ಬೆಂಗಳೂರಿನಲ್ಲಿ ದಕ್ಷಿಣ ಭಾರತದ ಹೋಟೆಲ್ ಮಾಲೀಕರ ಸಂಘದ ಆಶ್ರಯದಲ್ಲಿ ಕಾರ್ಯಕ್ರಮವು ಪ್ರತಿ ವರ್ಷದಂತೆ ಈ ವರ್ಷವೂ ಸಹ ಅದ್ದೂರಿಯಾಗಿ ನಡೆಯಿತು.ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಎಮ್.ಆರ್.ಜಿ. ಗ್ರೂಪ್ ಚೇರ್ಮನ್ ಶ್ರೀ ಕೆ ಪ್ರಕಾಶ್ ಶೆಟ್ಟಿ ಇವರನ್ನು ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ಸನ್ಮಾನಿಸಿದರು. ಶ್ರೀ ಪ್ರಕಾಶ್ ಶೆಟ್ಟಿ ರವರು ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ಮುಂಚೂಣಿ ಸ್ಥಾನದಲ್ಲಿ ನಿಲ್ಲುತ್ತಾರೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದರು.ಕಾರ್ಯಕ್ರಮದಲ್ಲಿ ಕರ್ನಾಟಕದ ಪ್ರವಾಸ ಉದ್ಯಮ ಸಚಿವರಾದ ಶ್ರೀ ಆನಂದ್ ಸಿಂಗ್ ಹಾಗೂ ತಮಿಳುನಾಡು ಮತ್ತು ಪಾಂಡಿಚರಿಗಳ ಪ್ರವಾಸೋದ್ಯಮ ಸಚಿವರು ಹಾಜರಿದ್ದರು.