ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸಂಜೆ ಭಾರತೀಯ ಜನಸಂಘದ ನೇತಾರರು, ಏಕಾತ್ಮಮಾನವತಾವಾದ ಮತ್ತು ಅಂತ್ಯೋದಯದ ಕನಸು ಕಂಡವರು, ರಾಷ್ಟ್ರದೆಲ್ಲೆಡೆ ತಮ್ಮ ವಿಚಾರಧಾರೆಗಳಿಂದ ಸಂಚಲನ ಮೂಡಿಸಿ, ಭಾರತೀಯ ಜನಸಂಘವನ್ನು ಶಕ್ತವಾಗಿ ಸಂಘಟಿಸಿದ, ಅಪ್ರತಿಮ ರಾಷ್ಟ್ರೀಯವಾದಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಪುಣ್ಯ ಸ್ಮರಣೆಯ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ರಾಷ್ಟ್ರ ನಿರ್ಮಾಣಕ್ಕೆ ಅವರ ಕೊಡುಗೆಯನ್ನು ಸ್ಮರಿಸಲಾಯಿತು.

ಈ ಸಭೆಯನ್ನು ಕುರಿತು ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾದ ಎಸ್ ದತ್ತಾತ್ರಿ ಅವರು ಮಾತನಾಡಿ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ತತ್ವಗಳು ಮತ್ತು ಮೌಲ್ಯಗಳಲ್ಲಿ ಪ್ರಬಲವಾಗಿರುವ ರಾಷ್ಟ್ರವನ್ನು ನಿರ್ಮಿಸುವ ನಿಟ್ಟಿನಲ್ಲಿ ಅವರು ತಮ್ಮ ಜೀವನವನ್ನು ಅರ್ಪಿಸಿದರು. ಅವರು ನಮಗೆ ಏಕತ್ಮಾ ಮಾನವ ದರ್ಶನ ಎಂಬ ಪರಿಕಲ್ಪನೆಯನ್ನು ನೀಡಿದರು, ಅಂದರೆ ಅವಿಭಾಜ್ಯ ಮಾನವತೆ. ಧರ್ಮ ಅಥವಾ ಜಾತಿಗಿಂತ ಮಾನವೀಯತೆಯ ಮೌಲ್ಯಗಳನ್ನು ಎತ್ತಿಹಿಡಿಯುವುದು. ರಾಷ್ಟ್ರೀಯ ಸಮಗ್ರತೆ ಮತ್ತು ಸಮಾಜದ ಕಲ್ಯಾಣವನ್ನು ಉತ್ತೇಜಿಸುವ ತತ್ವ ಇದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರ ಬಿಜೆಪಿ ಅಧ್ಯಕ್ಷ ರಾದ ಎನ್ ಕೆ ಜಗದೀಶ್,ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ ಕೆ ಶ್ರೀನಾಥ್ ಜಿಲ್ಲಾ ಕಾರ್ಯದರ್ಶಿಯಾದ ಹೃಷಿಕೇಶ್ ಪೈ ನಗರ ಪ್ರಧಾನ ಕಾರ್ಯದರ್ಶಿ ಮೋಹನ್ ರೆಡ್ಡಿ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…