ಕೇಂದ್ರ ಸರ್ಕಾರ ಈ ಹಿಂದೆ ರೈತ ವಿರೋಧಿ 3 ಕೃಷಿ ಕಾಯಿದೆಗಳನ್ನು ತಂದಿದೆ ಈ ಕಾಯಿದೆಗಳು ರೈತರಿಗೆ ಮರಣ ಶಾಸನವಾಗಿದ್ದು ಕಾಯ್ದೆಯನ್ನು ವಿರೋಧಿಸಿ ರಾಷ್ಟ್ರವ್ಯಾಪ್ತಿ ರೈತ ಚಳುವಳಿ ನಡೆಯುತ್ತಿದೆ ದೆಹಲಿ ಹೊರವಲಯದ ಟೆಕ್ರಿ, ಸಿಂಗ್ 3 ಹೆದ್ದಾರಿಗಳಲ್ಲಿ ಸುಮಾರು 8 ತಿಂಗಳುಗಳಿಂದ ಹೆದ್ದಾರಿಗಳಲ್ಲಿ ಬೀಡುಬಿಟ್ಟು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಆದರೂ ಸಹ ಕೇಂದ್ರ ಸರ್ಕಾರ ಕಾಯಿದೆಗಳನ್ನು ವಾಪಸ್ ಪಡೆಯದೆ ಮೊಂಡುತನ ಪ್ರದರ್ಶನ ಮಾಡುತ್ತಿದೆ ಸುಪ್ರೀಂ ಕೋರ್ಟ್ ಆಜ್ಞೆ 8ತಿಂಗಳು ಈ ಕಾಯ್ದೆಗಳನ್ನು ಜಾರಿ ಮಾಡಬಾರದೆಂದು ಆದೇಶ ನೀಡಿದರೂ ಸಹ ಪುನಃ ಪ್ರಸಕ್ತ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ವಿದ್ಯುತ್ ಮಸೂದೆ 2021 ನ್ನು ಮಂಡಿಸುತ್ತಿದೆ ಈ ಮಸೂದೆ ತಿದ್ದುಪಡಿಯಲ್ಲಿ ವಿದ್ಯುತ್ ಪೂರೈಕೆ ಉಪಗುತ್ತಿಗೆ ಹಾಗೂ ಪ್ರಾಚಾಯಿಸಿಗೆ ಅವಕಾಶವಿದೆ. ಈ ಮೂಲಕ ವಿದ್ಯುತ್ ವಿತರಣಾ ಕಂಪೆನಿಗಳು ಖಾಸಗೀಕರಣ ಮಾಡುವುದೆ ತಿದ್ದುಪಡಿಯ ಉದ್ದೇಶ ವಾಗಿದೆ. ಈ ಮಸೂದೆ ತಿದ್ದುಪಡಿ ರೈತರಿಗೆ ಗ್ರಾಹಕರಿಗೆ ಮರಣಶಾಸನವಾಗಿದೆ ವಿದ್ಯುತ್ ಪೂರೈಕೆ ಖಾಸಗೀಕರಣಗೊಂಡರೆ ರೈತರು , ಕೂಲಿ ಕಾರ್ಮಿಕರಿಗೆ ಭಾಗ್ಯಜ್ಯೋತಿ ಕುಟೀರಜ್ಯೋತಿ ಕೃಷಿ ಪಂಪ್ ಸೆಟ್ ಬೀದಿದೀಪ ನೀರು ಸರಬರಾಜಿಗೆ ಮಾಡುತ್ತಿರುವ ಉಚಿತ ವಿದ್ಯುತ್ ಪಂಪ್ ಆಗಲಿದೆ. ಗ್ರಾಹಕರು ಮೊದಲು ವಿದ್ಯುತ್ ಶುಲ್ಕ ಪಾವತಿಸಿ ಬಳಿಕ ಸರ್ಕಾರದ ಸಬ್ಸಿಡಿ ಕಾರ್ಯಕ್ರಮದಡಿಯಲ್ಲಿ ಪರಿಹಾರ ನೀಡಿದ್ದರೆ ಪಡೆಯಬೇಕಾಗುತ್ತದೆ. ಈ ಹಿಂದೆ ಜನರು ಬಳಸುವ ಅಡುಗೆ ಅನಿಲಕ್ಕೆ ನಂತರ ಸಬ್ಸಿಡಿ ಕೊಡುವುದಾಗಿ ತಿಳಿಸಿ ಈಗ ಕೊಡದೆ ಮೋಸ ಮಾಡುತ್ತಿರುವುದು ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಚಾರ. ರೈತರು ಸಹ ಮೊದಲೇ ಹಣ ಪಾವತಿಸಿ ಬಳಿಕ ಕೃಷಿ ಪಂಪ್ ಸೆಟ್ ಗೆ ವಿದ್ಯುತ್ ಬಳಕೆ ಮಾಡಿಕೊಳ್ಳಬೇಕಾಗುತ್ತದೆ. ಪ್ರೀಪೇಯ್ಡ್ ಶುಲ್ಕ ಪಾವತಿಸಿ ಜನರು ಮೊಬೈಲ್ ಬಳಸುವ ಹಾಗೆ ಪಂಪ್ ಸೆಟ್ ಗಳಿಗೆ ಮತ್ತು ಇತರೆ ಗ್ರಾಹಕರು ಸಹ ವಿದ್ಯುತ್ಛಕ್ತಿ ಬೆಳೆಸಬೇಕಾಗುತ್ತದೆ. ಕೋವಿ ನಂತರ ಸಾಂಕ್ರಾಮಿಕ ಮಹಾಮಾರಿ ರೋಗ ತಗುಲಿ ಈ ದೇಶದಲ್ಲಿ ಜನರು ಕೈಗಾರಿಕೆಗಳು ರೈತರು ಸಣ್ಣಪುಟ್ಟ ವ್ಯಾಪಾರಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವಾಗ ಈ ಕಾಯಿದೆಗಳು ಮರಣಶಾಸನವಾಗಿ ಪರಿಣಮಿಸಲಿದೆ ಆದ್ದರಿಂದ ಈ ಕಾಯಿದೆಗಳನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಬಾರದೆಂದು ಈ ಮೂಲಕ ಒತ್ತಾಯಿಸುತ್ತೇವೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153