ಪರಿಸರದ ಮೇಲಾಗುತ್ತಿರುವ ಒತ್ತಡ ಮತ್ತು ಮಾಲಿನ್ಯದಿಂದಾಗಿ ಹವಾಮಾನದಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬರುತ್ತಿದ್ದು ಇದನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ವೈಜ್ಞಾನಿಕ ಕ್ರಿಯಾ ಯೋಜನೆಗಳು ಹಾಗೂ ಸರಳ ಜೀವನ ನಮ್ಮದಾಗಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸುಜಾತ ಹೇಳಿದರು.


ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ(ಎAಪ್ರಿ), ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ ಇವರ ಸಹಯೋಗದಲ್ಲಿ ಬುಧವಾರ ಎಂಎಡಿಬಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ‘ಕರ್ನಾಟಕ ರಾಜ್ಯ ಹವಾಮಾನ ಬದಲಾವಣೆ ರಾಜ್ಯ ಕ್ರಿಯಾ ಯೋಜನೆ ಕುರಿತು ಏರ್ಪಡಿಸಲಾಗಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪರಿಸರದ ಮೇಲಾಗುತ್ತಿರುವ ನಿರಂತರ ಒತ್ತಡ ಹಾಗೂ ಪರಿಸರ ಮಾಲಿನ್ಯದಿಂದಾಗಿ ಹವಾಮಾನದಲ್ಲಿ ಬಹಳಷ್ಟು ಬದಲಾವಣೆಗಳನ್ನು ಕಾಣುತ್ತಿದ್ದು ಇದರಿಂದ ಮಾನವನ ಜೀವನದ ಮೇಲೆ ಅನೇಕ ದುಷ್ಟರಿಣಾಮಗಳೂ ಆಗುತ್ತಿದೆ. ಇದಕ್ಕೆಲ್ಲ ಕಾರಣ ನಾವೇ ಆಗಿದ್ದು, ಕೈಗಾರಿಕೆಗಳು ಸೇರಿದಂತೆ ಮನುಷ್ಯ ಕೈಗೊಳ್ಳವ ಅನೇಕ ಪ್ರಕ್ರಿಯೆಗಳಿಂದ ಪರಿಸರ ಮಾಲಿನ್ಯ, ಅಸಮತೋಲನ ಉಂಟಾಗುತ್ತಾ ಬಂದಿದೆ.


ಆದ್ದರಿAದ ನಾವೆಲ್ಲ ಸರಳ ಜೀವನ, ಅಹಿಂಸೆ ತತ್ವವನ್ನು ಅಳವಡಿಸಕೊಳ್ಳಬೇಕು. ಪ್ರಕೃತಿಯ ವಿರುದ್ದ ಹೋಗುತ್ತಿದ್ದೇವೆ. ಅತಿಯಾದ ಕೈಗಾರಿಕೋದ್ಯಮ, ರಾಸಾಯನಿಕಗಳ ಬಳಕೆಯಿಂದ ಗ್ಲೋಬಲ್ ವಾರ್ಮಿಂಗ್ ಆಗುತ್ತಿದೆ. ದೇಶಗಳ ನಡುವೆ ಸ್ಪರ್ಧೆ ಹೆಚ್ಚುತ್ತಿದೆ. ಇಡೀ ಭೂಮಿ ಸುಡುವಷ್ಟು ಸ್ಪೋಟಕ ನಮ್ಮಲ್ಲಿದೆ. ಅಸಂಬದ್ದವಾದ ಬದುಕನ್ನು ಬದುಕುತ್ತಿದ್ದೇವೆ. ಹಳ್ಳಿಗಳಲ್ಲೂ ಸಾಕಷ್ಟು ಘನತ್ಯಾಜ್ಯ ಸಂಗ್ರಹವಾಗುತ್ತಿದೆ. ಇದರಿಂದ ನಮ್ಮ ಆರೋಗ್ಯ, ನಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕೆ ಮಾರಕವಾಗಲಿದೆ. ವಿಶ್ವಾದ್ಯಂತ ಪರಿಸರ ಸಂರಕ್ಷಿಸುವ ಕುರಿತು ಜಾಗೃತಿ ಮೂಡಬೇಕಿದ್ದು ಒತ್ತಡ ರಹಿತ ಬದುಕು ನಮ್ಮದಾಗಿಸಿಕೊಳ್ಳಲು ಸರಳತೆಯನ್ನು ರೂಢಿಸಿಕೊಳ್ಳಬೇಕಿದೆ ಎಂದರು.
ಜಿ.ಪA ಮುಖ್ಯ ಯೋಜನಾಧಿಕಾರಿ ಹನುಮಾನಾಯ್ಕ ಮಾತನಾಡಿ, ಹವಾಮಾನ ವೈಪರೀತ್ಯಗಳನ್ನು ನಿರ್ವಹಿಸಲು ವೈಜ್ಞಾನಿಕವಾದ ಯೋಜನೆಗಳನ್ನು ರೂಪಿಸುವ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ(ಎAಪ್ರಿ) ಹವಾಮಾನ ಬದಲಾವಣೆ ಕುರಿತು ರಾಜ್ಯ ಕ್ರಿಯಾ ಯೋಜನೆ ರೂಪಿಸಿದ್ದು ಇದನ್ನು ವಿವಿಧ ಇಲಾಖೆಗಳ ಅಧಿಕಾರಿಗಳು ತಿಳಿದುಕೊಂಡು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ.


ಜಿಲ್ಲಾ ಅಧಿಕಾರಿಗಳನ್ನು ಈ ಕ್ರಿಯಾ ಯೋಜನೆಯ ಪ್ರಮುಖ ಅಂಶಗಳಿಗೆ ಪರಿಚಯಿಸಲು, ಇಲಾಖಾ ಜವಾಬ್ದಾರಿಗಳನ್ನು ಸ್ಪಷ್ಟಪಡಿಸಲು ಮತ್ತು ಜಿಲ್ಲಾ ಮಟ್ಟದಲ್ಲಿ ಹವಾಮಾನ ಕ್ರಮಗಳನ್ನು ಮೇಲ್ವಿಚಾರಣೆ ಮಾಡುವ ಮತ್ತು ಮೌಲ್ಯಮಾಪನ ಮಾಡುವ ಪ್ರಕ್ರಿಯೆಯನ್ನು ಈ ಕಾರ್ಯಾಗಾರದಲ್ಲಿ ತಿಳಿಸಲಾಗುವುದು.
ಹವಾಮಾನ ಬದಲಾವಣೆ ಕುರಿತಾದ ರಾಜ್ಯ ಕ್ರಿಯಾ ಯೋಜನೆಯನ್ನು ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯ, ಭಾರತ ಸರ್ಕಾರ ಅನುಮೋದಿಸಿರುವ ಹಿನ್ನೆಲೆಯಲ್ಲಿ ಹವಾಮಾನ ಬದಲಾವಣೆ ಕಾರ್ಯತಂತ್ರಗಳನ್ನು ಮುಖ್ಯವಾಹಿನಿಗೆ ತರಲು ಈ ಕಾರ್ಯಾಗಾರ ಏರ್ಪಡಿಸಲಾಗಿದ್ದು ಅಧಿಕಾರಿಗಳು ಇದರ ಸದುಪಯೋಗ ಪಡೆಯಬೇಕು ಎಂದರು.


ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ್ರಿ) ಬೆಂಗಳೂರಿನ ತರಬೇತಿ ಅಸೋಸಿಯೇಟ್ ರುಚಿತಾಶ್ರೀ ಮಾತನಾಡಿ, ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯು ಕರ್ನಾಟಕ ಸರ್ಕಾರವು ಅರಣ್ಯ, ಪರಿಸರ ವಿಜ್ಞಾನ ಮತ್ತು ಪರಿಸರ ಇಲಾಖೆಯ ಅಡಿಯಲ್ಲಿ 2002 ರಲ್ಲಿ ಸ್ಥಾಪಿಸಿದ ಸ್ವಾಯತ್ತ ಸಂಸ್ಥೆಯಾಗಿದೆ. ಅನ್ವಯಿಕ ಮತ್ತು ನೀತಿ ಸಂಶೋಧನೆ ನಡೆಸುತ್ತದೆ ಮತ್ತು ಪ್ರಸ್ತುತ ಪರಿಸರ ಸಮಸ್ಯೆಗಳ ಕುರಿತು ಸಾಮರ್ಥ್ಯ-ನಿರ್ಮಾಣ ತರಬೇತಿಗಳನ್ನು ಒದಗಿಸುತ್ತದೆ ಎಂದು ತಿಳಿಸಿದರು. ಹಾಗೂ ಪಿಪಿಟಿ ಪ್ರದರ್ಶನದ ಮೂಲಕ ಹವಾಮಾನ ಬದಲಾವಣೆ ಕಾರಣಗಳು, ಜಾಗತಿಕ ಮತ್ತು ಭಾರತೀಯ ಉಪ ಕ್ರಮಗಳು ಸೇರಿದಂತೆ ರಾಜ್ಯ ಕ್ರಿಯಾ ಯೋಜನೆಯ ಮುಖ್ಯಾಂಶಗಳನ್ನು ವಿವರಿಸಿದರು.


ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯ ಸಂಶೋಧನಾ ವಿಜ್ಞಾನಿ ಡಾ.ಶೃತಿ ಮಾತನಾಡಿ, ಹವಾಮಾನ ಬದಲಾವಣೆಗಾಗಿ ರಾಜ್ಯ ನೋಡಲ್ ಏಜೆನ್ಸಿಯಾಗಿ, ಹವಾಮಾನ ಬದಲಾವಣೆಯ ಕುರಿತಾದ ಕರ್ನಾಟಕ ರಾಜ್ಯ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವಲ್ಲಿ ಮತ್ತು ಕಾರ್ಯಗತಗೊಳಿಸುವಲ್ಲಿ ಈ ಸಂಸ್ಥೆ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಹವಾಮಾನ-ಹೊಂದಾಣಿಕೆಯ ಯೋಜನೆಯ ತಯಾರಿಕೆ ಮತ್ತು ಹವಾಮಾನ-ಸಂಬAಧಿತ ತರಬೇತಿ ಕಾರ್ಯಗಾರವನ್ನು ನಡೆಸುತ್ತಿದ್ದು, ಹವಾಮಾನ ಬದಲಾವಣೆಯ ಪರಿಗಣನೆಗಳನ್ನು ರಾಜ್ಯ ಮಟ್ಟದ ನೀತಿ ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ಸಂಯೋಜಿಸುವ ಮೂಲಕ ಹೊಂದಾಣಿಕೆ ಮತ್ತು ತಗ್ಗಿಸುವಿಕೆಯ ಪ್ರಯತ್ನಗಳನ್ನು ಇದು ಬೆಂಬಲಿಸುತ್ತದೆ.


ಕರ್ನಾಟಕ ರಾಜ್ಯ ಹವಾಮಾನ ಬದಲಾವಣೆ ಕ್ರಿಯಾ ಯೋಜನೆ(ಕೆಎಸ್‌ಎಪಿಸಿಸಿ) ರಾಜ್ಯಾದ್ಯಂತ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವಾಗ ಹವಾಮಾನ ಬದಲಾವಣೆಯ ಹೆಚ್ಚುತ್ತಿರುವ ಸವಾಲುಗಳನ್ನು ಎದುರಿಸಲು ಒಂದು ಕಾರ್ಯತಂತ್ರದ ಚೌಕಟ್ಟನ್ನು ಒದಗಿಸುತ್ತದೆ. ಇದು ಅಂತರರಾಷ್ಟ್ರೀಯ ಹವಾಮಾನ ಒಪ್ಪಂದಗಳ ಅಡಿಯಲ್ಲಿ ಭಾರತದ ರಾಷ್ಟ್ರೀಯ ಬದ್ಧತೆಗಳೊಂದಿಗೆ ಹೊಂದಿಕೆಯಾಗುತ್ತದೆ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವವನ್ನು ಹೆಚ್ಚು ಪರಿಣಾಮಕಾರಿಯಾಗಿ ಸಾಧಿಸಬಹುದಾದ ಸ್ಥಳೀಯ ಮಟ್ಟದ ಕ್ರಿಯೆಯ ಮಹತ್ವವನ್ನು ಒತ್ತಿ ಹೇಳುತ್ತದೆ.


ಕೃಷಿ, ಪಶುಸಂಗೋಪನೆ, ಮೀನುಗಾರಿಕೆ, ಅರಣ್ಯ, ನೀರು, ಇಂಧನ, ಸಾರಿಗೆ, ಕೈಗಾರಿಕೆಗಳು, ತ್ಯಾಜ್ಯ ನಿರ್ವಹಣೆ ಮತ್ತು ಆರೋಗ್ಯ ಎಂಬ ಹತ್ತು ಪ್ರಮುಖ ವಲಯಗಳಲ್ಲಿ ಈ ಕ್ರಿಯಾ ಯೋಜನೆ 200 ಕ್ರಿಯಾ ಅಂಶಗಳನ್ನು ವಿವರಿಸುತ್ತದೆ. ಹವಾಮಾನ ಅಪಾಯಗಳಿಗೆ ಪ್ರತಿಕ್ರಿಯೆಯಾಗಿ ಹೊಂದಾಣಿಕೆ ಮತ್ತು ಅಪಾಯಗಳ ತಗ್ಗಿಸುವಿಕೆಯ ಪ್ರಯತ್ನಗಳೆರಡನ್ನೂ ಮಾರ್ಗದರ್ಶನ ಮಾಡಲು ಈ ಕ್ರಿಯಾ ಅಂಶಗಳನ್ನು ವಿನ್ಯಾಸಗೊಳಿಸಲಾಗಿದೆ.
ಅನುಷ್ಠಾನವನ್ನು ಬೆಂಬಲಿಸಲು, ಸಂಸ್ಥೆಯು ಹವಾಮಾನ ಪರಿಣಾಮಗಳು ಮತ್ತು ಶಿಫಾರಸು ಮಾಡಲಾದ ತಂತ್ರಗಳನ್ನು ಎತ್ತಿ ತೋರಿಸುವ ವಲಯ-ನಿರ್ದಿಷ್ಟ ನೀತಿ ಸಂಕ್ಷಿಪ್ತ ವಿವರಣೆಗಳನ್ನು ಸಿದ್ಧಪಡಿಸಿದೆ ಎಂದ ಅವರು ಪಿಪಿಟಿ ಮೂಲಕ ಕ್ರಿಯಾ ಯೋಜನೆಯ ಉಪಕ್ರಮಗಳ ಬಗ್ಗೆ ತಿಳಿಸಿದರು.
ಜಿ.ಪಂ. ಎನ್‌ಆರ್‌ಡಿಎಂಸ್ ಅಧಿಕಾರಿ ಶಂಕರ್, ಜಿಲ್ಲಾ ಮಟ್ಟದ  ಉಪಸ್ಥಿರಿದ್ದರು.

Leave a Reply

Your email address will not be published. Required fields are marked *