ನಿಮ್ಮ ಸರ್ಕಾರ ಕರ್ನಾಟಕ ಮುನ್ಸಿಪಲ್ ಕಾಯ್ದೆಗೆ ಫೆಬ್ರವರಿ 2021 ಬದಲಾವಣೆಯನ್ನು ತಂದು ಆಸ್ತಿ ತೆರಿಗೆ ಪದ್ಧತಿಯಲ್ಲಿ ಮಾರ್ಪಾಡು ಮಾಡಿರುವುದು ಸರಿಯಷ್ಟೇ ಇದರಿಂದ ರಾಜ್ಯದ ಕೈಗಾರಿಕಾ ವಾಣಿಜ್ಯ ಮತ್ತು ವಸತಿ ಕಟ್ಟಡಗಳ ಮೇಲಿನ ತೆರಿಗೆ ನೀಡುವ ತೆರಿಗೆದಾರರಿಗೆ ಆರ್ಥಿಕ ಸಂಕಷ್ಟದ ವರ್ಷಗಳಲ್ಲಿ ಆಸ್ತಿ ತೆರಿಗೆ ಭಾರ ಬೀಳುತ್ತಿದೆ. ಈ ವಿಚಾರವಾಗಿ ನಾವು ತಿಳಿಯ ಬಯಸುವುದೇನೆಂದರೆ ಈ ರೀತಿಯ ತಿದ್ದುಪಡಿ ಆಸ್ತಿ ತೆರಿಗೆಗೆ ಅಗತ್ಯವಿರಲಿಲ್ಲ. ಕಾನೂನಿನ ಒಳಗೆ 3ವರ್ಷಗಳಿಗೊಮ್ಮೆ ಶೇಕಡಾ ರಷ್ಟು ಏರಿಕೆ ಅವಶ್ಯಕವಿತ್ತು ಅವಶ್ಯಕತೆ ಇದ್ದರೆ ಇದನ್ನು ಶೇಕಡಾ ಮೂವತ್ತರವರೆಗೆ ಏರಿಸಲು ಸ್ಥಳೀಯ ಸಂಸ್ಥೆಗಳಿಗೆ ಅವಧಿ ಅವಕಾಶವಿತ್ತು. ಏರಿಕೆ ಅನಿವಾರ್ಯ ವಾದರೆ ಈ ಮಾರ್ಗಗಳು ಸಾಕಾರ ಬಳಸಿಕೊಳ್ಳಬಹುದಾಗಿತ್ತು ಇದುವರೆಗೆ ತೆರಿಗೆ ಪಾವತಿಯಲ್ಲಿ ಆಗುತ್ತಿರುವ ಸೋರಿಕೆಯನ್ನು ತಡೆದಿದ್ದಾರೆ ಸ್ಥಳೀಯ ಸಂಸ್ಥೆಗಳಿಗೆ ಸಾಕಷ್ಟು ಆದಾಯ ಬರುತ್ತಿತ್ತು. ಇದ್ಯಾವುದನ್ನೂ ಮಾಡದೆ ಸಬ್ ರಿಜಿಸ್ಟರ್ ಅಳವಡಿಸಿ ತೆರಿಗೆ ಸೇರಿದಂತೆ ಎಲ್ಲ ಗೊಂದಲಕ್ಕೆ ಕಾರಣವಾಗಿದೆ.2005 ರಲ್ಲಿ ಭಾರತ ದುಷ್ಪರಿಣಾಮ ಅರಿತು ತೆರಿಗೆ ಪದ್ದತಿಯನ್ನು ಆಗಿನ ರಾಜ್ಯ ಸರ್ಕಾರ ಮನಗಂಡು ಕಾನೂನಿಗೆ ತಿದ್ದುಪಡಿ ತಂದಿತ್ತು ಈ ಸಾಲಿನಲ್ಲಿ ಒಟ್ಟು ಮುಂದಿನ ಸಾಲುಗಳಲ್ಲಿ ಎಸ್ ಆರ್ ಕಾರಣದಿಂದ ಆಸ್ತಿ ತೆರಿಗೆ ವಿಪರೀತ ಏರಿಕೆ ಆಗಲಿದೆ. ಎಸ್ ಆರ್ ದರ ಆಧಾರಿತ ತೆರಿಗೆಯನ್ನು ಯಾವುದೇ ರೀತಿಯಲ್ಲೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ.


ರಾಷ್ಟ್ರದಲ್ಲಿಯೇ ಸಂಕಷ್ಟದ 2020 -21 ಮತ್ತು 2021-22 ಸಾಲುಗಳಲ್ಲಿ ತೆರಿಗೆ ಆಸ್ತಿ ಹೆಚ್ಚಳ ಕೇವಲ ಕರ್ನಾಟಕದಲ್ಲಿ ಮಾತ್ರ: ರಾಜ್ಯಾದ್ಯಂತ ಆಸ್ತಿ ತೆರಿಗೆದಾರರ ಮೇಲೆ ಶೇಕಡಾ ಹದಿನೈದು ರಿಂದ ಶೇಕಡಾ ಇಪ್ಪತ್ತೈದರ ವರೆಗೂ ಹೆಚ್ಚಳದ ಆಸ್ತಿ ತೆರಿಗೆ ವಿಧಿಸಲಾಗಿದೆ.ವಾಣಿಜ್ಯೋದ್ಯಮಿ ಗಳನ್ನು ಹೊರತುಪಡಿಸಿ ನಗರಗಳಲ್ಲಿ ವಾಸಿಸುವ ಆಟೋ ಮಾಲಿಕರು ಟ್ಯಾಕ್ಸಿ ಓಡಿಸುವವರು ಖಾಸಗಿ ಬಸ್ ಮಾಲೀಕರು ಟ್ಯಾಕ್ಸಿಗಳು ಅವಲಂಬಿತ ಉದ್ಯಮ ಕಲ್ಯಾಣ ಮಂಟಪಗಳು ಅವಲಂಬಿತ ಹತ್ತಾರು ಉದ್ಯಮದಾರರು ಜಿಮ್ ಗಳು ಬಾರ್ ಮಾಲೀಕರು ಕ್ಷೌರಿಕರು ಸಣ್ಣ ಸಣ್ಣ ಕ್ಯಾಂಟೀನ್ ಗಳು ಮತ್ತು ಹೋಟೆಲ್ ಗಳು ಗುತ್ತಿಗೆದಾರರು ಉದ್ಯೋಗ ಕಳೆದುಕೊಂಡ ಲಕ್ಷಾಂತರ ಬಳಸುವರು ಬಾಣಸಿಗರು ಪುರೋಹಿತರು ಹತ್ತು ಹಲವು ತರದ ಕಲಾವಿದರೂ ಖಾಸಗಿ ಶಾಲೆಗಳು ಖಾಸಗಿ ಶಾಲೆ ಅವಲಂಭಿಸಿರುವ ಸೇವೆದಾರರು ಮುಂತಾದವರು ಇವುಗಳೊಟ್ಟಿಗೆ ಉದ್ಯೋಗ ಕಳೆದುಕೊಂಡ ಲಕ್ಷಾಂತರ ಜನ ಅದರೊಟ್ಟಿಗೆ ಕೋವಿಡ್ ಸಂಕಷ್ಟದಲ್ಲಿ ಆರೋಗ್ಯಕ್ಕಾಗಿ ಅನುಭವಿಸುತ್ತಿರುವ ಈ ವರ್ಷಗಳಲ್ಲಿ ತೆರಿಗೆ ರಿಯಾಯಿತಿ ನೀಡಲು ಬದಲು ನಮ್ಮ ರಾಜ್ಯ ಸರ್ಕಾರ ವರ್ಷಗಳಲ್ಲಿ ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ಈ ವರ್ಷಗಳಲ್ಲಿ ತೆರಿಗೆ ರಿಯಾಯಿತಿ ನೀಡುವ ಬದಲು ನಮ್ಮ ರಾಜ್ಯ ಸರ್ಕಾರ ಆಸ್ತಿ ತೆರಿಗೆದಾರರ ಮೇಲೆ ತೀವ್ರ ತೆರಿಗೆ ಹೊರೆ ಹೇರುತ್ತಿರುವುದನ್ನು ಸಮರ್ಥಿಸಿಕೊಳ್ಳಲು ಸಾಧ್ಯವೇ ಇಲ್ಲ.
ಎಸ್ ಆರ್ ದರ ಆಧರಿಸಿ ತೆರಿಗೆ ಪದ್ಧತಿಯಿಂದ ಎಸ್ಆರ್ ದರ ಹೆಚ್ಚಳವಾದಂತೆ ಆಸ್ತಿ ತೆರಿಗೆ ಪ್ರತಿ ವರ್ಷ ಹೆಚ್ಚಳ ಆಗಲಿದೆ:- ಎಸ್ ಆರ್ ದರ ಪ್ರತಿ 3ವರ್ಷಗಳಿಗೊಮ್ಮೆ ಮುನ್ನೂರರಿಂದ ಐನೂರು ಪಟ್ಟು ಅಥವಾ ಅದಕ್ಕಿಂತ ಅಧಿಕ ಏರಿಕೆ ಆಗುತ್ತಿರುತ್ತದೆ ಈ ಏರಿಕೆಯ ಕಾರಣದಿಂದಾಗಿ ಪ್ರತಿವರ್ಷ ತೆರಿಗೆದಾರರ ಮೇಲೆ ವಿಪರೀತ ತೆರಿಗೆ ಏರಿಕೆ ಆಗುತ್ತದೆ ಇದೇ ವಿಷಯದಲ್ಲಿ ಮನಗೊಂಡು 2005 ರಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಪ್ರತಿ ವರ್ಷ ಎಸ್ ಆರ್ ದರ ಆಸ್ತಿತೆರಿಗೆ ಅನ್ವಯಿಸುವುದು ಹಿಂದಕ್ಕೆ ಪಡೆದು 3ವರ್ಷಗಳಿಗೊಮ್ಮೆ ಶೇಕಡಾ ಹದಿನೈದು ರಷ್ಟು ಏರಿಕೆ ನಿರ್ವಹಿಸಿ ಆಸ್ತಿ ತೆರಿಗೆ ಕಾನೂನನ್ನು ಜಾರಿಗೆ ತಂದಿತ್ತು.
ಖಾಲಿ ನಿವೇಶನಗಳಿಗೆ ಎಸ್ಆರ್ ದರ ಆಧರಿಸಿ ಆಸ್ತಿ ತೆರಿಗೆ ವಿಧಿಸುವುದು ತೆರಿಗೆ ಹೆಚ್ಚಳವನ್ನು ಹತ್ತಿಪ್ಪತ್ತು ಪಟ್ಟು ಜಾಸ್ತಿ ಮಾಡುತ್ತಿದೆ:- ಖಾಲಿ ನಿವೇಶನಗಳಿಗೆ ಎಸ್ಆರ್ ದರ ಆಧರಿಸಿ ಆಸ್ತಿ ತೆರಿಗೆ ವಿಧಿಸಲು ಕಾನೂನಿನಲ್ಲಿ ಬದಲಾವಣೆ ತರಲಾಗಿದೆ ಆ ಮೂಲಕ ಖಾಲಿ ನಿವೇಶನಗಳಿಗೆ ಹಿಂದಿನ ಸಾಲಿಗೆ ಹೋಲಿಸಿದರೆ ಹತ್ತಿಪ್ಪತ್ತು ಪಟ್ಟು ತೆರಿಗೆ ಹೆಚ್ಚಳವಾಗಿದೆ.
ಮನೆಗಳು ವಾಣಿಜ್ಯ ಕಟ್ಟಡಗಳು ಕೈಗಾರಿಕಾ ಕಟ್ಟಡಗಳ ಸುತ್ತಮುತ್ತಲಿನ ಖಾಲಿ ಜಾಗಕ್ಕೂ ಭಾರಿ ತೆರಿಗೆ:- ಮನೆಗಳು ವಾಣಿಜ್ಯ ಕಟ್ಟಡಗಳು ಕೈಗಾರಿಕಾ ಕಟ್ಟಡಗಳ ಸುತ್ತ ಸಾವಿರ ಅಡಿಗೂ ಹೆಚ್ಚಿನ ಜಾಗಕ್ಕೆ ಈಗ ತೆರಿಗೆ ಹಾಕಲಾಗುತ್ತಿದೆ ಕಟ್ಟಡಗಳ ಸುತ್ತ ಖಾಲಿ ಜಾಗ ಬಿಡುವುದು ಕಾನೂನಿನ ಪ್ರಕಾರ ಅನಿವಾರ್ಯ ಮತ್ತು ಉತ್ತಮ ಪರಿಸರಕ್ಕೆ ಪೂರಕ ಅಂತಹ ಖಾಲಿ ಜಾಗಕ್ಕೂ ಈ ತೆರಿಗೆ ಹಾಕಲಾಗುತ್ತಿದೆ.
ಕಟ್ಟಡಗಳಿಗೆ ಸವಕಳಿ ನೀಡದಿರುವುದು ತೆರಿಗೆ ಹೆಚ್ಚಳಕ್ಕೆ ಮತ್ತೊಂದು ಕಾರಣ ಮತ್ತು ಆಸ್ತಿ ತೆರಿಗೆ ನ್ಯಾಯಬದ್ಧ ವಾಗುವುದಿಲ್ಲ:- ಹೊಸದಾಗಿ ಜಾರಿಗೆ ತಂದಿರುವ ತೆರಿಗೆ ಪದ್ದತಿಯಲ್ಲಿ ಕಟ್ಟಡಗಳಿಗೆ ಸವಕಳಿಯನ್ನು ಕೈಬಿಡಲಾಗಿದೆ ಎಂದು ತೆರಿಗೆ ಹೇರಿಕೆ ಕಾರಣವಾಗುವುದರೊಂದಿಗೆ ನ್ಯಾಯಬದ್ಧ ತೆರಿಗೆ ಎನ್ನಿಸಿಕೊಳ್ಳುವುದಿಲ್ಲ.ಕಟ್ಟಡದ ವಯಸ್ಸು ಹೆಚ್ಚಾದಂತೆ ಕಟ್ಟಡ ಮೌಲ್ಯ ಕುಸಿಯುತ್ತದೆ ಮತ್ತು ಕಟ್ಟಡ ನಿರ್ವಣಕ್ಕೆ ಕಟ್ಟಡದ ಮಾಲೀಕ ಪ್ರತಿವರ್ಷ ಇಚ್ಛೆ ಹೆಚ್ಚು ವೆಚ್ಚ ಮಾಡಬೇಕಾಗಿ ಬರುವುದರಿಂದ ತೆರಿಗೆ ಹೆಚ್ಚಿಸುವುದು ನ್ಯಾಯ ಸಮತವಲ್ಲ.
ನಮ್ಮ ಆಗ್ರಹಗಳು : * 2020-21 ನೇ ಸಾಲಿನ ಆಸ್ತಿ ತೆರಿಗೆಯಲ್ಲಿ ವರ್ಷದ ಅಂತ್ಯದಲ್ಲಿ ಶೇಕಡಾ ರಷ್ಟು ಹೆಚ್ಚಳ ಕಟ್ಟಬೇಕೆಂದು ಸರಕಾರ ಮತ್ತು ಮಹಾನಗರ ಪಾಲಿಕೆ ಸೂಚಿಸಿದೆ. ಇದೆ ವರ್ಷಕ್ಕೆ ಆಂಧ್ರಪ್ರದೇಶ ತೆಲಂಗಾಣದ ಮತ್ತು ಗುಜರಾತ್ ಸರಕಾರಗಳು ಆಸ್ತಿ ತೆರಿಗೆದಾರರಿಗೆ ಶೇಕಡಾ ಐವತ್ತರಷ್ಟು ವಿನಾಯಿತಿಯನ್ನು ನೀಡಿದೆ.

  • 2021-22 ನೇ ಸಾಲಿಗೆ ಶೇಕಡಾ ಐವತ್ತರಷ್ಟು ವಿನಾಯಿತಿಗೆ ಆಗ್ರಹ : ಮಾನವೀಯತೆಯ ಆಧಾರದ ಮೇಲೆ ಕೋವಿ ಕಾರಣದ ಆರ್ಥಿಕ ಸಂಕಷ್ಟಗಳನ್ನು ಅರ್ಥ ಮಾಡಿಕೊಂಡು ತೆರಿಗೆಯಲ್ಲಿ ಭಾರಿ ವಿನಾಯಿತಿಯನ್ನು ರಾಜ್ಯಸರ್ಕಾರದ ನೀಡಬೇಕಾಗಿತ್ತು ತೆರಿಗೆದಾರರ ಆರ್ಥಿಕ ಸಂಕಷ್ಟ ಉದ್ಯೋಗ ನಷ್ಟ ಆದಾಯದ ಖಚಿತ ಆರೋಗ್ಯ ವೆಚ್ಚ ಮತ್ತು ಮುಂತಾದವುಗಳನ್ನು ಅರ್ಥಮಾಡಿಕೊಂಡು ಶೇಕಡ ಐವತ್ತರಷ್ಟು ವಿನಾಯ್ತಿಯನ್ನು ಸರ್ಕಾರ ಘೋಷಿಸಲೇಬೇಕು.
  • ಎಸ್ ಆರ್ ದರ ಆಧಾರಿತ ಆಸ್ತಿ ತೆರಿಗೆ ತಕ್ಷಣ ಕೈಬಿಡಿ : ಎಸ್ ಆರ್ ದರ ಆಸ್ತಿ ತೆರಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಿಂದ ಮತ್ತು ಎಸ್ಆರ್ ದರವೇ ಅವೈಜ್ಞಾನಿಕವಾಗಿರುವುದರಿಂದ ಈ ಎಸ್ಸಾರ್ ದರ ಆಧಾರಿತ ತೆರಿಗೆಯನ್ನು ಸರ್ಕಾರ ಕೈಬಿಡಲೇಬೇಕು ರಾಜ್ಯ ಸರ್ಕಾರ ಈಗಾಗಲೇ ಒಮ್ಮೆ ಎಸ್ ಆರ್ ದರವನ್ನು ಪ್ರತಿ ವರ್ಷ ಅನ್ವಯಿಸುವುದನ್ನು ಹಿಂದಕ್ಕೆ ಪಡೆದಿರುವುದು ಗಮನಿಸಿ ಎಸ್ ಆರ್ ದರವನ್ನು ಇನ್ನು ಮುಂದೆ ಯಾವುದೇ ಕಾರಣಕ್ಕೂ ಅನ್ವಯವಾಗಬಾರದು ಎಂದು ತೀರ್ಮಾನ ಕೈಗೊಳ್ಳಬೇಕು.
  • ಖಾಲಿ ನಿವೇಶನಗಳಿಗೆ ಎಸ್ ಅರ್ ದರ ಆಧಾರಿತ ಮಾರಾಟ ತೆರಿಗೆಯ ಅಗತ್ಯವಿಲ್ಲ ವುದರಿಂದ ತಕ್ಷಣ ಸರ್ಕಾರ ಇದನ್ನು ಹಿಂದಕ್ಕೆ ಪಡೆಯಬೇಕು.
  • ಆಸ್ತಿ ತೆರಿಗೆ ಲೆಕ್ಕಾಚಾರದಲ್ಲಿ ಕಟ್ಟಡಗಳಿಗೆ ಸವಕಳಿ ನೀಡುವುದರಿಂದ ತೆರಿಗೆಗೆ ಬದ್ಧವಾಗುತ್ತದೆ. ಖಾಸಗಿ ಕಟ್ಟಡಗಳಿಗೆ ಸವಕಳಿ ನೀಡುವ ಬದ್ಧತೆಯನ್ನು ಮುಂದುವರೆಸಬೇಕು.
  • 2021-22 ನೇ ಸಾಲಿಗೆ ಹಳೆಯ ತೆರಿಗೆ ಮೇಲೆ ಶೇಕಡಾ ಐವತ್ತು ರಿಯಾಯಿತಿ ನೊಂದಿಗೆ ಪಾವತಿಸಿದ ತಕ್ಷಣ ಅವಕಾಶ ಕಲ್ಪಿಸಿ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153