ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ರಾಷ್ಟ್ರೀಯ ರಕ್ಷಾ ವಿಶ್ವ ವಿಧ್ಯಾಲಯ ಶಿವಮೊಗ್ಗ ರವರ ಸಹಯೋಗದೊಂದಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ನ ಅಧಿಕಾರಿ ಸಿಬ್ಬಂಧಿಗಳಿಗೆ ದಿನಾಂಕಃ 22-07-2024 ರಿಂದ 24-07-2024ರ ವರೆಗೆ ಒಟ್ಟು 03 ದಿನಗಳ ಕಾಲ ಹೊಸ ಅಪರಾಧಿಕ ಕಾನೂನುಗಳ ಕುರಿತು ತರಬೇತಿ ಕಾರ್ಯಾಗಾರವನ್ನು ಆಯೋಜಿಸಿದ್ದು ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಮುಕ್ತಾಯ ಸಮಾರಂಭವನ್ನು ಹಮ್ಮಿಕೊಂಡಿದ್ದು, ಶ್ರೀ ಮಿಥುನ್ ಕುಮಾರ್ ಜಿ. ಕೆ. ಪೊಲೀಸ್ ಅಧೀಕ್ಷಕರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿದ್ದು, ಶ್ರೀ ಮಂಜುನಾಥ ನಾಯಕ್, ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಶಿವಮೊಗ್ಗ ಜಿಲ್ಲೆ ರವರು ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿರುತ್ತಾರೆ.

ಶ್ರೀ ಮಂಜುನಾಥ ನಾಯಕ್, ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಶಿವಮೊಗ್ಗ ಜಿಲ್ಲೆ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಈ ಕೆಳಕಂಡಂತೆ ಮಾತನಾಡಿದರು.

1) ದಿನಾಂಕಃ 01-07-2024ರಿಂದ 03 ಹೊಸ ಅಪರಾಧಿಕ ಕಾನೂನುಗಳಾದ ಎ) ಭಾರತೀಯ ನ್ಯಾಯ ಸಂಹಿತೆ, ಬಿ) ಭಾರತೀಯ ನಾಗರೀಕ ಸುರಕ್ಷತಾ ಸಂಹಿತೆ ಮತ್ತು ಸಿ) ಭಾರತೀಯ ಸಾಕ್ಷ್ಯ ಅಧಿನಿಯಮ ಜಾರಿಗೆ ಬಂದಿದ್ದು, ಕಾನೂನು ಜಾರಿಗೊಳಿಸುವ ಕ್ಷೇತ್ರದಲ್ಲಿ ನಾವೆಲ್ಲರೂ ಕರ್ತವ್ಯ ನಿರ್ವಹಿಸುತ್ತಿದ್ದು, ಯಾವುದೇ ಕಾನೂನುಗಳನ್ನು ಜಾರಿಗೆ ತರುವ ಪೂರ್ವದಲ್ಲಿ ಆ ಕಾನೂನುಗಳ ಮೂಲ ಉದ್ದೇಶದ ಬಗ್ಗೆ ನಾವು ಸ್ಪಷ್ಟವಾಗಿ ತಿಳಿದಿರಬೇಕು, ಆಗ ಮಾತ್ರ ಕಾನೂನಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಸಾಧ್ಯವಿರುತ್ತದೆ.

2) ಈ ಮೊದಲು ನಾವು 1860ನೇ ಸಾಲಿನ ಐಪಿಸಿ ಕಾಯ್ದೆ, 1873ನೇ ಸಾಲಿನ ಸಿಆರ್.ಪಿಸಿ ಮತ್ತು 1872ನೇ ಸಾಲಿನ ಇಂಡಿಯನ್ ಎವಿಡೆನ್ಸ್ ಆಕ್ಟ್ ಅನ್ನು ಬಳಸುತ್ತಾ ಬಂದಿದ್ದು, ಆದರೆ ಪ್ರಸ್ತುತ ಸದರಿ ಮೂರು ಹಳೆ ಕಾನೂನುಗಳ ಬದಲಾಗಿ ಮೂರು ಹೊಸ ಕಾನೂನುಗಳು ಜಾರಿಗೆ ಬಂದಿರುತ್ತವೆ. ಬದಲಾವಣೆ ಎಂಬುದು ಕಾನೂನಿನ ಮೂಲಕ ಬಂದಾಗ ನಾವು ಕಡ್ಡಾಯವಾಗಿ ಹೊಂದಿಕೊಳ್ಳಬೇಕಿರುತ್ತದೆ.

3) ಪ್ರಕರಣಗಳ ತನಿಖೆ ಮಾಡುವ ಸಂದರ್ಭದಲ್ಲಿ ತನಿಖಾಧಿಕಾರಿಗಳು ಕಡ್ಡಾಯವಾಗಿ ಪಾಲನೆ ಮಾಡಬೇಕಾದ ನಿಯಮಗಳನ್ನು ತಪ್ಪದೇ ಪಾಲನೆ ಮಾಡಬೇಕು. ಆಗ ಮಾತ್ರ ನ್ಯಾಯಾಲಯದಲ್ಲಿ ಪ್ರಕರಣಗಳ ಖುಲಾಸೆ ಪ್ರಮಾಣ ಕಡಿಮೆಯಾಗಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ಸಾಧ್ಯವಿರುತ್ತದೆ ಎಂದು ಹೇಳಿದರು.

ಶ್ರೀ ಮಿಥುನ್ ಕುಮಾರ್ ಜಿ. ಕೆ. ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರವರು ಕಾರ್ಯಕ್ರಮವನ್ನು ಉದ್ದೇಶಿಸಿ ಈ ಕೆಳಕಂಡಂತೆ ಮಾತನಾಡಿದರು.

1) ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಈಗಾಗಲೇ ಹೊಸ ಕಾನೂನುಗಳ ಬಗ್ಗೆ ನ್ಯಾಯಾಂಗದ ಸಹಯೋಗದೊಂದಿಗೆ ಹಲವು ಬಾರಿ ತರಬೇತಿ ಕಾರ್ಯಾಗಾರವನ್ನು ನಡೆಸಲಾಗಿರುತ್ತದೆ. ಹೊಸ ಕಾನೂನುಗಳ ಜಾರಿ ಸಂದರ್ಭದಲ್ಲಿ ಉಂಟಾಗುವ ಗೊಂದಲಗಳ ಪರಿಹಾರ ಕಂಡುಕೊಳ್ಳಲು ಪುನರ್ಮನನ ತರಬೇತಿಗಳನ್ನು ಸಹಾ ಆಯೋಜಿಸಲಾಗುತ್ತದೆ.

2) ಒಂದು ಸದೃಡ ಮತ್ತು ಸಾರ್ವಭೌಮ ಸಮಾಜ ನಿರ್ಮಾಣವಾದ ನಂತರ ಹಳೆಯ ಕಾನೂನುಗಳ ಬದಲಾಗಿ, ತನ್ನದೇ ಆದ ಸದೃಡ ಕಾನೂನುಗಳನ್ನು ಜಾರಿಗೆ ತರುವುದು ಸಹಜವಾದ ಪ್ರಕ್ರಿಯೆಯಾಗಿರುತ್ತದೆ. ಆದ್ದರಿಂದ ಹೊಸ ಕಾನೂನುಗಳಿಗೆ ನಾವು ಹೊಂದಿಕೊಳ್ಳುವುದು ಅನಿವಾರ್ಯವಾಗಿರುತ್ತದೆ.

3) ಘನ ನ್ಯಾಯಾಲಯದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗ ಬೇಕಿದ್ದಲ್ಲಿ, ಪ್ರಕರಣಗಳ ತನಿಖೆಯ ಸಂದರ್ಭದಲ್ಲಿ ತನಿಖಾಧಿಕಾರಿಗಳು ಪಾಲನೆ ಮಾಡಬೇಕಾದ ತನಿಖಾ ಕ್ರಮಗಳನ್ನು ತಪ್ಪದೇ ಪಾಲನೇ ಮಾಡಬೇಕಿರುತ್ತದೆ. ಈ ನಿಟ್ಟಿನಲ್ಲಿ ತನಿಖಾಧಿಕಾರಿಗಳು ಮತ್ತು ತನಿಖಾ ಸಹಾಯಕರು ಗಮನ ಹರಿಸಬೇಕಿರುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ರಾಷ್ಟ್ರೀಯ ರಕ್ಷಾ ವಿಶ್ವ ವಿಧ್ಯಾಲಯ ಶಿವಮೊಗ್ಗದ ನಿರ್ದೇಶಕರಾದ ಡಾ|| ರಮಾನಂದ್ ಎನ್ ಗಾರ್ಗಿ, ಸಹಾಯಕ ಪ್ರಾಧ್ಯಾಪಕರುಗಳಾದ ಡಾ|| ಕಾವೇರಿ ಟಂಡನ್, ಶ್ರೀಮತಿ ಹರ್ಷಿತ ಮಿಶ್ರಾ, ಡಾ|| ಶಿವಲಿಂಗಪ್ಪ ಅಂಗಡಿ, ಮತ್ತು ಶಿವಮೊಗ್ಗ ಜಿಲ್ಲೆಯ ಪೊಲೀಸ್ ನಿರೀಕ್ಷಕರು, ಪೊಲೀಸ್ ವೃತ್ತ ನಿರೀಕ್ಷಕರು, ಪೊಲೀಸ್ ಉಪ ನಿರೀಕ್ಷಕರು ಹಾಗೂ ಪೊಲೀಸ್ ಸಿಬ್ಬಂಧಿಗಳು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ