ಶಿವಮೊಗ್ಗದ ಲಕ್ಷ್ಯ ಶಾಲೆಯ ಮಕ್ಕಳು ಹಾಗೂ ಶಿಕ್ಷಕರಿಂದ ಶ್ರೀ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಗಂಧದ ಗುಡಿ ಸಿನಿಮಾ ವೀಕ್ಷಣೆ ಮಾಡಿದರು.ಲಕ್ಷ ಶಾಲೆಯ ವತಿಯಿಂದ 112 ಮಕ್ಕಳಿಗೆ ಗಂಧದಗುಡಿ ಚಿತ್ರವನ್ನು ನೋಡಲು ಅವಕಾಶ ಮಾಡಿಕೊಟ್ಟಿದ್ದಾರೆ.
ಗಂಧದ ಗುಡಿ ಚಿತ್ರ ವೀಕ್ಷಣೆ ಮಾಡಿದ ಮಕ್ಕಳು ಖುಷಿಪಟ್ಟರು.ಈ ಸಂದರ್ಭದಲ್ಲಿ ಚಿತ್ರ ವೀಕ್ಷಣೆ ಮಾಡಲು ಸಹಕರಿಸಿದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಮಧು ಅವರಿಗೆ ಶಾಲೆಯ ಸಿಬ್ಬಂದಿಗಳು ಅಭಿನಂದನೆ ತಿಳಿಸಿದ್ದಾರೆ.ಶಾಲೆಯ ಮುಖ್ಯ ಶಿಕ್ಷಕರಾದಂತಹ ಅಶ್ವಿನ್ ಹಾಗೂ ಶಾಲೆಯ ಶಿಕ್ಷಕಿಯರು ಆಗಮಿಸಿದ್ದರು.