ಮಂಜುನಾಥ್ ಶೆಟ್ಟಿ…

ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ “ನಮ್ಮ ಪೊಲೀಸ್ ನಮ್ಮ ಹೆಮ್ಮೆ” ಎಂಬ ಶೀರ್ಷಿಕೆಯಡಿ “ಫಿಟ್ನೆಸ್ ಫಾರ್ ಆಲ್”, “ಡ್ರಗ್ ಮುಕ್ತ ಕರ್ನಾಟಕ” ಮತ್ತು “ಸೈಬರ್ ಕ್ರೈಂ ಜಾಗೃತಿ” ವಿಷಯಗಳ ಧ್ಯೇಯ ವಾಕ್ಯದೊಂದಿಗೆ ಶಿವಮೊಗ್ಗ ಡಿಎಆರ್ ಕವಾಯತು ಮೈದಾನದಿಂದ 5K ಮತ್ತು 10K ಮ್ಯಾರಥಾನ್ ಓಟದ ಕಾರ್ಯಕ್ರಮ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ರವರ ನೇತೃತ್ವದಲ್ಲಿ ನಡೆಯಿತು.

ನಂತರ 5k ಮತ್ತು 10k ವಿಭಾಗದ ಮೊದಲ ಮೂರು ಶ್ರೇಣಿಯ ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪ್ರಧಾನ ಮಾಡಿದ್ದು ಹಾಗೂ ಮೊದಲ 50 ಸ್ಥಾನ ಪಡೆದ ಪುರುಷ ಮತ್ತು ಮಹಿಳಾ ವಿಭಾಗದ ಸ್ಪರ್ದಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಸದರಿ ಮ್ಯಾರಥಾನ್ ನಲ್ಲಿ ಪೊಲೀಸ್ ಅಧಿಕಾರಿ – ಸಿಬ್ಬಂದಿಗಳು, ಮತ್ತು ಶಿವಮೊಗ್ಗ ನಗರದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *