ಗೋಹತ್ಯೆ ನಿಷೇಧ ಕಾಯಿದೆ ಜಾರಿಯ ರೂವಾರಿಗಳಾದ ಪ್ರಭು ಚೌಹಾಣ್ ಅವರನ್ನು ಎರಡನೇ ಬಾರಿಗೆ ಪಶುಸಂಗೋಪನೆ ಸಚಿವರಾಗಿ ಆಯ್ಕೆ ಮಾಡಿರುವ ಪ್ರಯುಕ್ತ ವಿಶೇಷ ಗೋ ಮಾತೆಯ ಪೂಜೆ ಹಾಗೂ ಸಂಭ್ರಮದ ಆಚರಣೆ. ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದು ಗೋವುಗಳ ಸಂರಕ್ಷ ಣೆಯಲ್ಲಿ ಕ್ರಾಂತಿಕಾರಿ ಹೆಜ್ಜೆ ಇಟ್ಟ ಬೀದರ್ ಜಿಲ್ಲೆಯ ಔರಾದ್ ಕ್ಷೇತ್ರದ ಶಾಸಕರು ಪಶುಸಂಗೋಪನೆ ಸಚಿವರಾದ ಸನ್ಮಾನ್ಯ ಪ್ರಭು ಚವ್ಹಾಣ್ ಅವರಿಗೆ ಎರಡನೇ ಬಾರಿಗೆ ಸಚಿವ ಸಂಪುಟದಲ್ಲಿ ಅವಕಾಶ ಕಲ್ಪಿಸಲಾಗಿದ್ದು ಇಂದು ಬಂಜಾರ ವಿದ್ಯಾರ್ಥಿ ಸಂಘದ ವತಿಯಿಂದ ಶಿವಮೊಗ್ಗ ನಗರದ ಮಾರ್ಕೆಟ್ ವೃತ್ತದಲ್ಲಿರುವ ಕೆಳದಿ ಶಿವಪ್ಪನಾಯಕ ಪ್ರತಿಮೆಯ ಮುಂಭಾಗದಲ್ಲಿ ವಿಶೇಷ ಗೋಪೂಜೆ ಹಾಗೂ ಸಿಹಿ ಹಂಚಿ ಪಟಾಕಿ ಸಂಭ್ರಮಾಚರಣೆ ನಡೆಸಲಾಯಿತು.ಬಂಜಾರ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷರಾದ ಗಿರೀಶ್ ಡಿ ಆರ್ ಅವರು ಮಾತನಾಡಿ ಬಂಜಾರ ಸಮಾಜದ ಕಲ್ಯಾಣ ಕರ್ನಾಟಕದ ಧೀಮಂತ ನಾಯಕ ರಾಗಿರುವ ಸನ್ಮಾನ್ಯ ಪ್ರಭು ಚವ್ಹಾಣ್ ಅವರು ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯಿದೆಯನ್ನು ಜಾರಿಗೆ ತಂದವರು. ಶತಮಾನಗಳಿಂದಲೂ ಕೂಡ ಬಂಜಾರ ಸಮಾಜ ಗೋಸಂರಕ್ಷಣೆಯನ್ನು ಮಾಡಿಕೊಂಡು ಬಂದಿದ್ದೆ. ಬಂಜಾರಾ ಕುಲಗುರು ಶ್ರೀ ಸೇವಾಲಾಲ್ ಮಹಾರಾಜರು ಆಗ್ಲೀಂತ ನೇ ಶತಮಾನದಲ್ಲಿ ಗೋವುಗಳ ಮಹತ್ವ ಹಾಗೂ ಸಂರಕ್ಷಣೆಯನ್ನು ತಮ್ಮ ವಚನಗಳಲ್ಲಿ ಸಾರಿದರು. ಇಂದು ಅದು ಸಾಮಾನ್ಯ ಪ್ರಜೆ ಚೌಹಾಣ್ ಅವರ ಅಧಿಕಾರದ ಅವಧಿಯಲ್ಲಿ ಸಾಕಾರಗೊಂಡಿದೆ ರಾಜ್ಯದ ಉದ್ದಗಲಕ್ಕೂ ಕೂಡ ಗೋ ಶಾಲೆಗಳ ಅಭಿವೃದ್ಧಿ ಪಶು ಕಡೆಗೆ ಸಹಾಯವಾಣಿ ಪಶು ಆ್ಯಂಬುಲೆನ್ಸ್ ಸೇವೆ ಕೋವಿಡ್ ಸಂಕಷ್ಟದಲ್ಲಿ ತತ್ತರಿಸಿ ಹೋಗಿದ್ದ ಬೀದರ್ ಜಿಲ್ಲೆಯನ್ನು ರಾಜ್ಯದಲ್ಲಿಯೇ ಕೋವಿಡ್ ನಿವಾರಣೆಯಲ್ಲಿ ಮಾದರಿ ಜಿಲ್ಲೆಯನ್ನಾಗಿಸಿದ ಕೀರ್ತಿ ಪ್ರಭು ಚವ್ಹಾಣ್ ಅವರಿಗೆ ಸಲ್ಲುತ್ತದೆ. ಘನತೆವೆತ್ತ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಎರಡನೇ ಬಾರಿಗೆ ಮಾನ್ಯ ಪ್ರಭು ಚವ್ಹಾಣ್ ಅವರಿಗೆ ಪಶುಸಂಗೋಪನೆ ಖಾತೆ ಯನ್ನು ನೀಡಿದ್ದು ಇಂದು ಶಿವಮೊಗ್ಗದಲ್ಲಿ ಬಂಜಾರ್ ಸಂಪ್ರದಾಯಿಕ ಉಡುಗೊರೆಯನ್ನು ಧರಿಸಿ ಗೋಮಾತೆಗೆ ಸಲ್ಲಿಸಿ ಸಿಹಿಯನ್ನು ಹಂಚಿ ಪಟಾಕಿ ಸಿಡಿಸಿ ಸಂಭ್ರಮವನ್ನು ಆಚರಣೆ ಮಾಡುತ್ತಿದ್ದೇವೆ. ಸನ್ಮಾನ್ಯ ಪ್ರಭುಚೌಹಾಣ್ ಅವರ ಬೆಂಬಲಕ್ಕೆ ನಿಂತ ಸಮಸ್ತ ಬಂಜಾರಾ ಸಮಾಜದವರಿಗೆ ಹಾಗೂ ವಿಶೇಷವಾಗಿ ಬೀದರ್ ಜಿಲ್ಲೆಯ ನಾಗರಿಕರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಾ ಬರುವ ದಿನಗಳಲ್ಲಿ ಪ್ರಭು ಚವ್ಹಾಣ್ ಅವರು ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಮತ್ತಷ್ಟು ಉತ್ತುಂಗಕ್ಕೆ ಏರಲಿ ಎಂದು ಶುಭ ಕೋರುತ್ತೇವೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153