ಶಿವಮೊಗ್ಗ: ಎಂಟೆಕ್ ಮತ್ತು ಇಂಜಿನಿಯರಿಂಗ್ ಅಭ್ಯಾಸ ಮಾಡಿದ ಯುವಕರು ಸೇರಿಕೊಂಡು ವೀ ಡನ್ ಎಂಬ ಮೊಬೈಲ್ ಆಪ್ ಸೇವೆಯ ಮೂಲಕ ಗ್ರಾಹಕರಿಗೆ ವಸ್ತುಗಳನ್ನು ಮನೆಬಾಗಿಲಿಗೆ ತಲುಪಿಸುತ್ತೇವೆ ಎಂದು ಸಂಸ್ಥೆಯ ಸಂದೀಪ್ ತಿಳಿಸಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೊಂದು ದೇಶದಲ್ಲಿ ಈಗಾಗಲೇ ಇರುವ ಒಂದು ಸೇವಾ ಸಂಸ್ಥೆಯಾಗಿದೆ. ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ನಗರದಲ್ಲಿ ಎಲ್ಲಿಂದಲಾದರೂ ಏನನ್ನಾದರೂ ಸರಿಯಾದ ಸಮಯಕ್ಕೆ ತಲುಪಿಸಲಾಗುವುದು. ಉತ್ಪಾದಕರಿಂದ ಸಾರ್ವಜನಿಕರಿಗೆ ಸೇತುವೆಯಾಗಿ ನಾವು ಕೆಲಸ ಮಾಡುತ್ತೇವೆ.

ಸಾರ್ವಜನಿಕರ ಖರೀದಿಯಲ್ಲಿ ಯಾವುದೇ ಕನಿಷ್ಠ ಆರ್ಡರ್ ಅಗತ್ಯವಿಲ್ಲ ಎಂದರು.ಹೋಟೆಲ್ ತಿಂಡಿ, ತಿನಿಸು, ಅಗತ್ಯ ಔಷಧಿಗಳು, ಸಾಕು ಪ್ರಾಣಿ ಸಾಂಗ್ರಿ ಪೂರೈಕೆ, ನಗರದಲ್ಲಿ ಯಾವುದೇ ಶಾಪ್ ನಲ್ಲಿ ಖರೀದಿಸಿದ ವಸ್ತುಗಳು, ದಿನಸಿ ಸಾಮಗ್ರಿಗಳು, ಮಾಂಸ ಮತತ್ಉ ಮೀನು, ಉಡುಗೊರೆಗಳು ಹೀಗೆ ಎಲ್ಲಾ ಬಗೆಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುತ್ತೇವೆ ಎಂದರು.

ಪ್ರಮುಖವಾಗಿ ಇದೊಂದು ಸೇವೆಯಾಗಿದೆ. ವಯಸ್ಸಾದವರಿಗೆ ತುರ್ತಾಗಿ ಔಷಧಗಳು ಬೇಕಾಗುತ್ತವೆ. ಇಂತಹ ಸಂದರ್ಭದಲ್ಲಿ ಲಾಭದ ದೃಷ್ಠಿಯನ್ನಿಟ್ಟುಕೊಳ್ಳದೇ ಸೇವೆಯ ದೃಷ್ಠಿಯಿಂದ ನಮ್ಮ ಸಂಸ್ಥೆ ಕೆಲಸ ಮಾಡುತ್ತದೆ. ಇಂದಿನಿಂದಲೇ ನಾವು ನಮ್ಮಸ ಸೇವೆಯನ್ನು ಆರಂಭಿಸಿದ್ದು, ಕ್ರಮೇಣ ಇದನ್ನು ವಿಸ್ತರಿಸುವ ಉದ್ದೇಶ ಹೊಂದಿದ್ದೇವೆ.  ಸದ್ಯಕ್ಕೆ ಬೆಳಗ್ಗೆ 6 ರಿಂದ ರಾತ್ರಿ 11 ರವರೆಗೆ ನಗರ ವ್ಯಾಪ್ತಿಯಲ್ಲಿ ಈ ಸೇವೆ ಇದ್ದು, ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ವಿಸ್ತರಿಸಲು ಯೋಜಿಸಿದ್ದೇವೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಕಿರಣ್, ಅಮೃತ್, ಚಿಟ್ಟಿಬಾಬು ಇದ್ದರು. 

ವರದಿ ಮಂಜುನಾಥ್ ಶೆಟ್ಟಿ…