ಶಿವಮೊಗ್ಗ ತಾಲೂಕಿನ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊಳಲೂರು ಜಿ.ಪಂ ವ್ಯಾಪ್ತಿಯ ಮೇಲಿನಹನಸವಾಡಿ, ಬೇಡರಹೋಸಹಳ್ಳಿ ,ಸೂಗೂರು,ಹೊಳಲುರು,ಹರಮಘಟ್ಟ,ಹಡೋನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ತಾಲೂಕು ಆಡಳಿತದೊಂದಿಗೆ ಗ್ರಾಮಾಂತರ ಶಾಸಕರಾದ ಸನ್ಮಾನ್ಯ ಶ್ರೀ ಕೆ.ಬಿ. ಅಶೋಕ ನಾಯ್ಕ ರವರು ಭೇಟಿ ನೀಡಿ ಟಾಸ್ಕ್ ಪೊರ್ಸ್ ಸಮಿತಿ ಸಭೆ ನಡೆಸಿ “ಕೋವಿಡ್ ನಿಯಂತ್ರಣ ಹಾಗೂ ನಿರ್ವಹಣೆ” ಕುರಿತು ಅಧಿಕಾರಿಗಳೊಂದಿಗೆ ಮಾಹಿತಿ ಪಡೆದರು. ಕೋವಿಡ್ ನಿಂದ ಮೃತಪಟ್ಟ ಬಂಧುಗಳಿಗೆ ವೈಯಕ್ತಿಕವಾಗಿ 5000 ರೂಗಳ ಧನ ಸಹಾಯ ನೀಡಿದರು.

ವ್ಯಾಕ್ಸಿನೇಷನ್‌ಗೆ ಸಂಭವಿಸಿದಂತೆ ಅಂಗನವಾಡಿ ಕಾರ್ಯಕರ್ತೆಯರು,ಆಶಾ ಕಾರ್ಯಕರ್ತೆಯರು, ಗ್ರಾ.ಪಂ ಸದಸ್ಯರು, ಮತ್ತು ಗ್ರಾಮಸ್ಥರೊಂದಿಗೆ ಚರ್ಚಿಸಲಾಯಿತು. ಈ ಸಮಯದಲ್ಲಿ ಮಾನ್ಯ ಶಾಸಕರು ಮಾತನಾಡಿ ದೇಶದಲ್ಲಿ ಕೋರೊನ 2 ನೇ ಅಲೆ ತಗ್ಗಿದ್ದು, ಮುಂದಿನ ದಿನಗಳಲ್ಲಿ ಅತಿ ಹೆಚ್ಚು‌ ವ್ಯಾಕ್ಸಿನೇಷನ್‌ ದೊರೆಯಲಿದ್ದು. ಎಲ್ಲರಿಗೂ ಪ್ರೇರಣೆ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಕಲ್ಲಪ್ಪ, ಆರೋಗ್ಯ ಇಲಾಖೆಯವರು, ಪೊಲೀಸ್ ವೃತ್ತ ನೀರಿಕ್ಷಕರು, ಗ್ರಾಮ ಪಂಚಾಯತ್ ಅಧಕ್ಷರು ಹಾಗೂ ಉಪಾಧ್ಯಕ್ಷರು ಟಾಸ್ಕ್ ಪೋರ್ಸ್ ಸಮಿತಿ ಸದಸ್ಯರು, ಆರೋಗ್ಯ ಇಲಾಖೆ, ಕೃಷಿ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ವಿರೂಪಾಕ್ಷಪ್ಪ ರವರು ಮಾಮ್ ನಿರ್ದೇಶಕರು. ಮತ್ತು ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ: 9611584153