29/01/2022 ಶನಿವಾರ ಬೆಳಗ್ಗೆ ಶಿವಮೊಗ್ಗ ನಗರದ, ಮಹಾನಗರ ಪಾಲಿಕೆಯ ಆಯುಕ್ತರ ಕಛೇರಿ ಮುಂಭಾಗ ಆವರಣದಲ್ಲಿ ಶಿವಮೊಗ್ಗ ಅಣ್ಣಾ ಹಜಾರೆ ಹೋರಾಟ ಸಮಿತಿಯ ಸದಸ್ಯರು ಮಹಾನಗರ ಪಾಲಿಕೆಯ ವಿರುದ್ಧ ಧರಣಿ ಸತ್ಯಾಗ್ರಹ ಹಮ್ಮಿಕೋಳ್ಳಲಾಗಿದ್ದು,

ಸಾರ್ವಜನಿಕರ ತೆರಿಗೆ ಹಣದಲ್ಲಿ ಇಷ್ಟು ವರ್ಷಗಳಿಂದ ಕೊಳೆತು ನಾರುತ್ತಿದ್ದ ಕನ್ಸರ್ವೆನ್ಸಿಯ ಸ್ಮಾರ್ಟ್ ಸಿಟಿ ಅಭಿವೃದ್ಧಿ ಆಡಿಯಲ್ಲಿ ಲಕ್ಷಾಂತರ ರೂಪಾಯಿ ಹಣ ಖರ್ಚುಮಾಡಿ, ದ್ವಿಚಕ್ರ ವಾಹನ ಹಾಗೂ ನಾಲ್ಕು ಚಕ್ರದ ವಾಹನಗಳ ಪಾರ್ಕೀಂಗ್ ವ್ಯವಸ್ಥೆಗೆ ಅಭಿವೃದ್ಧಿ ಗೋಳಿಸಲಾಗಿದೆ, ಅದು ಇದುವರೆಗೂ ಪಾಲಿಕೆ ತನ್ನ ವಶಕ್ಕೆ ಪಡೆದಿಲ್ಲ, ಇದರ ಬಗ್ಗೆ ಹಿಂದಿನ ಜಿಲ್ಲಾಧಿಕಾರಿಗಳಾದ ಮಾನ್ಯ ಶ್ರೀ ಕೆಬಿ.ಶಿವಕುಮಾರ ಹಾಗೂ ಆಯುಕ್ತರಾದ ಮಾನ್ಯ ಶ್ರೀ ಚಿದಾನಂದ ವಟಾರೆ ರವರೊಂದಿಗೆ ಹಲವು ಬಾರಿ ಚರ್ಚೆಗಳು ಆಗಿವೆ, ಮಹಾನಗರ ಪಾಲಿಕೆಯ ಆಸ್ತಿಗಳನ್ನು ಮುಟ್ಟುಗೊಲು ಹಾಕಿ ಕೋಳಿ ಎಂದು ಅದು ಇದುವರೆಗೂ ಅಗಲಿಲ್ಲ.

ಈಗ ಕನ್ಸರ್ವೆನ್ಸಿ ಅಭಿವೃದ್ಧಿ ಅದಕಡೆ ಒಂದೊಂದೇ ಮನೆಯ ಗೋಡೆ ಒಡೆದು ಮಳಿಗೆ ಮಾಡಿ, ಗ್ಯಾರೇಜ್, ಕ್ಯಾಂಡಿಮೆಂಡ್ಸ್, ಬಟ್ಟೆ ಅಂಗಡಿ, ದಿನಸಿ ಅಂಗಡಿ ಇನ್ನೂ ಹಲವು ಅಂಗಡಿ ತಲ್ಲೆ ಎತ್ತುತ್ತಿವೆ. ಪಾಲಿಕೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ ತಮ್ಮ ಆಸ್ತಿಯನ್ನು ಪಡೆಯಿರಿ ಇಲ್ಲದಿದ್ದರೆ ಕನ್ಸರ್ವೆನ್ಸಿಯ ಅಭಿವೃದ್ಧಿ ನಂತರ ಅಲ್ಲಿಯ ಜನರು ಕೋರ್ಟ್ ಗೆ ಹೋಗುವುವರು, ಸಾರ್ವಜನಿಕರ ತೆರಿಗೆ ಹಣ ಫೋಲ್ ಮಾಡುವ ಬದಲು ಎರಡು ಬದಿಯ ಮನೆ ಮಾಲೀಕರಿಗೆ ಅರ್ಧ, ಅರ್ಧ ಮಾಡಿ ಹಂಚಿ ಪಾಲಿಕೆಗೆ ಆದಾಯ ಮಾಡಿ ಎಂದು ಹಲವು ಬಾರಿ ಮನವಿ ಮಾಡಲಾಗಿದೆ. ಅದು ಇದುವರೆಗೂ ಬಗೆ ಹರಿಯುತ್ತಿಲ್ಲ,

ಹಾಗೆಯೇ ನಗರದ ಎಲ್.ಎಲ್.ಆರ್. ರಸ್ತೆಯ ಸಿ.ಎಸ್‌. ಆಸ್ಪತ್ರೆ ಹಿಂಭಾಗದ ಕನ್ಸರ್ ವೆನ್ಸಿ ರಾತ್ರಿಯಾದರೆ ಅನೈತಿಕ ಚಟುವಟಿಕೆ, ತುಂಡು ಗುಂಡು ಪಾರ್ಟಿ ರಾತ್ರಿ ವೇಳೆ ನಡೆಯುತ್ತಿದೆ, ಕಸದ ರಾಶಿ ತಂದು ಸುರಿಯುವರು, ಬೆಂಕಿ ಹಚ್ಚುವರು, ಆಸ್ಪತ್ರೆಯ ಗೋಡೆ ಪಕ್ಕದಲ್ಲಿ ಆಕ್ಸಿಜನ್ ಸಿಲ್ಡರ್ ಇದೆ, ಸ್ಪೋಟವಾದರೆ ಯಾರು ಹೊಣೆ?

ಕಳೆದ ಕೆಲ ತಿಂಗಳುಗಳಿಂದ ಈ ಕುರಿತು ಹಲವಾರು ಬಾರಿ ಮೇಯರ್ ಹಾಗೂ ಆಯುಕ್ತರಿಗೆ ಮನವಿ ಮಾಡಿದ್ದರೂ ಸಹ ಯಾವುದೇ ಕ್ರಮ ಕೈ ಗೊಳ್ಳದಿರುವುದನ್ನು ಖಂಡಿಸಿ, ಇದುವರೆಗೂ ಬಗೆಹರಿಸಲು ವಿಫಲವಾದ ಪಾಲಿಕೆ ವಿರುದ್ಧ ಅಣ್ಣಾ ಹಜಾರೆ ಹೋರಾಟ ಸಮಿತಿಯಿಂದ ಇಂದು ಧರಣಿ ಸತ್ಯಾಗ್ರಹ ಹಮ್ಮಿಕೋಳ್ಳಲಾಗಿತ್ತು, ನಂತರ ಮೇಯರ್ ಶ್ರೀಮತಿ ಸುನೀತಾ ಅಣ್ಣಪ್ಪ, ಹಾಗೂ ಆಯುಕ್ತರಾದ ಮಾನ್ಯ ಶ್ರೀ ಚಿದಾನಂದ ವಟಾರೆ ರವರು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು, ಇದರ ಬಗ್ಗೆ ಕ್ರಮ ಕೈಗೋಳ್ಳುವುದಾಗಿ ಭರವಸೆ ನೀಡಿದರು.

ಈ ಧರಣಿ ಸತ್ಯಾಗ್ರಹ ದಲ್ಲಿ ಶಿವಮೊಗ್ಗ ಅಣ್ಣಾ ಹಜಾರೆ ಹೋರಾಟ ಸಮಿತಿಯ ಅಧ್ಯಕ್ಷರಾದ ಡಾ॥ ಬಿ.ಎಂ. ಚಿಕ್ಕಸ್ವಾಮಿ ಹಾಗು ಪ್ರಧಾನ ಕಾಯ೯ದಶಿ೯ ಟಿ.ಎಂ. ಅಶೋಕ್ ಯಾದವ್, ಜನಮೇಜಿರಾವ್, ಜನಾರ್ಧನ್ ಪೈ, ಕಲ್ಲಣ್ಣ, ತಿಮ್ಮಣ್ಣ, ಚಿದಾನಂದ, ಸುಬ್ರಹ್ಮಣ್ಯ, ಸುಬ್ಬಣ್ಣ, ಚನ್ನವೀರಪ್ಪ ಗಾಮನಗಟ್ಟಿ, ನಾಗರಾಜ್, ಎನ್.ಬಿ.ಸಿಂಗ್ ಇನ್ನೂ ಹಲವರು ಸಂಘಟನೆಯ ಪದಾಧಿಕಾರಿಗಳು ಹಾಗೂ ಸ್ಥಳೀಯ ಪಾಲಿಕೆ ಸದಸ್ಯರು, ಪೊಲೀಸ್ ಇಲಾಖೆಯ ಇನ್ಸಪೆಕ್ಟರ್ ಚಂದ್ರಶೇಖರ್, ಹಾಗೂ ಸಿಬ್ಬಂದಿ ವರ್ಗದವರು, ಪಾಲಿಕೆಯ ಅಧಿಕಾರಿ ವರ್ಗದವರು ಸ್ಥಳೀಯ ನಾಗರಿಕರು, ಸಾರ್ವಜನಿಕರು ಹಾಗೂ ಇತರರೂ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…