ಶಿವಮೊಗ್ಗ ಮಹಾನಗರಪಾಲಿಕೆಯಲ್ಲಿ ಇದೀಗ ನೀರು ಸರಬರಾಜು ವಿಭಾಗದಲ್ಲಿ ಪೈಪ್ ಲೈನ್ ರಿಪೇರಿಗಾಗಿ ಬಳಸುವ ಪೈಪ್.ಕಾಲರ್ ಹಾಗು ಇತರೆ ವಸ್ತುಗಳ ಪರಿಶೀಲನೆ ನಡೆಸಿದ ಉಪಮೇಯರ್ ಗನ್ನಿ ಶಂಕರ್ ರವರಿಗೆ ಸ್ವಾಗತಿಸಿದ್ದು ಕಳಪೆ ಪೈಪ್.ಕಾಲರ್ ಗಳ ಕಳಪೆ ವಸ್ತುಗಳನ್ನು ಸ್ವತಃ ತಾವೇ ಹೊರಹಾಕಿ ತುಳಿದು ಪರಿಶೀಲನೆ ನಡೆಸಿದಾಗ ಆ ಪೈಪ್ ನಲುಗಿ ಹೋಗಿ ಒಡೆದು ಹೋಯಿತು…ಇದರಿಂದ ಸಿಟ್ಟಿಗೆದ್ದ ಉಪಮೇಯರ್ ಕೂಡಲೇ ಸಂಬಂದಪಟ್ಟ ಅಧಿಕಾರಿಗಳಿಗೆ ಪೈಪ್ ಖರೀದಿಸಿದ ಕಂಪನಿಗೆ ಹಣ ಪಾವತಿಸದಂತೆ ಆದೇಶಿಸಿದರು.
ಆಗ ಮಾತನಾಡಿದ ಅವರು ಜನರು ನಮ್ಮ ಮೇಲೆ ಭರವಸೆ ಇಟ್ಟು ಮತ ಹಾಕಿ ಗೆಲ್ಲಿಸಿದ್ದಾರೆ..ನೀರು ಸರಬರಾಜಿನಲ್ಲಿ ವ್ಯತ್ಯಯವಾದರೆ ಜನ ನಮ್ಮನ್ನು ಬೈಯುತ್ತಾರೆ..ಆದಿಕಾರಿಗಳು ಶಾಮೀಲಾಗಿ ಇಂತಹ ಕಳಪೆ ವಸ್ತುಗಳನ್ನು ಖರೀದಿಸಿದರೆ ಹೇಗೆ.ಇದರ ಬಗ್ಗೆ ಪರಿಶೀಲನೆ ನಡೆಸಿ ಸಂಬಂದಪಟ್ಟವರ ಮೇಲೆ ಕ್ರಮ ಕೈಗೊಳ್ಳುವುದಾಗಿ ಉಪಮೇಯರ್ ಗನ್ನಿ ಶಂಕರ್ ತಿಳಿಸಿದರು.
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ
ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153