ಪಂಚಾಯತ್ ರಾಜ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಮರ್ಪಕವಾಗಿ ಹಣಕಾಸು ಹಂಚಿಕೆ ಹಾಗೂ ಆಡಳಿತ ಸುಧಾರಣೆಗಾಗಿ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ 5ನೇ ರಾಜ್ಯ ಹಣಕಾಸು ಆಯೋಗವು ಸರ್ಕಾರಕ್ಕೆ ಶಿಫಾರಸು ಮಾಡಲಿದೆ ಎಂದು 5ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷರಾದ ಡಾ.ಸಿ.ನಾರಾಯಣ ಸ್ವಾಮಿ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗ ಮತ್ತು ಚಿತ್ರದುರ್ಗ ಜಿಲ್ಲೆಗಳ ಪಂಚಾಯತ್ ರಾಜ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆ ಏರ್ಪಡಿಸಲಾಗಿದ್ದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯದ ಎಲ್ಲ ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಮರ್ಪಕ ಹಣಕಾಸು ಹಂಚಿಕೆ ಮತ್ತು ಆಡಳಿತ ಸುಧಾರಣೆ ಈ ಎರಡು ಮುಖ್ಯ ಅಂಶಗಳ ಕುರಿತು ಸಮಾಲೋಚನೆ ನಡೆಸಲಾಗುತ್ತಿದೆ. 22 ಜಿಲ್ಲೆಗಳಲ್ಲಿ ಸಭೆ ನಡೆದಿದೆ. 2023 ರ ಅಕ್ಟೋಬರ್‌ಲ್ಲಿ ಆಯೋಗ ನೇಮಕವಾಗಿದ್ದು ಪ್ರಸಕ್ತ ಸಾಲಿನ ಜೂನ್ ಒಳಗೆ ಆಯೋಗವು ರಾಜ್ಯಪಾಲರಿಗೆ 5ನೇ ಹಣಕಾಸು ಶಿಫಾರಸುಗಳನ್ನು ಸಲ್ಲಿಸಲಿದೆ.
ಸ್ಥಳೀಯ ಸಂಸ್ಥೆಗಳಿಗೆ ಸಕಾಲದಲ್ಲಿ ಚುನಾವಣೆಗಳು ಆಗಬೇಕು. ಹೀಗೆ ಆಗದಿರುವ ಕಾರಣ ಸಂಸ್ಥೆಗಳಿಗೆ ಮಂಜೂರಾದ ಹಣ ಬಿಡುಗಡೆ ಆಗಿಲ್ಲ. ಕಳೆದ ವರ್ಷದ ಅಂತ್ಯಕ್ಕೆ ಕೇಂದ್ರ ಹಣಕಾಸು ಆಯೋಗದಿಂದ ರೂ.2100 ಕೋಟಿ ಹಣವನ್ನು ತಡೆ ಹಿಡಿಯಲಾಗಿದೆ. ü 2026 ರ ಮಾರ್ಚ್ ಅಂತ್ಯಕ್ಕೆ 15 ನೇ ಹಣಕಾಸು ಆಯೋಗದ ಅವಾರ್ಡ್ ಅವಧಿ ಮುಗಿಯಲಿದೆ. ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಿದರೆ ಅನುದಾನ ಬಳಕೆ ಮಾಡಬಹುದು. 5 ನೇ ರಾಜ್ಯ ಹಣಕಾಸು ಆಯೋಗ ಸಹ ಸ್ವಲ್ಪ ತಡವಾಗಿ ನೇಮಕವಾಗಿದೆ. ಆಯೋಗವು ಸರ್ಕಾರಕ್ಕೆ ಈಗಾಗಲೇ 2024 ರ ಫೆಬ್ರವರಿ 19 ಕ್ಕೆ ವರದಿ ಸಲ್ಲಿಸಿದ್ದು ಸಮಾಲೋಚನಾ ಸಭೆಗಳ ನಂತರ ಜೂನ್ ಒಳಗೆ ಅಂತಿಮ ಶಿಫಾರಸುಗಳನ್ನು ಸಲ್ಲಿಸಲಿದೆ.
ಸ್ಥಳೀಯ ಸಂಸ್ಥೆಗಳಲ್ಲಿ ಬಹಳ ಮುಖ್ಯವಾಗಿ ತಾಂತ್ರಿಕ, ವೃತ್ತಿಪರ ನೇಮಕಗಳು ಆಗಬೇಕು. ಗ್ರಾ.ಪಂ ಗಳಲ್ಲಿ ಅಭಿವೃದ್ದಿಗಾಗಿ ಮೀಸಲಾದ ಹಣವನ್ನು ವಿದ್ಯುತ್ ಪಾವತಿಗೆ ಬಳಸಲಾಗುತ್ತಿದೆ. ಸುಮಾರು ರೂ.8000 ಕೋಟಿ ಅಭಿವೃದ್ದಿಯ ಹಣವನ್ನು ವಿದ್ಯುತ್ ಬಿಲ್ ಪಾವತಿಗೆ ಖರ್ಚು ಮಾಡಲಾಗಿದೆ. ಆದ್ದರಿಂದ ಸರ್ಕಾರ 2023 ರ ಮಾರ್ಚ್ ಅಂತ್ಯಕ್ಕೆ ಎಲ್ಲ ಸ್ಥಳೀಯ ಸಂಸ್ಥೆಗಳ ಬೇಬಾಕಿ ವಿದ್ಯುತ್ ಬಿಲ್‌ನ್ನು ಮನ್ನಾ ಮಾಡಿ ಶೂನ್ಯ ಬಿಲ್ ತೋರಿಸಲು ಆದೇಶಿಸಿದ್ದು, ಹಲವೆಡೆ ವಿದ್ಯುತ್ ಶುಲ್ಕ ಮರು ಹೊಂದಾಣಿಕೆ ಸಾಧ್ಯವಾಗಿಲ್ಲ.
ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಬಿಲ್‌ಗೆ ಹೆಚ್ಚಿನ ಹಣ ಪಾವತಿಯಾಗುತ್ತಿದ್ದು. ಇಓ ಗಳು ವಿದ್ಯುತ್ ಇಲಾಖೆಯೊಂದಿಗೆ ವಿದ್ಯುತ್ ಶುಲ್ಕ ಮರು ಹೊಂದಾಣಿಕೆ ಮಾಡಿಕೊಳ್ಳುವಲ್ಲಿ ಜವಾಬ್ದಾರಿ ವಹಿಸಿ ಕೆಲಸ ಮಾಡಬೇಕು ಎಂದರು.
ಕರಾವಳಿ ಪ್ರದೇಶ, ಮಲೆನಾಡು ಭಾಗಕ್ಕೆ ಆಯೋಗವು ಹೆಚ್ಚುವರಿಯಾಗಿ ಶೇ.1 ರಷ್ಟು ಅನುದಾನ ನೀಡಲು ಶಿಫಾರಸು ಮಾಡಲಿದೆ. ಹಾಗೂ ಸ್ಥಳೀಯ ಸಂಸ್ಥೆಗಳು ತಮ್ಮದೇ ಸಂಪನ್ಮೂಲ ಕ್ರೋಢೀಕರಣ ಮಾಡುವುದಕ್ಕೆ ಆದ್ಯತೆ ನೀಡಬೇಕು. ವಿದ್ಯುತ್ ಬಿಲ್ ಬಾಕಿಯಿಂದ ಅನೇಕ ಕೊಳವೆ ಬಾವಿ, ಬೋರ್‌ವೆಲ್‌ಗಳು ನಿಷ್ಕಿçಯಗೊಂಡಿವೆ.
ಅಭಿವೃದ್ದಿ ಹಣ ಅದಕ್ಕಾಗಿಯೇ ಉಪಯೋಗವಾಗಬೇಕು. ಆದ್ದರಿಂದ ವಿದ್ಯುತ್ ಬಿಲ್ ಬೇಬಾಕಿ ಮನ್ನಾ ಹೊಂದಾಣಿಕೆ ಬಗ್ಗೆ ಕ್ರಮ ವಹಿಸಬೇಕು ಹಾಗೂ ವಿದ್ಯುತ್ ಬಾಕಿ ಬಿಲ್ ಕುರಿತು ಅಧಿಕಾರಿಗಳು ಅಧ್ಯಯನ ಮಾಡಿ ಟಿಪ್ಪಣಿ ನೀಡಿದರೆ ಅನುಕೂಲವಗುತ್ತದೆ. ಎಸ್ಕಾಂ ಗಳು ಕೆಇಆರ್‌ಸಿ(ಕರ್ನಾಟಕ ಎಲೆಕ್ಟಿçಸಿಟಿ ರೆಗ್ಯುಲೇಟರಿ ಕಮಿಷನ್) ಪ್ರಕಾರ ಬಿಲ್ ಮಾಡಬೇಕು. ಜಿ.ಪಂ ಸಿಇಓ ಗಳು ಸಹ ಬಿಲ್‌ನ್ನು ಪರಿಶೀಲಿಸಬೇಕೆಂದು ಸಲಹೆ ನೀಡಿದರು.
ತೂದೂರು ಗ್ರಾ.ಪಂ ಅಧ್ಯಕ್ಷರಾದ ಭುಜಂಗ ಮಾತನಾಡಿ, ಗ್ರಾ.ಪಂ ಗಳು ಕುಡಿಯುವ ನೀರು ನಿರ್ವಹಣೆಯನ್ನು ಸ್ವಂತ ಲಭ್ಯ ಅನುದಾನದಿಂದ ಮಾಡುತ್ತಿವೆ. ವಿದ್ಯುತ್ ಶುಲ್ಕ ಮರುಹೊಂದಾಣಿಕೆ ಸಮರ್ಪಕವಾಗಿ ಆಗುತ್ತಿಲ್ಲ. ಹೆಚ್ಚುವರಿ ಶುಲ್ಕಗಳನ್ನು ಕಡಿತಗೊಳಸಲು ಮತ್ತು ಪ್ರತಿ ಸ್ಥಾವರಕ್ಕೆ ವಿವರವಾದ ಪ್ರತ್ಯೇಕ ಬಿಲ್ಲುಗಳನ್ನು ನೀಡಿದರೆ ಗ್ರಾ.ಪಂ ಗಳಿಗೆ ಅನುಕೂಲವಾಗುತ್ತದೆ. ಮಲೆನಾಡು ಭಾಗದಲ್ಲಿ ಸರ್ಕಾರಿ ಜಾಗದಲ್ಲಿ ಹಲವಾರು ವರ್ಷಗಳಿಂದ ವಾಸಿಸುತ್ತಿರುವವರಿಗೆ ಹಕ್ಕುಪತ್ರ ನೀಡಿ ಸಕ್ರಮಗೊಳಿಸಿದಲ್ಲಿ ತೆರಿಗೆ ಸಂಗ್ರಹ ಹೆಚ್ಚಿಸಬಹುದು. ಗ್ರಾಮಾಠಾಣಾ ಒತ್ತುವರಿಗೆ ಕಡಿವಾಣ, ಬಾಪೂಜಿ ಕೇಂದ್ರಗಳಲ್ಲಿ ಆಧಾರ್ ತಿದ್ದುಪಡಿಗೆ ಅವಕಾಶ, ಮಲೆನಾಡು ಭಾಗಕ್ಕೆ ವಿಶೇಷ ಅನುದಾನ, ಎನ್‌ಆರ್‌ಎಲ್‌ಎಂ ಯೋಜನೆಯಡಿ ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡಿದರೆ ಒಳಿತಾಗುತ್ತದೆ ಎಂದ ಅವರು ಗ್ರಾ.ಪಂ ಆದಾಯ ಹೆಚ್ಚಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮತ್ತು ಇತರೆ ಸುಧಾರಣಾ ಕ್ರಮಗಳ ಬಗ್ಗೆ ತಿಳಿಸಿದರು.
ತೀರ್ಥಹಳ್ಳಿ ಪ.ಪಂ ಅಧ್ಯಕ್ಷರು ಮಾತನಾಡಿ, ಮಲೆನಾಡಿನಲ್ಲಿ ಗುಡ್ಡಗಾಡು ಪ್ರದೇಶ ಹೆಚ್ಚಿದ್ದು ಪೌರ ಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸಬೇಕು. ಜೆಜೆಎಂ ಅಡಿಯಲ್ಲಿ ರೂ.1 ಕೋಟಿ ಹೆಚ್ಚುವರಿ ಅನುದಾನ ನೀಡಬೇಕೆಂದು ಕೋರಿದರು. ಭದ್ರಾವತಿ ನಗರ ಸಭೆ ಉಪಾಧ್ಯಕ್ಷರು, ಹೆಚ್ಚಿನ ಅನುದಾನ ನೀರು, ವಿದ್ಯುತ್ ಮತ್ತು ಸಿಬ್ಬಂದಿ ವೇತನಕ್ಕೆ ವಿನಿಯೋಗವಾಗುತ್ತಿದೆ. ನಗರಸಭೆ ಮಳಿಗೆಗಳು ಸುಮಾರು 50 ಖಾಲಿ ಇದ್ದು ನಿಯಮಾವಳಿ ಸಡಿಲಿಸಿದಲ್ಲಿ ಅನುಕೂಲವಾಗುತ್ತದೆ. ಹಾಗೂ ಜನರಿಗೆ ಮೊಬೈಲ್‌ನಲ್ಲೇ ತಮ್ಮ ಕಂದಾಯ ಕುರಿತು ತಿಳಿದು ಆನ್‌ಲೈನ್‌ನಲ್ಲಿ ಪಾವತಿ ಮಾಡಲು ಅವಕಾಶ ಮಾಡಬೇಕೆಂದು ಕೋರಿದರು. ಸಾಗರ ನಗರಸಭೆ ಅಧ್ಯಕ್ಷರು 500 ಜನರಿಗೆ ಓರ್ವ ಪೌರ ಕಾರ್ಮಿಕರನ್ನು ನೇಮಿಸಲು ಅವಕಾಶ ಮಾಡುವಂತೆ, ಜೋಗ ಕಾರ್ಗಲ್ ಪ.ಪಂ ಯಲ್ಲಿ ಅನುದಾನ ಲಭ್ಯತೆ ಕಡಿಮೆ ಇರುವ ಕಾರಣ ಎಸ್‌ಎಫ್‌ಸಿ ಅಡಿಯಲ್ಲಿ ಹೆಚ್ಚುವರಿ ಅನುದಾನ ನೀಡುವಂತೆ ಕೋರಿದರು. ಹೀಗೆ ವಿವಿಧ ಸ್ಥಳೀಯ ಸಂಸ್ಥೆಗಳು, ವಿದ್ಯುತ್ ಬಿಲ್ ಪಾವತಿ, ಹೆಚ್ಚುವರಿ ಪೌರ ಕಾರ್ಮಿಕರ ನೇಮಕ, ತ್ಯಾಜ್ಯ ನಿರ್ವಹಣೆ, ಆಸ್ತಿ ತೆರಿಗೆ ಸಂಗ್ರಹ ಇತರೆ ವಿಷಯ ಕುರಿತು ಚರ್ಚಿಸಿದರು.
ಹೊಸನಗರ ಪ.ಪಂ ಸದಸ್ಯರು ಮಾತನಾಡಿ, ತಮ್ಮಲ್ಲಿ ಮಳೆ ಹೆಚ್ಚು. ರಸ್ತೆ, ಚರಂಡಿ ಪದೇ ಪದೇ ಹಾಳಾಗುತ್ತವೆ. ಪೌರ ಕಾರ್ಮಿಕರ ಸಂಖ್ಯೆ ಕಡಿಮೆ ಇದ್ದು ಹೆಚ್ಚುವರಿ ಕಾರ್ಮಿಕರನ್ನು ಒದಗಿಸಬೇಕು ಹಾಗೂ ಸರ್ಕಾರಿ ಶಾಲೆಗೆ ಸುಣ್ಣ ಬಣ್ಣ ಮಾಡಲು ಅವಕಾಶ ಮಾಡಬೇಕೆಂದರು.
ಜಿ.ಪA ಸಿಇಓ ಎನ್ ಹೇಮಂತ್ ಮಾತನಾಡಿ, ಮಲೆನಾಡು ಭಾಗದಲ್ಲಿ ಅದರದ್ದೇ ಆದ ಸಮಸ್ಯೆಗಳಿರುವ ಕಾರಣ ವಿಶೇಷವಾಗಿ ಹೆಚ್ಚುವರಿ ಅನುದಾನದ ಅವಶ್ಯಕತೆ ಇದೆ. ಜೆಜೆಎಂ ಯೋಜನೆ ಬಂದ ನಂತರ ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ವಿದ್ಯುತ್ ಬಿಲ್ ಹೆಚ್ಚು ಬರುತ್ತಿದೆ. ದಂಡವೇ ಸುಮಾರು ರೂ.50 ಸಾವಿರದಿಂದ 1 ಲಕ್ಷದವರೆಗೆ ಬರುತ್ತಿದೆ. ಕೆಲವೆಡೆ ಬೇಬಾಕಿ ಹೊಂದಾಣಿಕೆ ಸಮರ್ಪಕವಾಗಿ ಆಗಿಲ್ಲ. ತ್ರೆöÊಮಾಸಿಕವಾಗಿ ಹೊಂದಾಣಿಕೆ ಸರಿ ಹೋಗಬೇಕಿದೆ ಈ ನಿಟ್ಟಿನಲ್ಲಿ ಒಂದು ವಿದ್ಯುತ್ ಮಂಡಳಿಯಿAದ ಒಂದು ಸ್ಪಷ್ಟವಾದ ಎಸ್‌ಓಪಿ ಬಂದರೆ ಒಳ್ಳೆಯದು ಎಂದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ವೃಂದ ನೇಮಕಾತಿ, ತರಬೇತಿ, ಆಸ್ತಿ ತೆರಿಗೆಗೆ ಜಿಪಿಎಸ್ ಸರ್ವೇ, ಟ್ರೇಡ್ ಲೈಸೆನ್ಸ್ ಅಭಿಲೇಖಾಲಯ ನಿರ್ವಹಣೆ, ಇ-ಆಫೀಸ್, ಕೆರೆ ಕಟ್ಟೆ ನಿರ್ವಹಣೆ, ಆರೋಗ್ಯ, ಶಿಕ್ಷಣ, ಅಂಗನವಾಡಿ, ಶಾಲಾ ಕಾಲೇಜು ನಿರ್ವಹಣೆ, ಸ್ಮಶಾನ, ರಾಜ್ಯ, ರಾಷ್ಟಿçÃಯ ಹೆದ್ದಾರಿ ನಿರ್ವಹಣೆ, ಪೌರ ಕಾರ್ಮಿಕರ ವೇತನ, ಇತರೆ ವಿಷಯಗಳ ಕುರಿತು ಸ್ಥಳೀಯ ಸಂಸ್ಥೆಗಳ ಕಾರ್ಯ ನಿರ್ವಹಣೆ ಸುಧಾರಣೆ ಕುರಿತು ವಿವರಣೆ ನೀಡಿದರು.
ಅಧ್ಯಕ್ಷರು, ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಸಕಾಲಕ್ಕೆ ಚುನಾವಣೆಗಳು ನಡೆಯಬೇಕು. ಈ ಕುರಿತು ವರದಿಯಲ್ಲಿ ತೀವ್ರವಾಗಿ ಹೇಳಲಾಗುತ್ತದೆ ಹಾಗೂ ಸ್ಥಳೀಯ ಸಂಸ್ಥೆಗಳ ವಿದ್ಯುತ್ ಶುಲ್ಕ ಕುರಿತು ಸಹ ಸರ್ಕಾರದ ಗಮನಕ್ಕೆ ತರಲಾಗುವುದು. ಗ್ರಾ.ಪಂ ಗಳು ವಿದ್ಯುತ್ ದೀಪಗಳಿಗೆ ಮೀಟರ್ ಅಳವಡಿಸುವ ಕುರಿತು ಒತ್ತಾಯ ಮಾಡಬೇಕು. ವಿದ್ಯುತ್ ಶುಲ್ಕ ಮರು ಹೊಂದಾಣಿಕೆ ಮಾಡಿಕೊಳ್ಳಬೇಕು. ಇದರಲ್ಲಿ ಇಓ ಗಳ ಪಾತ್ರ ಮುಖ್ಯವಾಗಿರುತ್ತದೆ ಎಂದರು.
ಆಯೋಗದ ಸದಸ್ಯರಾದ ಆರ್.ಎಸ್.ಕೋಂಡೆ ಮಾತನಾಡಿ, ಸ್ಥಳೀಯ ಸಂಸ್ಥೆಗಳ ವಿದ್ಯುತ್ ಭಾರ ಇಳಿಸುವ, ಬಿಲ್ ಕಡಿತಗೊಳಿಸುವ ಕುರಿತು ಸ್ಥಳೀಯ ಸಂಸ್ಥೆ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಅಧ್ಯಯನ ಮಾಡಿ ಟಿಪ್ಪಣಿ ನೀಡಿದರೆ ಪರಿಶೀಲಿಸಿ ಶಿಫಾರಸು ಮಾಡಲಾಗುವುದು ಎಂದರು.
ಸಭೆಯಲ್ಲಿ ಆಯೋಗದ ಸದಸ್ಯರಾದ ಮೊಹಮ್ಮದ್ ಸನಾವುಲ್ಲಾ, ಸಮಾಲೋಚಕರಾದ ಎಂ.ಕೆ.ಕೆAಪೇಗೌಡ, ಸುಪ್ರಸನ್ನ, ಯಾಲಕ್ಕಿಗೌಡ, ಚಿತ್ರದುರ್ಗ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಚಿತ್ರದುರ್ಗ ಜಿ ಪಂ ಸಿಇಒ ಎಸ್ ಜೆ ಸೋಮಶೇಖರ್, ಎರಡು ಜಿಲ್ಲೆಗಳ ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಂಡಿದ್ದರು.