ಶಿವಮೊಗ್ಗ: ಬಿಜೆಪಿ ಆಡಳಿತ ಇರುವ ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಹಾಗೂ ಬಿಹಾರದಲ್ಲಿ ಯುವಕರ ಮೇಲೆ ಪೊಲೀಸರ ಲಾಠಿ ಪ್ರಹಾರವನ್ನು ನಡೆಸಿರುವುದನ್ನು ಖಂಡಿಸಿ ಶಿವಮೊಗ್ಗ ನಗರ ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಕಾರ್ಯಕರ್ತರು ಇಂದು ಶಿವಪ್ಪನಾಯಕ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದರು.

ಉತ್ತರಪ್ರದೇಶ ಬಿಜೆಪಿ ಸರಕಾರವು 2019ರಲ್ಲಿ ರೈಲ್ವೆ ಇಲಾಖೆಯ 35,000 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. 2019 ಜುಲೈನಲ್ಲಿ ನಡೆಯಬೇಕಾಗಿದ್ದ ಪರೀಕ್ಷೆ 2021 ರಲ್ಲಿ ಪರೀಕ್ಷೆ ನಡೆಯಿತು. 2022ರಲ್ಲಿ ಫಲಿತಾಂಶ ಬಿಡುಗಡೆಗೊಂಡು 7 ಲಕ್ಷದ 5 ಸಾವಿರದಲ್ಲಿ 446 ಜನ ಉತ್ತೀರ್ಣರಾದರು. ಪರೀಕ್ಷೆಯಲ್ಲಿ ಲೋಪ ನಡೆದ ಬಗ್ಗೆ ಅಭ್ಯರ್ಥಿಗಳು ಪ್ರಶ್ನಿಸಿ ಪ್ರತಿಭಟನೆ ನಡೆಸಿದ್ದಕ್ಕೆ ಬಿಜೆಪಿ ಆಡಳಿತದ ಉತ್ತರಪ್ರದೇಶ ಹಾಗೂ ಬಿಹಾರ ಸರ್ಕಾರಗಳು ಅಭ್ಯರ್ಥಿಗಳ ಹಾಸ್ಟೆಲ್ ಗಳಿಗೆ ಮೇಲೆ ಲಾಠಿ ಚಾರ್ಜ್ ಮಾಡುವ ಮುಖಾಂತರ ದೌರ್ಜನ್ಯ ನಡೆಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇನೆಂದು ಸುಳ್ಳು ಹೇಳಿ ಕೇಂದ್ರದಲ್ಲಿ ಆಡಳಿತ ಮಾಡುತ್ತಿರುವ ಬಿಜೆಪಿ ಸರ್ಕಾರದ ಬಗ್ಗೆ ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಎಂದರು.ಪ್ರತಿಭಟನೆಯಲ್ಲಿ ಎನ್ಎಸ್ಯುಐ ರಾಜ್ಯ ಕಾರ್ಯದರ್ಶಿ ಹೆಚ್.ಎಸ್. ಬಾಲಾಜಿ, ಮಾಜಿ ಶಾಸಕ ಆರ್.ಪ್ರಸನ್ನಕುಮಾರ್, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ, ಕಾಂಗ್ರೆಸ್ ಮುಖಂಡ ಕೆ.ದೇವೇಂದ್ರಪ್ಪ, ದಕ್ಷಿಣ ಬ್ಲಾಕ್ ಅಧ್ಯಕ್ಷ ವಿನಯ್ ತಾಂಡ್ಲೆ, ಚಿರಂಜೀವಿ ಬಾಬು, ಅಲ್ಪಸಂಖ್ಯಾಂತರ ವಿಭಾಗದ ನಗರಾಧ್ಯಾಕ್ಷ ಮೊಹಮ್ಮದ್ ನಿಹಾಲ್, ಶಿವಮೊಗ್ಗ ಜಿಲ್ಲಾ ಕಿಸಾನ್ ಕಾರ್ಯಾಧ್ಯಕ್ಷ ಗಿರೀಶ್ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…