ಹೊಸನಗರ: ಹೊಸನಗರ-ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪನವರು ಮರಳು ಲಾರಿ ಮಾಲೀಕರಿಂದ ಕಮೀಷನ್ ಪಡೆದಿದ್ದಾರೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಪ್ರಮಾಣ ಮಾಡಲು ನಾನು ಸಿದ್ಧ, ತಾಕತ್ತಿದ್ದರೆ ಹಾಲಪ್ಪನವರು ಕಮೀಷನ್ ತೆಗೆದುಕೊಂಡಿಲ್ಲ ಎಂದು ಪ್ರಮಾಣ ಮಾಡಲಿ ಎಂದು ಹೊಸನಗರ ಸಾಗರ ಕ್ಷೇತ್ರದ ಮಾಜಿ ಶಾಸಕರಾದ ಬೇಳೂರು ಗೋಪಾಲಕೃಷ್ಣರವರು ಸಾವಲು ಹಾಕಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ, ಶಾಸಕರು ಲಾರಿ ಮಾಲೀಕರನ್ನು ಮನೆಗೆ ಕರೆಸಿ ನೀವು ಬೇಳೂರು ವಿರುದ್ಧ ಪತ್ರಿಕಾ ಹೇಳಿಕೆ ನೀಡದಿದ್ದರೇ ನಿಮಗೆ ಆಕ್ರಮವಾಗಿ ಮರಳು ಹೊಡೆಯಲು ಬೀಡುವುದಿಲ್ಲ ಎಂದು ತಾಕೀತು ಮಾಡಿದ್ದು ಶಾಸಕರಿಗೆ ಹೆದರಿ ಆಕ್ರಮ ಮರುಳು ದಂಧೆ ಮಾಡುವವರು ನನ್ನ ವಿರುದ್ಧ ಪತ್ರಿಕ ಹೇಳಿಕೆ ನೀಡುತ್ತಿದ್ದಾರೆ ಅವರಿವವರ ಮೂಲಕ ಹೇಳಿಕೆ ನೀಡಿಸುವುದರ ಬದಲು ನಾನು ಸಿಗಂದೂರು ದೇವಸ್ಥಾನ ಬಿಟ್ಟು ಬೇರೆ ಯಾವುದೇ ದೇವಸ್ಥಾನದಲ್ಲಿಯಾದರೂ ಲಾರಿ ಮಾಲೀಕರಿಂದ ಕಮೀಷನ್ ಪಡೆದಿದ್ದಾರೆ ಎಂದು ಪ್ರಮಾಣ ಮಾಡಲು ಸಿದ್ಧನಿದ್ದೇನೆ ಎಂದರು.

ಈ ವರ್ಷ ಸಾಕಷ್ಟು ಮಳೆಯಾಗಿದೆ ಆದರೆ ಡಿಸೆಂಬರ್ ತಿಂಗಳಿಂದ ಕರೆಂಟ್ ಕಟ್ ಮಾಡುವ ಪ್ರಮೇಯ ಉದ್ಭವವಾಗಿದೆ ನಮ್ಮ ಶರಾವತಿ ನೀರನ್ನು ಸೇತುವೆ ಕಟ್ಟಲು ಉಪಯೋಗಿಸುತ್ತಿದ್ದು ನೀರಿನ ಮಟ್ಟ ಕುಸಿಯುತ್ತಿದೆ ಶಾಸಕರೇ ಪತ್ರದ ಮೂಲಕ ಸೇತುವೆ ಕಟ್ಟಲು ನೀರು ಬೀಡಲು ಸೂಚಿಸಿದ್ದು ಶಾಸಕರಿಗೆ ನಮ್ಮ ಕ್ಷೇತ್ರದ ಜನರ ಬಗ್ಗೆ ರೈತರ ಬಗ್ಗೆ ಕಾಳಜಿ ಇಲ್ಲವಾಗಿದೆ ಮುಂದಿನ ದಿನದಲ್ಲಿ ಶಾಲೆಯ ಮಕ್ಕಳಿಗೆ ಪರೀಕ್ಷೆಗಳು ಆರಂಭವಾಗಲಿದ್ದು ಮೆಸ್ಕಾಂ ಇಲಾಖೆಯವರು ಕರೆಂಟ್ ಕಟ್ ಮಾಡಿದರೇ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಗ್ರಾಮೀಣಾಭಿವೃದ್ಧಿ ಸಚಿವರಾದ ಈಶ್ವರಪ್ಪನವರು ಮುಂದಿನ ತಿಂಗಳು ತಾಲ್ಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಚುನಾವಣೆ ಘೋಷಣೆಯಾಗಲಿದೆ ಎಂದು ಹೇಳಿದ್ದು ಇದು ಶುದ್ಧ ಸುಳ್ಳು. ಈಶ್ವರಪ್ಪನವರ ಮಾತಿಗೆ ಸರ್ಕಾರದಲ್ಲಿ ಯಾವುದೇ ಕಿಮ್ಮತ್ತಿಲ್ಲ. ಚುನಾವಣೆ ನಡೆದರೆ ಖಂಡಿತ ಸೋಲುತ್ತೇವೆ ಎಂಬ ಭಯದಲ್ಲಿ ಚುನಾವಣೆಗಳನ್ನು ಮುಂದುಡುತ್ತಿದ್ದಾರೆ ಎಂದರು.

ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಆಡಳಿತ ಚುಕ್ಕಾಣಿ ಕುಸಿದಿದೆ ಬಿಜೆಪಿ ಎಂಎಲ್‌ಎ ಗಳಲ್ಲಿ ಹೊಂದಾಣಿಕೆಯಿಲ್ಲ ಅವರವರೆ ಕಚ್ಚಾಟ ನಡೆಸುತ್ತಿದ್ದಾರೆ ಇನ್ನೂ 6ತಿಂಗಳು ಸರ್ಕಾರ ಉಳಿಯುವುದು ಕಷ್ಟ ಎಂದು ಭವಿಷ್ಯ ನುಡಿದರು.

ಪತ್ರಿಕಾಘೋಷ್ಠಿಯಲ್ಲಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಎರಗಿ ಉಮೆಶ್, ಚಂದ್ರಮೌಳಿ, ಜಯಶೀಲಪ್ಪ ಗೌಡ, ಪಪಂ ಸದಸ್ಯ ಅಶ್ವಿನಿಕುಮಾರ್, ಸಣ್ಣಕ್ಕಿ ಮಂಜು, ಚೇತನ್ ದಾಸ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…