ಬೆಂಗಳೂರು ಸಿಸಿಬಿ ಪೊಲೀಸರ ಭಾರೀ ಕಾರ್ಯಾಚರಣೆ . ಸಿಸಿಬಿ ಪೊಲೀಸರು ಅನಧಿಕೃತ ನಕಲಿ ಟೆಲಿಫೋನ್ ಎಕ್ಸ್ ಚೇಂಜ್ ನ ಬೃಹತ್ ಜಾಲವನ್ನು ಭೇದಿಸಿದ್ದು ಈ ನಕಲಿ ಜಾಲದ ಮಾಲೀಕನಾದ ಇಬ್ರಾಹಿಂ ನನ್ನು ಬಂಧಿಸಿದ್ದಾರೆ. ದುಬೈ ಮತ್ತು ಇತರ ರಾಷ್ಟ್ರಗಳಿಂದ voip ಮುಖಾಂತರ ಬಂದ ಕರೆಗಳನ್ನು ಭಾರತದಲ್ಲಿ ಅನಧಿಕೃತ ಟೆಲಿಫೋನ್ ಎಕ್ಸ್ ಚೇಂಜ್ ಬಳಸಿ ಗ್ರಾಹಕರಿಗೆ ಮಾತನಾಡಲು ಅವಕಾಶ ಮಾಡಿಕೊಡುತ್ತಿದ್ದರು. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರೂ ಮೋಸ ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಕಮಿಷನರ್ ರ ಪ್ರಕಾರ ಇದರಿಂದ ದೇಶದ ಆಂತರಿಕ ಭದ್ರತೆಗೆ ಸವಾಲಿತ್ತು.
ಈ ಜಾಲದ ಕಿಂಗ್ ಪಿನ್ ಹಾಗೂ ಟ್ರೈನರ್ ಗೌತಮ್ ನನ್ನು ಪೋಲಿಸರು ತಿರುಪುರದಿಂದ ಬಂಧಿಸಿದ್ದಾರೆ. ಈ ಜಾಲದಲ್ಲಿ ಮುಖ್ಯವಾಗಿ ಬಳಸುತ್ತಿದ್ದ ಮೂವತ್ತು ಸಿಮ್ ಕಾರ್ಡ್ ಹಾಕುವ ಮೂವತ್ತೆರಡು ಎಕ್ಸ್ಚೇಂಜ್ ಬಾಕ್ಸ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವರಿಗೆ ಸಿಮ್ ಗಳನ್ನು ಒದಗಿಸಿದ ಇಬ್ಬರು ಒಬ್ಬರು ತೂತುಕುಡಿ ಹಾಗೂ ಜಾಲಹಳ್ಳಿ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಸಿಮ್ ಕಾರ್ಡ್ ಖರೀದಿಸುವಾಗ ಬಯೋಮೆಟ್ರಿಕ್ ತೆಗೆದುಕೊಂಡಿಲ್ಲ ಎಂದು ಹೇಳಿ ಎರಡೆರಡು ಬಾರಿ ಸ್ಕ್ಯಾನ್ ಮಾಡಿ 1ಸಿಮ್ ಮಾತ್ರ ಕೊಡುತ್ತಿದ್ದರು. ಇನ್ನೊಂದು ಈ ಜಾಲಕ್ಕೆ ಬಳಸಲಾಗುತ್ತಿತ್ತು. ಈ ಬಗ್ಗೆ ಸಮಗ್ರ ತನಿಖೆ ಚಾಲನೆಯಲ್ಲಿದೆ.
ಜನರು ಸಿಮ್ ಕಾರ್ಡ್ ತಗೊಳ್ಳುವಾಗ ಆದಷ್ಟು ಎಚ್ಚರವಹಿಸಬೇಕು.
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ
ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153