5/6/21 ಶಿವಮೊಗ್ಗ ಬಿ.ಹೆಚ್. ರಸ್ತೆಯ ಹಕ್ಕಿಪಿಕ್ಕಿ ಕ್ಯಾಂಪ್ ಅಂಬೇಡ್ಕರ್ ಕಾಲೋನಿಯಲ್ಲಿ ಸುಮಾರು ಜನರು ಬೀದಿ ಬೀದಿಗಳಲ್ಲಿ ವ್ಯಾಪಾರ ಮಾಡುತ್ತಿದ್ದು ಈ ಬಾರಿ 96 ಜನರು ಆತ್ಮ ನೀರ್ಭರ್ ಯೋಜನೆ ಅಡಿ ಸಾಲ ಪಡೆದಿದ್ದು. ಕೊವಿಲ್ಡ್ ಲಸಿಕೆ ಪಡೆಯುವ ಪಟ್ಟಿಯಲ್ಲಿ ಇವರ ಹೆಸರಗಳಿದ್ದು ಇವರು ಲಸಿಕೆ ಪಡೆಯಲು ಹೆದರುತ್ತಿರುವರು.

ಇಂದು ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಚನ್ನವೀರಪ್ಪ ಗಾಮನಗಟ್ಟಿ ರವರು ಅವರ ಬಳಿ ಹೋಗಿ ನಿಮಗಾಗಿ ಈ ವಿಶೇಷ ಕೊವೀಡ್ ಲಸಿಕೆ ಪಡೆಯಲು ಅಂಬೇಡ್ಕರ್ ಭವನದಲ್ಲಿ ಕೌಂಟರ್ ತೆರೆಯಲಾಗಿದೆ ಇದರ ಸೌಲಭ್ಯ ಪಡೆಯಿರಿ ಎಂದು ಹೇಳಿದರು. ಅವರು ಲಸಿಕೆ ಪಡೆದರೆ 2 ವರ್ಷದಲ್ಲಿ ಸಾಯುತ್ತಾರಂತೆ ಯಾರೊ ತಜ್ಞರು ಹೇಳಿದ್ದಾರಂತೆ ವಾಟ್ಸಪ್ ನಲ್ಲಿ ಬಂದಿದೆ ಅಂತೆ ಅದಕ್ಕೆ ನಮಗೆ ಭಯ! ಊಟಕ್ಕೂ ತೊಂದರೆ ಯಾಗಿದೆ.

ಮಹಾ ಪೌರರಿಗೆ ಹಾಗೂ ಆಯುಕ್ತರಿಗೆ ಬೀದಿ ಬದಿ ವ್ಯಾಪಾರಿಗಳಿಗೆ ಆಹಾರ ಕಿಟ್ ನೀಡಲು ಮನವಿ ಮಾಡಲಾಗಿದೆ. ಸದ್ಯದಲ್ಲೇ ವಾರ್ಡ್ ಗಳಿಗೆ ಬಂದು ಆಹಾರ ಕಿಟ್ ನೀಡುವರು. ಈ ವಾಟ್ಸಪ್ ನಲ್ಲಿ ಬರುವ ಬೇಡವಾದ ವಿಷಯಗಳಿಗೆ ಗಮನ ಕೊಡದೆ ಆಶಾ ಕಾರ್ಯಕರ್ತೆಯರು, ಆರೋಗ್ಯ ಅಧಿಕಾರಿಗಳು ಹಾಗೂ ಪಾಲಿಕೆ ಅಧಿಕಾರಿಗಳು ಬಂದು ಹೇಳುವ ಮಾಹಿತಿ ಬಗ್ಗೆ ಗಮನ ಕೊಡಿ ಎಂದು ಹೇಳಿ ಅವರ ಮನಸಿನಲ್ಲಿ ಇರುವ ಕೊರೊನಾ ಲಸಿಕೆಯ ಭಯ ದೂರ ಮಾಡಲಾಯಿತು ಅವರಿಗೆ ಧೈರ್ಯ ತುಂಬಲಾಯಿತು.

ಈ ಸಂದರ್ಭದಲ್ಲಿ DSS ಮುಖಂಡರಾದ ಹಾಲೇಶಪ್ಪ, ಕ್ಯಾಂಪ್ ಮುಖಂಡರಾದ ಜಗ್ಗು, ಮೀನೂ ಹಾಗೂ ಕ್ಯಾಂಪ್ ನಿವಾಸಿಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ