
ಶಿವಮೊಗ್ಗ: ಮಹಿಳೆಯರು ಆರ್ಥಿಕ ಸಾಮರ್ಥ್ಯ ಸಾಧಿಸಿ ಸ್ವಾವಲಂಬಿಗಳಾಗಿ ಮುನ್ನಡೆಯಬೇಕು ಎಂದು ಜೇ.ಸಿ. ಚಿರಂತನ ಅದ್ಯಕ್ಷೆ ಶಾಂತಾ ಶೆಟ್ಟಿ ಹೇಳಿದರು.ಹೊಯ್ಸಳ ಸೊಸೈಟಿ ಮತ್ತು ಶುಭಂ ಟ್ರಸ್ಟ್ ಇವರ ಸಹಯೋಗದೊಂದಿಗೆ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ 40 ಸದಸ್ಯರಿಗೆ 20 ಲಕ್ಷ ರೂಪಾಯಿ ಸಾಲದ ಚೆಕ್ ವಿತರಣೆ ಮತ್ತು ಆರ್ಥಿಕ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಶುಭಂ ಟ್ರಸ್ಟ್ ಅಧ್ಯಕ್ಷ ಶ್ರೀಧರ್ ಹೆಗ್ಡೆ, ಹೊಯ್ಸಳ ಸೊಸೈಟಿ ಅಧ್ಯಕ್ಷ ಎಂ.ಶಂಕರ್ ಉಪಸ್ಥಿತರಿದ್ದರು. ಹೊಯ್ಸಳ ಸೊಸೈಟಿ ಪರವಾಗಿ ಶಾಂತಾ ಶೆಟ್ಟಿ ಅವರನ್ನು ಗೌರವಿಸಲಾಯಿತು.