04/02/2022 ಶುಕ್ರವಾರ ಸಂಜೆ, ಶಿವಮೊಗ್ಗ ನಗರದ, ಮಹಾನಗರ ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಪಟ್ಟಣ ಮಾರಾಟ ಸಮಿತಿಯ ಸಭೆಯಲ್ಲಿ ನಗರದಲ್ಲಿ ಇರುವ ಬೀದಿ ಬದಿ ವ್ಯಾಪಾರಸ್ಥರಿಗೆ ಸೂಪರ್ ಮಾರ್ಕೆಟ್ ಗೆ ಆಯುಕ್ತರಾದ ಮಾನ್ಯ ಶ್ರೀ ಚಿದಾನಂದ ವಟಾರೆ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಟ್ಟಣ ಮಾರಾಟ ಸಮಿತಿಯ ಸದಸ್ಯರು ಅನುಮೋದನೆ ನೀಡಿದರು.

ಶಿವಮೊಗ್ಗ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಒಕ್ಕೂಟದ ನಿರಂತರ ಹೋರಾಟದಿಂದ ಬೀದಿ ಬದಿ ವ್ಯಾಪಾರಿಗಳಿಗೆ ಸ್ಥಳಗಳನ್ನು ಗುರುತಿಸಿ ವೆಂಡಿಂಗ್ ಝೂನ್ ಎಂದು ಘೋಷಣೆ ಮಾಡಿ, ಬೀದಿ ಬದಿ ವ್ಯಾಪಾರ ಮಾಡುವರಿಗೆ ಅಲ್ಲಿ ಅವಕಾಶ ಕಲ್ಪಿಸಿಕೊಡಿ ಎಂದು ಹಲವು ಮನವಿಗಳ ಮೂಲಕ ಒತ್ತಾಯ ಮಾಡಲಾಗಿತ್ತು.

ಈ ಮೂರು ತಿಂಗಳುಗಳಿಂದ ಟಿವಿಸಿ ಕಮಿಟಿಯ ಗಮನಕ್ಕೂ ಬರದೆ ಬೀದಿ ಬದಿಯ ವ್ಯಾಪಾರಿಗಳನ್ನು ಅಭಿವೃದ್ಧಿ ಹೆಸರಲ್ಲಿ ಸಾರ್ವಜನಿಕರ ದೂರಿನ ಅನ್ವಯ ವಿವಿಧ ಇಲಾಖೆಗಳ ಮೂಲಕ ತೆರವು ಕಾರ್ಯಾಚರಣೆ ಆರಂಭವಾಗಿತ್ತು. ಈಗ ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರಿಗೆ ಸಮೀಪದ ನೂರು ಮೀಟರ್ ಒಳಗೆ ಸ್ಥಳವನ್ನು ಗುರುತಿಸಿ ವೆಂಡಿಂಗ್ ಝೂನ್ ಘೋಷಣೆ ಮಾಡಿ, ಅವರಿಗೆ ಅಲ್ಲಿ ಸ್ಥಳಾಂತರಿಸಿದ ನಂತರ ನಾನ್ ವೆಂಡಿಂಗ್ ಝೂನ್ ಎಂದು ಘೋ‌ಷಣೆ ಮಾಡಿ ಅಲ್ಲಿಯ ಹೊರೆಗೂ ಯಾರನ್ನು ಒಕ್ಕಲೇಸಬೇಡಿ ಎಂದು ಮನವಿ ಮಾಡಲಾಯಿತು.

ವಿವಿಧ ಬಡಾವಣೆಯ ಕನ್ಸೂರೆನ್ಸಿಗಳು ಕಸದ ರಾಶಿಯಿಂದ ಕೊಳೆತು ನಾರುತ್ತಿತ್ತು, ಅಭಿವೃದ್ಧಿ ಹೊಂದಿದ ಕನ್ಸೂರೆನ್ಸಯಲ್ಲಿ ವೆಂಡಿಂಗ್ ಝೂನ್ ಎಂದು ಘೋ‌ಷಣೆ ಮಾಡಿ, ಹಣ್ಣು, ತರಕಾರಿ, ಸೊಪ್ಪು, ಹೂವು, ಹಾಗೂ ಇತರೆ ವಸ್ತುಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಿ ಕೊಡಲು ತೀರ್ಮಾನಿಸಲಾಯಿತು. ಈಗ ಸಾರ್ವಜನಿಕರಿಗೆ ಒಂದೇ ಸ್ಥಳದಲ್ಲಿ ಎಲ್ಲಾ ವಸ್ತುಗಳು ದೊರೆಯುತ್ತದೆ. ಸಾರ್ವಜನಿಕರು ಅ ಸ್ಥಳಗಳಲ್ಲಿ ಮೂಗು ಮುಚ್ಚಿಕೊಂಡು ಹೋಡಾಡದೆ, ಸ್ವಚ್ಚಂದವಾಗಿ ಇರುವ ಈ ಸ್ಥಳದಲ್ಲಿ ಹಣ್ಣು, ತರಕಾರಿ, ಸೊಪ್ಪು, ಹೂವು, ಕರಿದಿಸಬಹುದು.

ಗುರುತಿನ ಚೀಟಿ ಪಡೆದ ವ್ಯಾಪಾರಿಗಳಿಗೆ ಹತ್ತು ಸಾವಿರ ರೂಪಾಯಿ ಸಾಲ ನೀಡುತ್ತವೆ, ಅದನ್ನು ತೀರಿಸಿ ಮತ್ತೆ ಸಾಲ ಪಡೆಯುವರಿಗೆ ಇಪ್ಪತ್ತು ಸಾವಿರ ಸಾಲ ನೀಡಲು ಸಿದ್ಧರಿದ್ದೇವೆ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಶ್ರೀ ಯತೀಶ್ ರವರು ಸಭೆಯಲ್ಲಿ ತಿಳಿಸಿದರು.

ಶಿವಮೊಗ್ಗ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಒಕ್ಕೂಟದ ಜಿಲ್ಲಾಧ್ಯಕ್ಷರು, ಶಿವಮೊಗ್ಗ ಮಹಾನಗರ ಪಾಲಿಕೆ ಪಟ್ಟಣ ಮಾರಾಟ ಸಮಿತಿಯ ಸದಸ್ಯರಾದ ಶ್ರೀ ಚನ್ನವೀರಪ್ಪ ಗಾಮನಗಟ್ಟಿ ರವರು, ಬಹಳಷ್ಟು ಜನರಿಗೆ ಓದು ಬರಹ ಬರದು, ಅವರ ಬಳಿ ಬೀದಿ ಬದಿ ಗುರುತಿನ ಚೀಟಿ ಇಲ್ಲಾ, ಹಲವರು ಅಂದೇ ದುಡಿದು ತಿನ್ನುವ ಜನರಿದ್ದಾರೆ, ಗುರುತಿನ ಪಡೆಯಲು ಒಂದು ದಿನ ರಜೆ ಮಾಡಿ ಬಂದರೆ ಪಾಲಿಕೆಯಲ್ಲಿ ಆಧಿಕಾರಿಗಳು ಇರುವುದಿಲ್ಲ, ಇದ್ದರೆ ಇವರ ಬಳಿ ಸಮರ್ಪಕ ದಾಖಲೆಗಳು ಇರುವುದಿಲ್ಲ, ಅಧಿಕಾರಿಗಳು ಮತ್ತು ದಾಖಲೆ ಇದ್ದರೆ, ಸರ್ವರ್ ಪ್ರಾಬ್ಲಂ, ಹಾಗಾಗಿ ಅವರು ಇರುವ ಸ್ಥಳಕ್ಕೆ ಹೋಗಿ ಬೈಯೋಮೆಟ್ರಕ್ ನೊಂದಿಗೆ ಸಂಪೂರ್ಣ ದಾಖಲೆಯೊಂದಿಗೆ ಅವರಿಗೆ ಗುರುತಿನ ಚೀಟಿ ನೀಡಲು NGOಗೆ ನೀಡಲು ಒತ್ತಾಯಿಸಿದರು.

ಈ ಸಭೆಯಲ್ಲಿ ಪಾಲಿಕೆಯ ಪಟ್ಟಣ ಮಾರಾಟ ಸಮಿತಿಯ ಕಾರ್ಯದರ್ಶಿಗಳಾದ ಶ್ರೀ ಶಾಂತಯ್ಯ, ಸದಸ್ಯರುಗಳಾದ ನಾರಾಯಣ, ಬಾಬು, ವಿನಯ್ ಕುಮಾರ್, ಇರ್ಫಾನ್, ಸಮುದಾಯ ವ್ಯವಾಹರಿಕ ಅಧಿಕಾರಿಗಳಾದ ಶ್ರೀ ಲೊಕೇಶಪ್ಪ, ಶ್ರೀ ರತ್ನಾಕರ್, ಶ್ರೀ ಮತಿ ರೇಣುಕಾ, ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆಯ ಶ್ರೀ ಮಂಜುನಾಥ್, ಪರಿಸರ ಅಭಿಯಂತರರಾದ ಕು|| ಮಹಾದೇವಮ್ಮ, ನಾಗರೀಕ ಹಿತರಕ್ಷಣಾ ವೇದಿಕೆಯ ಶ್ರೀ ಅಶೋಕ SB, ಛೇಂಬರ್ ಆಫ್ ಕಾಮರ್ಸ್ನ ಶ್ರೀ ಸುಕುಮಾರ್, ಪೊಲೀಸ್ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹಾಗೂ ಇತರರೂ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…