
04/02/2022 ಶುಕ್ರವಾರ ಸಂಜೆ ಶಿವಮೊಗ್ಗ ನಗರದ, ಮಹಾನಗರ ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ನಡೆದ ಪಟ್ಟಣ ಮಾರಾಟ ಸಮಿತಿಯ ಸಭೆಯಲ್ಲಿ, ಪಿಎಂ ಸ್ವ ನಿಧಿ ಯೋಜನೆಯಡಿ ಹತ್ತು ಸಾವಿರ ರೂಪಾಯಿ ಸಾಲ ಪಡೆಯಲು 3727 ಫಲಾನುಭವಿಗಳಿಗೆ ಅವಕಾಶ ಸರ್ಕಾರ ಪಾಲಿಕೆಗೆ ನಿಗಧಿಪಡಸಿದೆ, ಅದರಲ್ಲಿ 50% ಜನರು ಸಾಲ ಪಡೆದು ಅದನ್ನು ತೀರಿಸಿ, ಈಗ 862 ಜನರು ಇಪ್ಪತ್ತು ಸಾವಿರ ರೂಪಾಯಿ ಸಾಲಕ್ಕೆ ಅರ್ಜಿ ಸಲ್ಲಸಿರುವರು ಎಂಬ ವಿಷಯ ಬಂದಿರುತ್ತದೆ.

ಬೀದಿ ಬದಿ ವ್ಯಾಪಾರಸ್ಥರ ಒಕ್ಕೂಟದ ಜಿಲ್ಲಾಧ್ಯಕ್ಷರು ಹಾಗೂ ಪಟ್ಟಣ ಮಾರಾಟ ಸಮಿತಿಯ ಸದಸ್ಯರಾದ ಶ್ರೀ ಚನ್ನವೀರಪ್ಪ ಗಾಮನಗಟ್ಟಿ ರವರು, ನಿಜವಾದ ಬೀದಿ ಬದಿ ವ್ಯಾಪಾರಿಗಳಿಗಿಂತ ಬೇರೆಯವರಿಗೆ ಸಾಲ ದೊರೆತಿದೆ. ಬಹಳಷ್ಟು ಬೀದಿ ಬದಿ ವ್ಯಾಪಾರಿಗಳಿಗೆ ಈ ಗುರುತಿನ ಚೀಟಿ ಮತ್ತು ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ತಿಳಿದಿಲ್ಲ, ಈ ಸರ್ಕಾರಿ ಕಛೇರಿಗಳಿಗೆ ಸೌಲಭ್ಯಗಳಿಗೆ ಆಲೆದಾಟವೇ ಬೇಡ ಎನ್ನುವರು, NGO ಮೂಲಕ ಅವರುಗಳು ಇರುವ ಸ್ಥಳಕ್ಕೆ ಹೋಗಿ ಬೈಯೋ ಮೆಟ್ರಿಕ್ ನೊಂದಿಗೆ ದಾಖಲೆಗಳ ಪಡೆದು ಗುರುತಿನ ಚೀಟಿ ನೀಡಬೇಕು.

ಮಹಾನಗರ ಪಾಲಿಕೆ ಸಿಬ್ಬಂದಿಗಳಿಗೆ ಕಛೇರಿಯಲ್ಲಿ ಕೂರಲು ಸ್ಥಳವಿಲ್ಲ, ಸಣ್ಣ ಸಣ್ಣ ಕಬೊರ್ಡನಂತೆ ನಿರ್ಮಿಸಿದ ಒಂದು ಟೇಬಲ್ ಅಳತೆಯ ಜಾಗವಿದೆ, ಬೀದಿ ಬದಿ ವ್ಯಾಪಾರಿಗಳ ಸಾಲಕ್ಕಾಗಿ ನಾನಾ ರೀತಿಯ ಮೂವತೇಂಟು ನಕಲು ಪ್ರತಿಯನ್ನು ಕೇಳುವಿರಿ, ಒಬ್ಬ ಸರ್ಕಾರಿ ಸೌಲಭ್ಯಕ್ಕಾಗಿ ಮೂವತ್ತು ನಕಲು ಪ್ರತಿಯನ್ನು ನೀಡಿದರೆ, ನೂರು ಜನರ ಪ್ರತಿನಕಲು ಮೂರು ಸಾವಿರ ದಾಟುವುದು, ಕಛೇರಿಯ ಸಿಬ್ಬಂದಿಗಳು ದಾಖಲೆಗಳನ್ನು ಸುರಕ್ಷಿತವಾಗಿ ಹಿಡಲು ಕಛೇರಿಯಲ್ಲಿ ಇಟ್ಟು ರಸ್ತೆಗೆ ಬಂದು ಕುರುವ ಬಂದೊದಗಿದೆ. ದಯಮಾಡಿ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಓಟರ್ ಐಡಿ, ಪಾನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಎಲ್ಲಾ ದಾಖಲೆಗಳು ಆಧಾರ್ ಲಿಂಕ್ ಹೊಂದಿದೆ, ಹಾಗಾಗಿ ಅರ್ಜಿಯನ್ನು ಆನ್ಲೈನ್ ನಲ್ಲಿ ಪಡೆಯುವಾಗ ಯಾವ ನಕಲು ಪ್ರತಿಯನ್ನು ಪಡೆಯದೆ ಸರ್ಕಾರಿ ಕಛೇರಿಯನ್ನು ಪೇಪರ್ ಮುಕ್ತ ಗೋಳಿಸಿ ಎಂದು ಸಭೆಯಲ್ಲಿ ಒತ್ತಾಯಿಸಿದರು.

ಇದಕ್ಕೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಮಹಾನಗರ ಪಾಲಿಕೆಯ ಆಯುಕ್ತರಾದ ಮಾನ್ಯ ಶ್ರೀ ಚಿದಾನಂದ ವಟಾರೆ ರವರು, ಕಛೇರಿ ಸಿಬ್ಬಂದಿಗಳಿಗೆ ಆದೇಶ ನೀಡಲಾಗುವುದು ಎಂದರು, ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಶ್ರೀ ಯತೀಶ್ ರವರು ಬ್ಯಾಂಕ್ ನ ಮ್ಯಾನೇಜರ್ ರವರಿಗೆ ಮೊದಲು ಸಾಲ ಪಡೆದು ತಿರಿಸಿದ ನಂತರ ಪುನಃ ಸಾಲ ಪಡೆಯುವರಿಗೆ ಮತ್ತೆ ಎಲ್ಲಾ ದಾಖಲೆಗಳನ್ನು ಕೇಳಬೇಡಿ ಎಂದು ತಿಳಿಸುತ್ತೇವೆ ಎಂದರು.

ಈ ಸಭೆಯಲ್ಲಿ ಪಟ್ಟಣ ಮಾರಾಟ ಸಮಿತಿಯ ಕಾರ್ಯದರ್ಶಿಗಳು ಸದಸ್ಯರು, ಪಾಲಿಕೆಯ ಅಭಿಯಂತರು, ನಲ್ಮ್ ವಿಭಾಗದ ಅಧಿಕಾರಿಗಳು, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿಗಳು, ಶಿವಮೊಗ್ಗ ನಾಗರೀಕ ಹಿತರಕ್ಷಣಾ ವೇದಿಕೆಯ ಹಾಗೂ ಛೇಂಬರ್ ಆಫ್ ಕಾಮರ್ಸ್ ನ ಪದಾಧಿಕಾರಿಗಳು ಮತ್ತು ಇತರರೂ ಉಪಸ್ಥಿತರಿದ್ದರು.