ಕ್ಲಬ್‌ಗಳಲ್ಲಿ ಕ್ರೀಡೆ ಹಾಗೂ ಮನೋರಂಜನೆಗೆ ಹೆಚ್ಚು ಒತ್ತು ಕೊಡಿ ಎಂದು ನೂತನ ವಿಧಾನ ಪರಿಷತ್ ಸದಸ್ಯರಾದ ಶ್ರೀ.ಡಿ.ಎಸ್.ಅರುಣ್ ನುಡಿದರು. ಅವರು ಇಂದು ನಗರದ ರೋವರ್ಸ್ ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತ, ಜನರಲ್ಲಿ ಕ್ಲಬ್ ಎಂದರೆ ತಪ್ಪು ಭಾವನೆ ಇದೆ, ಅದು ತಪ್ಪು, ಹಿಂದಿನಿಂದಿಲೂ ಕ್ಲಬ್‌ಗಳಲ್ಲಿ ಒಳ್ಳೆಯ ಮಾತು ಕತೆ, ತೀರ್ಮಾನಗಳು ಕ್ಲಬ್‌ಗಳಲ್ಲಿ ನಡೆಯುತ್ತಿದ್ದವು, ಕ್ಲಬ್ ಸಂಸ್ಕೃತಿಯಿಂದ ಮನಸ್ಸಿಗೆ ಸಂತೋಷದ ಜೊತೆಗೆ ಒಳ್ಳೆಯ ಸ್ನೇಹಬಾಂಧವ್ಯ ವೃದ್ಧಿಯಾಗುತ್ತದೆ, ಬರುವ ದಿನಗಳಲ್ಲಿ ಕ್ರೀಡಾ ಸಂಕೀರ್ಣವನ್ನು ಸ್ಥಾಪನೆ ಮಾಡಿ, ನಮ್ಮ ಕೈಲಾದ ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದರು. ಹಾಗೂ, ೫೦ವರ್ಷ ಇತಿಹಾಸವಿರುವ ಈ ಫ್ಯಾಮಿಲಿ ಕ್ಲಬ್‌ನ ಸದಸ್ಯರು ಕ್ರೀಡೆಯಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವುದನ್ನು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ರೋವರ್ಸ್ ಕ್ಲಬ್ ಆಡಳಿತ ಮಂಡಳಿಯವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಕ್ರೀಡಾ ಸಂಕೀರ್ಣ ಕಟ್ಟಡಕ್ಕೆ ಸಹಕಾರ ಮತ್ತು ಧನ ಸಹಾಯ ನೀಡಲು ಮನವಿ ಸಲ್ಲಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋವರ್ಸ್ ಕ್ಲಬ್(ರಿ) ಅಧ್ಯಕ್ಷರಾದ ಶ್ರೀ.ಕೆ.ಸಿ.ಮಲ್ಲಿಕಾರ್ಜುನಪ್ಪ ನವರು ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಶ್ರೀ.ಕೆ.ರವಿ, ಕಾರ್ಯದರ್ಶಿಯವರಾದ ಶ್ರೀ.ಆರ್.ಎಸ್.ದತ್ತಾತ್ರಿ, ಸಹ ಕಾರ್ಯದರ್ಶಿಯವರಾದ ಶ್ರೀ.ಕೃಷ್ಣ.ಹೆಚ್, ಖಜಾಂಚಿಯವರಾದ ಶ್ರೀ.ನಾಗರಾಜ್‌ಪಾಟ್ಕರ್.ಪಿ.ಎಲ್ ಮತ್ತು ಕಾರ್ಯಕಾರಿ ಸಮಿತಿಯ ನಿರ್ದೇಶಕರುಗಳಾದ ಶ್ರೀ.ಕೆ.ಶಂಕರ್, ಶ್ರೀ.ಅಮ.ಪ್ರಕಾಶ್, ಶ್ರೀ.ಎಂ.ಆರ್.ಬಸವರಾಜ್, ಶ್ರೀ.ಎಂ.ಬಿ.ವಿನಾಯಕ್, ಶ್ರೀ.ಜಿ.ವಿಜಯಕುಮಾರ್, ಶ್ರೀ.ಚಿನ್ನಪ್ಪ, ಶ್ರೀ.ಎ.ಹೆಚ್.ಸುನಿಲ್, ಶ್ರೀ.ಎ.ಜಿ.ಶ್ರೀರಾಮ್, ಶ್ರೀ.ಎಸ್.ಡಿ.ಗೋವಿಂದರಾಜ್, ಸದಸ್ಯರಾದ ಶ್ರೀ.ಕೆ.ಪಿ.ಪುರುಷೋತ್ತಮ್‌ರವರು ಉಪಸ್ಥಿತರಿದ್ದರು.