ಶಿವಮೊಗ್ಗ: ಮಂಜುನಾಥ ಬಡಾವಣೆಯ(ಅಣ್ಣಾನಗರ) ಸುತ್ತಮುತ್ತ ಮುಸ್ಲಿಂ ಗೂಂಡಾಗಳ ಮತ್ತು ಪುಂಡರ ಹಾವಳಿ ಹೆಚ್ಚಾಗಿರುವುದರಿಂದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಇಂದು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಸಲ್ಲಿಸಿದ ಮನವಿಯಲ್ಲಿ ಬಡಾವಣೆಯ ನಿವಾಸಿಗಳು ಆಗ್ರಹಿಸಿದ್ದಾರೆ.

ಬಡಾವಣೆಯಲ್ಲಿನ ಶ್ರೀರಾಮಾಂಜನೇಯ ವೃತ್ತದಲ್ಲಿರುವ ನ್ಯೂ ಟೀ ಸ್ಟಾಲ್ ನಲ್ಲಿ ಗುಂಪುಗಾರಿಕೆ ನಡೆಯುತ್ತಿದ್ದು, ಇದರಿಂದ ಹೆಣ್ಣು ಮಕ್ಕಳಿಗೆ ಚುಡಾಯಿಸುವುದು, ಗಾಂಜಾ ಸೇವನೆ ಮತ್ತು ಮಾರಾಟ ನಡೆಯುತ್ತಿದೆ. ಇದರಿಂದ ಸುತ್ತಮುತ್ತಲಿನ ಹೆಣ್ಣು ಮಕ್ಕಳು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಈ ಟೀ ಸ್ಟಾಲ್ ತೆರವುಗೊಳಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಆರ್.ಎಂ.ಎಲ್. ನಗರದ ಕೃಷ್ಣ ರೈಸ್ ಮಿಲ್ ಆವರಣ ಗಾಂಜಾ ಸೇವನೆಯ ಅಡ್ಡವಾಗಿದೆ. ಆ ಸ್ಥಳದಲ್ಲಿ ಪೊಲೀಸ್ ಬೀಟ್ ಹೆಚ್ಚಿಸಬೇಕು. ಕಿಣಿ ಲೇಔಟ್ ನಲ್ಲಿರುವ ಶನೇಶ್ವರ ದೇವಾಲಯದ ಆವರಣದಲ್ಲಿ ಮುಸ್ಲಿಂ ಯುವಕರು ಗಾಂಜಾ ಸೇವನೆ ಮಾಡುವುದು ಹಾಗೂ ಅಲ್ಲಿನ ಅರ್ಚಕರಿಗೆ ತೊಂದರೆ ನೀಡುವ ಕೃತ್ಯ ನಡೆಯುತ್ತಿದೆ. ನಿನ್ನೆ ಸಂಜೆ ಆನಂದ ರಾವ್ ಬಡಾವಣೆಯ ನಾಲ್ವರು ವಿದ್ಯಾರ್ಥಿಗಳು ಮನೆಪಾಠ ಮುಗಿಸಿಕೊಂಡು ಆರ್.ಎಂ.ಎಲ್. ನಗರದ ಕಿದ್ವಾಯಿ ಶಾಲೆ ಮುಂಭಾಗದಲ್ಲಿ ಹೋಗುತ್ತಿರುವಾಗ ಆ ವಿದ್ಯಾರ್ಥಿಗಳ ಮೇಲೆ ಮುಸ್ಲಿಂ ಗೂಂಡಾಗಳಿಂದ ಮೊಬೈಲ್, ಮತ್ತು ಹಣಕ್ಕಾಗಿ ಮಾರಣಾಂತಿಕ ಹಲ್ಲೆ ನಡೆದಿದೆ. ಇದನ್ನು ಪ್ರಶ್ನಿಸಲು ಹೋದ ವಿದ್ಯಾರ್ಥಿಗಳ ಪೋಷಕರ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ಈ ರೀತಿ ಗೂಂಡಾಗಳು ಹಾಗೂ ಪುಂಡರು ಆಗಾಗ ಸಾರ್ವಜನಿಕರನ್ನು ಬೆದರಿಸಿ ಹಣ ಕಸಿದುಕೊಳ್ಳುವುದು, ಹೆಣ್ಣುಮಕ್ಕಳನ್ನು ಚುಡಾಯಿಸುವುದು ಹೆಚ್ಚಾಗುತ್ತಿದೆ. ಆದ್ದರಿಂದ ಪೊಲೀಸ್ ಬೀಟ್ ಹೆಚ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲಲ್ಲಿ ಸಿಸಿ ಕ್ಯಾಮೆರಾ ಅಳವಡಿಸವೇಕೆಂದು ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ಬಡಾವಣೆಯ ಪ್ರಮುಖರಾದ ಕಾರ್ಪೋರೇಟರ್ ಯು.ಹೆಚ್. ವಿಶ್ವನಾಥ್, ಪ್ರಭಾಕರ್, ಲಿಂಗರಾಜ್, ಮುರುಗೇಶ್, ಎಸ್.ಜಿ. ರಾಜು, ಕಾರ್ತಿಕ್, ದೀನದಯಾಳ್ ಮೊದಲಾವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…