ಭದ್ರಾವತಿ ನ್ಯೂಸ್…
ಭದ್ರಾವತಿಯ ಸರ್ ಎಂ ವಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಜಯ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಹಾಗೂ ಭದ್ರಾವತಿ ತಾಲೂಕು ಘಟಕಗಳ ವತಿಯಿಂದ ಶಟಲ್ ಪಂದ್ಯಾವಳಿಯನ್ನು ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷರಾದ ಎಸ್ ಕೆ ರಘುವೀರ್ ಸಿಂಗ್ ಮತ್ತು ಶಾಸಕರಾದ ಬಿ ಕೆ ಸಂಗಮೇಶ್ವರವರು ಉದ್ಘಾಟಿಸಿದರು.
ಕನ್ನಡ ರಾಜ್ಯೋತ್ಸವ ಅಂಗವಾಗಿ ಜಯ ಕರ್ನಾಟಕ ಜನಪರ ವೇದಿಕೆಯ ವತಿಯಿಂದ ಭದ್ರಾವತಿಯಲ್ಲಿ ಹೊನಲು ಬೆಳಕಿನ ಶಟಲ್ ಬ್ಯಾಟ್ಮಿಟನ್ ಕ್ರೀಡೆಯ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.ಕ್ರೀಡೆಗೆ ಉತ್ತೇಜನ್ನು ನೀಡುವ ಸಲುವಾಗಿ ಈ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ರಘುವೀರ್ ಸಿಂಗ್ ಹೇಳಿದರು.
ಈ ಸಂದರ್ಭದಲ್ಲಿ ಭದ್ರಾವತಿ ತಾಲೂಕು ದಂಡಾಧಿಕಾರಿಗಳಾದ ಆರ್ ಪ್ರದೀಪ್ ಕುಮಾರ್ ರವರು ಶಾಸಕರ ಪುತ್ರರಾದ ಬಿಎಸ್ ಗಣೇಶ್, ಭದ್ರಾವತಿ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುದೀಪ್ ಕುಮಾರ್ ,ಕಾಂಗ್ರೆಸ್ ಮುಖಂಡರಾದ ಬಾಲಕೃಷ್ಣ ಮಾಜಿನಗರ ಸಭಾ ಸದಸ್ಯರಾದ ಫ್ರಾನ್ಸಿಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹುಲಿಗಿ ಕೃಷ್ಣ , ಜಿಲ್ಲಾ ಮುಖಂಡರಾದ ಪ್ರಮೋದ್, ಸಿದ್ದಾರ್ಥ ಅಂಧರ ಕೇಂದ್ರದ ವ್ಯವಸ್ಥಾಪಕರಾದ ಶಿವಬಸಪ್ಪ ತಾಲೂಕು ಘಟಕ ಅಧ್ಯಕ್ಷರಾದ ಜಗದೀಶ್ , ಸುಬ್ಬು ಪ್ರಸನ್ನ ಮತ್ತು ಜಯ ಕರ್ನಾಟಕ ಜನಪರ ವೇದಿಕೆಯ ಹಲವಾರು ಮುಖಂಡರು ಭಾಗವಹಿಸಿ ಪಂದ್ಯಾವಳಿಯನ್ನು ಯಶಸ್ವಿಗೊಳಿಸಿದರು.