲಾಯಿತು‌.

ಗಾಂಧಿ ಬಜಾರಿನಿಂದ ರಾಮಣ್ಣ ಶ್ರೇಷ್ಟಿ ಪಾರ್ಕ್, ಚೋರ್ ಬಜಾರ್, ಸಿದ್ದಯ್ಯ ವೃತ್ತ, ಎಂಕೆಕೆ ರಸ್ತೆ, ಶಿವಪ್ಪನಾಯಕ ವೃತ್ತ, ಬಸವೇಶ್ವರ ಸ್ಕೂಲ್ ಮುಂಭಾಗ ವೀರಶೈವ ಕಲ್ಯಾಣ ಮಂಟಪ, ಇನ್ನೂ ಹಲವು ಕಡೆ ತೆರವು ಕಾರ್ಯಾಚರಣೆ ಮಾಡಿದರು‌.

ಈ ಸಂದರ್ಭದಲ್ಲಿ ಸಂಚಾರಿ ಪೊಲೀಸ್ ಸಿ ಪಿ ಐ ಸಂತೋಷ್ ,ಮಹಾನಗರ ಪಾಲಿಕೆಯ ಸಿಬ್ಬಂದಿಗಳು, ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಹಾಗೂ ಇನ್ನೂ ಇತರರೂ ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…