ಶಿವಮೊಗ್ಗ ಅಗ್ನಿಶಾಮಕ ಠಾಣೆಯ ಮುಂದೆ ಸನ್ನಿ ಎಂಬ ಡ್ರೈವರ್ ಎನ್ .ಆರ್. ಪುರದಿಂದ ಎ.ಪಿ.ಎಂ.ಸಿ ಮಾರ್ಕೆಟ್ ಗೆ ಹೋಗುವಾಗ ದಾರಿಹೋಕನಿಗೆ ಡಿಕ್ಕಿ ಹೊಡೆದು ಚಾಲಕನ ಆಯಾ ತಪ್ಪಿ ರಸ್ತೆಯ ಪಕ್ಕ ತಡೆ ಗೋಡೆಗೆ ಡಿಕ್ಕಿ ಹೊಡಿದು ಬುಲೇರೋ ವಾಹನ ಮಗುಚಿ ಬಿದ್ದು ವಾಹನದಲ್ಲಿ ಇದ್ದ ಮತ್ತೂಬ್ಬ ಸಹಾಯಕ ಪಾಪಚ್ಚ ಎಂಬ ವ್ಯಕ್ತಿ ಗಾಡಿಯ ಅಡಿಯಲ್ಲಿ ಸಿಕ್ಕಿ ಹಾಕಿ ಕೊಂಡಾಗ ನಮ್ಮ ಅಗ್ನಿ ಶಾಮಕ ಸಿಬ್ಬಂದಿಗಳು ತಕ್ಷಣವೇ ಧಾವಿಸಿ ಕ್ರೋಬರ್, ಬೋಲ್ಟ್ ಕಟರ್ ಹೈಡ್ರಾಲಿಕ್ ಉಪಕರಣಗಳನ್ನ ಬಳಸಿ ಪಾಪಚ್ಚ ಎಂಬ ವ್ಯಕ್ತಿ ಜೀವವನ್ನು ರಕ್ಷಣೆ ಮಾಡಿರುತ್ತಾರೆ. ಅಶೋಕ್ ಕುಮಾರ್, ಪ್ರವೀಣ್ , ನಾಗೇಶ್ ,ವಿಜಯ ಕರೋಶಿ , ಪಾಂಡುರಂಗ , ವಿಷ್ಣು ನಾಯಕ್ , ಮುದ್ದ ಬಸಪ್ಪ,ರವರುಗಳು ಗಾಯಾಳುಗಳನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರ್ ಎಫ್ ಒ ಲಕ್ಕಪ್ಪರವರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE
9880074684
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153