ಜಿಲ್ಲಾ ರಕ್ಷಣಾಧಿಕಾರಿಗಳು ರಕ್ತದಾನ ಮಾಡುವ ಮೂಲಕ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತ, ತಾಂತ್ರಿಕ ವಿದ್ಯಾರ್ಥಿಗಳು ತಮ್ಮದೇ ಆದ ಕಾರ್ಯ ಒತ್ತಡದಲ್ಲಿ ಸೇರಿ ಹೋಗುತ್ತಾರೆ. ನಾನು ಸಹ ತಾಂತ್ರಿಕ ವಿದ್ಯಾರ್ಥಿ ಆದರೂ ಸೇವಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದೇನೆ. ಹಾಗೆಯೆ ಹಲವಾರು ಸಂಘ ಸಂಸ್ಥೆಗಳು,ಯೂತ್ ಹಾಸ್ಟೇಲ್ಸ್ ಅಸೋಸಿಯೇಷನ್ ಆಪ್ ಇಂಡಿಯ, ರೋಟರಿ, ರೆಡ್ ಕ್ರಾಸ್, ಎನ್.ಎಸ್.ಎಸ್. ಸಂಘಟಣೆ ಜೊತೆಗೂಡಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳಿ ಎಂದು ಸ್ವಯಂ ಪ್ರೇರಿತ ರಕ್ತದಾನಿಗಳ ಸಂಘ, ರಾಷ್ಟ್ರೀಯ ಶಿಕ್ಷಣ ಸಮಿತಿ, ವೈಹೆಚ್ ಐಎ ತರುಣೋದಯ ಘಟಕ ರಕ್ತದಾನಿ ವಿಭಾಗ ಆಯೋಜಿಸಿದ ರಕ್ತ ದಾನ ಶಿಬಿರ ಉದ್ಘಾಟಿಸಿ ಮಾತನಾಡುತ್ತಿದ್ದರು.

ರಕ್ತದಾನ ಅಮೂಲ್ಯವಾದ ಕಾರ್ಯ, ಇಂತಹ ಕಾರ್ಯಕ್ರಮ ಆಯೋಜಿಸಿರುವ ತಮ್ಮ ಕಾಲೇಜು ಪ್ರಶಂಸನೀಯ, ಇಂತಹ ಕಾರ್ಯಕ್ರಮದಲ್ಲಿ ನನ್ನನ್ನೂ ಆಹ್ವಾನಿಸಿದ್ದಕ್ಕಾಗಿ ಧನ್ಯವಾದಗಳು.
ಪ್ರಾಂಶುಪಾಲರಾದ ಡಾ.ಕೆ.ನಾಗೇಂದ್ರ ಪ್ರಸಾದ್ ಮಾತನಾಡುತ್ತ ನಮ್ಮ ಜಿಲ್ಲಾ ರಕ್ಷಣಾಧಿಕಾರಿಗಳು ಯುವ ಜನತೆಗೆ ಉತ್ತಮ ಉದಾಹರಣೆ, ತಮ್ಮ ಇಪ್ಪತ್ತೇಳನೆ ವಯಸ್ಸಿಗೆ ಐಪಿಎಸ್ ಅಧಿಕಾರಿಗಳಾದರು, ನಿಮ್ಮ ಓದಿನೊಂದಿಗೆ ಇತರೆ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ರಕ್ತದಾನಕ್ಕೆ ಪರ್ಯಾಯ ವಸ್ತುಗಳು ಇಲ್ಲ, ಪುಣ್ಯದ ಕೆಲಸ. ಮಗು ಜನನದ ಸಮಯ, ಅಪಘಾತದ ಸಮಯದಲ್ಲಿ ರಕ್ತದ ಅವಶ್ಯಕತೆ ತುಂಬಾ ಇರುತ್ತದೆ. ತಾವೆಲ್ಲರೂ ಕೈಜೋಡಿಸುವುದರಿಂದ ಇಂತಹ ಕಾರ್ಯಕ್ರಮ ಹಮ್ಮಿ ಕೊಳ್ಳಲು ಸಾದ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ದರಣೇಂದ್ರ ದಿನಕರ್, ಇಂತಹ ತ್ತೊಂದರೆಯ ಸಮಯದಲ್ಲಿ ರಕ್ತದ ಅವಶ್ಯಕತೆ ಬಹಳ ಇದೆ, ಕಳೆದ ಹದಿನಾಲ್ಕು ವರ್ಷದಿಂದ ಈ ಕಾಲೇಜು ನಮಗೆ ಬಹಳ ಸಹಕಾರಿ ಯಾಗಿದೆ. ನಗರದ ರೆಡ್ ಕ್ರಾಸ್, ರೋಟರಿ ಮತ್ತು ಮೆಗಾನ್ ಆಸ್ವತ್ರೆ ರಕ್ತ ನಿದಿಗಳು ಆಗಮಿಸಿವೆ, ತಮ್ಮೊಂದಿಗೆ ತಮ್ಮ ಸ್ನೇಹಿತರನ್ನು ಕರೆ ತಂದು ರಕ್ತದಾನ ಮಾಡಿ ಎಂದರು.
ಕಾರ್ಯಕ್ರಮದಲ್ಲಿ ವೈಹೆಚ್ ಐಎ ಛೆರ್ಮನ್ ಎಸ್.ಎಸ್.ವಾಗೇಶ್, ಕಾರ್ಯದರ್ಶಿ ಸುರೇಶ್ ಕುಮಾರ್, ರೋಟರಿ ಜ್ಯೂಬಿಲಿ ರೇಣುಕಾರಾಧ್ಯ, ಬಸವರಾಜ್.ಹೆಚ್ ಜಿ.ವಿಜಯಕುಮಾರ್, ವಿ.ಜಿ.ಲಕ್ಷ್ಮೀನಾರಾಯಣ್, ಅಶ್ವಿನಿ, ಮಧು ಮುಂತಾದವರಿದ್ದರು.
ಅಪೂರ್ವ ರವರ ಪ್ರಾರ್ಥನೆ, ಪ್ರೊ.ಆನಂದರಾಜ್ ಸ್ವಾಗತಿಸಿದರು, ಪ್ರೊ. ಅರುಣ್ ಕುಮಾರ್.ಪಿ ವಂದಿಸಿದರು.

ವರದಿ ಮಂಜುನಾಥ್ ಶೆಟ್ಟಿ…