ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ.ಬಿ. ಅಶೋಕ ನಾಯ್ಕ ರವರು ವಿವಿಧ ಕಾಮಗಾರಿಗೆ ಚಾಲನೆ ನೀಡಿದರು.
ಮಂಡಘಟ್ಟ ಗ್ರಾ.ಪಂ, ವ್ಯಾಪ್ತಿಯ ಕುರಂಬಳ್ಳಿ, ರಾಗಿಹೊಸಹಳ್ಳಿ, ದ್ಯಾವಿನಕೆರೆ ಗ್ರಾಮದಲ್ಲಿ 1.18.37 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು, ಗ್ರಾಮಸ್ಥರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ರತ್ನಾಕರ ಶೆಣೈ, ಮಾಜಿ ಜಿ.ಪಂ ಸದಸ್ಯರುಗಳಾದ ತಮ್ಮಡಿಹಳ್ಳಿ ನಾಗರಾಜ್, ಪ್ರೇಮ ಸುಧಾಕರ್, ಸಿಂಗನಹಳ್ಳಿ ಸುರೇಶ್, ಅರುಣ್ ಚುನಾಯಿತ ಪ್ರತಿನಿಧಿಗಳು, ಪಕ್ಷದ ಮುಖಂಡರು, ಪ್ರಮುಖರು, ಕಾರ್ಯಕರ್ತರುಗಳು ಉಪಸ್ಥಿತರಿದ್ದರು.