ಶಿವಮೊಗ್ಗ: ಆರ್ಥಿಕವಾಗಿ ಹಿಂದುಳಿದ ಹಾಗೂ ಅಗತ್ಯ ಇರುವವರಿಗೆ ಮಾಡಿದ ಸೇವೆ ಸಾರ್ಥಕವಾಗುತ್ತದೆ ಎಂದು ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಅಧ್ಯಕ್ಷೆ ಸುಮತಿ ಕುಮಾರಸ್ವಾಮಿ ಹೇಳಿದರು.

ರಾಜೇಂದ್ರ ನಗರದ ರೋಟರಿ ಶಾಲೆಯ ರೋಟರಿ ಸಭಾಂಗಣದಲ್ಲಿ ಸಮುದಾಯ ಸೇವೆಗಳ ಅಡಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೋಟರಿ ಶಿವಮೊಗ್ಗ ಪೂರ್ವ, ಇನ್ನರ್ ವ್ಹೀಲ್ ಶಿವಮೊಗ್ಗ ಪೂರ್ವ ಸಂಸ್ಥೆ ಸಹಯೋಗದಲ್ಲಿ ವ್ಹೀಲ್ ಚೇರ್ ಕೊಡುಗೆ ನೀಡಿ ಮಾತನಾಡಿದರು.
ಸೇವಾ ಸಂಸ್ಥೆಗಳು ಅರ್ಹ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯ ಒದಗಿಸುವ ಕೆಲಸ ಮಾಡಬೇಕು. ನಾವು ಮಾಡಿದ ಸೇವೆಯು ಸಾರ್ಥಕವಾಗುತ್ತದೆ. ಅವಶ್ಯಕತೆ ಇರುವ ಸಾರ್ವಜನಿಕರಿಗೆ ಅನುಕೂಲ ಆಗುತ್ತದೆ ಎಂದು ತಿಳಿಸಿದರು.

ಇನ್ನರ್ ವ್ಹೀಲ್ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಮಧುರಾ ಮಹೇಶ್ ಮಾತನಾಡಿ, ಇನ್ನರ್ ವ್ಹೀಲ್ ಸಂಸ್ಥೆಯು ಸ್ನೇಹ ಹಾಗೂ ಸೇವೆಯ ಆಶಯದಿಂದ ಆರಂಭಗೊAಡು ಕೆಲಸ ಮಾಡುತ್ತಿದ್ದು, ನಮ್ಮ ಸಂಸ್ಥೆಯು ಈಗಾಗಲೇ ಅನೇಕ ರೀತಿಯಲ್ಲಿ ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ ಎಂದು ಹೇಳಿದರು.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಮಾತನಾಡಿ, ಮನುಕುಲದ ಸೇವೆ ದೇವರಿಗೆ ಸಮಾನ. ಎರಡು ಸಂಸ್ಥೆಯವರು ಮಾಡಿದ ಸೇವೆಯನ್ನು ಫಲಾನುಭವಿಗಳು ಶಾಶ್ವತವಾಗಿ ನೆನಪಿಸಿಕೊಳ್ಳುತ್ತಾರೆ ಎಂದು ತಿಳಿಸಿದರು.
ಆರ್ಥಿಕವಾಗಿ ದುರ್ಬಲ, ವಯೋವೃದ್ಧ ಗಾರೆ ಕೆಲಸದ ಹನುಮಂತಪ್ಪ ಅವರಿಗೆ ವೀಲ್ ಚೇರ್ ವಿತ್ ಕಮೋಡ್ ವಿತರಿಸಲಾಯಿತು.

ಸಮಾರಂಭದಲ್ಲಿ ಶ್ರೀ ರಂಜನಿ ದತ್ತಾತ್ರಿ, ಆಶಾ ಶ್ರೀಕಾಂತ್, ವೀಣಾ ಹರ್ಷ, ಬಿಂದು ವಿಜಯಕುಮಾರ್, ರಾಜೇಶ್ವರಿ ಪ್ರತಾಪ್, ಸುಮಾ ರವಿ, ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಕುಮಾರಸ್ವಾಮಿ, ವೇದಾ ನಾಗರಾಜ್, ಜಯಂತಿ ವಾಲಿ, ನಮಿತಾ, ಜ್ಯೋತಿ ಸುಬ್ಬೇಗೌಡ, ರೋಟರಿ ಶಿವಮೊಗ್ಗ ಪೂರ್ವ, ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಸದಸ್ಯರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…