ಶಿವಮೊಗ್ಗದ ಮಾಚೇನಹಳ್ಳಿಯಲ್ಲಿರುವ ಶಾಹಿ ಎಕ್ಸ್ಪೋರ್ಟ್ ಸಂಸ್ಥೆಯಿಂದ ಸುತ್ತಮುತ್ತಲ ಪ್ರದೇಶಗಳಿಗೆ ಮತ್ತು ಮಾಚೇನಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ತುಂಬಾ ತೊಂದರೆಯಾಗುತ್ತಿದ್ದು, ಕಪ್ಪು ಬಣ್ಣದ ದೂಳು, ಹೊಗೆ ಕೈಗಾರಿಕಾ ಘಟಕಗಳ ಒಳಗೆ ಬರುತಿದ್ದು, ಕೈಗಾರಿಕಾ ಯಂತ್ರೋಪಕರಣಗಳು ಹಾಗೂ ಘಟಕಗಳ ಛಾವಣಿಗಳು ಕಪ್ಪು ದೂಳಿನಿಂದ ತುಕ್ಕು ಹಿಡಿದು ಹಾಳಾಗುತ್ತಿವೆ, ಗಾಳಿಯಲ್ಲಿ ಬರುವುದರಿಂದ ಪರಿಸರ ಹಾಗೂ ನೀರು ಆಹಾರಗಳಿಗೂ ಮಿಶ್ರಿತವಾಗುತ್ತಿದೆ, ಶಾಹಿ ಕಂಪನಿಗೆ ಪ್ರತ್ಯೇಕ ರಸ್ತೆ ಇದ್ದರೂ ಸಹ ಬಾರೀ ಸರಕು ವಾಹನಗಳು ನಿಧಿಗೆ ಕೈಗಾರಿಕಾ ಪ್ರದೇಶದ ರಸ್ತೆ ಮುಖಾಂತರ.

ಹೋಗುತ್ತಿದ್ದು ರಸ್ತೆ ತುಂಬಾ ಹಾಳಾಗಿದ್ದು ಕಾರ್ಮಿಕರಿಗೆ ಅಪಘಾತಗಳು ಸಂಬವಿಸಿರುವುದಾಗಿ, ಹಾಗೂ ಶಾಹಿ ಎಕ್ಸ್ಪೋರ್ಟ್ ಕಂಪೆನಿ ಸಂಸ್ಕರಣದ ನಂತರ ಹೊರಬರುತ್ತಿರುವ ರಾಸಾಯನಿಕ ಮಿಶ್ರಿತ ನೀರನ್ನು ಅಲ್ಲಿಯೇ ಇರುವ ಕೆರೆಗೆ ನೇರವಾಗಿ ಬಿಡುತ್ತಿದು , ಇದರಿಂದ ಸುತ್ತಮುತ್ತಲಿನ ಜಮೀನುದಾರರು ಹಾಗೂ ಇತರೆ ಕೈಗಾರಿಕಾ ಘಟಕಗಳಿಗೆ ಕೆಟ್ಟ ವಾಸನೆ ಬರುತ್ತಿದ್ದು ಅಂತರ್ಜಲಕ್ಕೂ ಕೂಡಾ ಹಾನಿಕಾರವಾಗುತ್ತಿದೆ.
ಈ ಬಗ್ಗೆ ಹಲವಾರು ಬಾರಿ ಸಂಸ್ಥೆಗೂ ಸಂಬAಧಪಟ್ಟ ಇಲಾಖೆಗೆ ದೂರನ್ನು ನೀಡಿದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ ಎಂದು ಮಾಚೇನಹಳ್ಳಿ ಮತ್ತು ನಿಧಿಗೆ ಕೈಗಾರಿಕಾ ವಸಹಾತುಗಳ ಸಂಘದವರು, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳೊಂದಿಗೆ ಶಿವಮೊಗ್ಗ ಜಿಲ್ಲಾ ಮಾನ್ಯ ಸಂಸದರಾದ ಬಿ.ವೈ ರಾಘವೇಂದ್ರರವರಿಗೆ ದೂರು ಮನವಿಯನ್ನು ಸಲ್ಲಿಸಿದರು.

ಮನವಿಗೆ ಪೂರಕವಾಗಿ ಸ್ಪಂದಿಸಿದ ಮಾನ್ಯ ಸಂಸದರು ಸದರಿ ಕಂಪನಿಯು ಸ್ಥಳೀಯ ಸಾವಿರಾರು ಜನರಿಗೆ ಉದ್ಯೋಗಾವಕಾಶವನ್ನು ನೀಡಿದೆ. ಇದರಿಂದ ಆಗುತ್ತಿರುವ ತೊಂದರೆಯನ್ನು ವೈಜ್ಞಾನಿಕವಾಗಿ ಸರಿಪಡಿಸುವ ನಿಟ್ಟಿನಲ್ಲಿ ಯೋಚಿಸಿ ಆಗುತ್ತಿರುವ ತೊಂದರೆಯನ್ನು ಸಂಬಂಧಿಸಿದವರಿಗೆ ಸೂಚಿಸಿ ಸರಿಪಡಿಸಲು ನಿರ್ದೇಶನ ನೀಡುವುದಾಗಿ ಮನವಿದಾರರಿಗೆ ಬರವಸೆ ನೀಡಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್ ಹಾಗೂ ಪದಾಧಿಕಾರಿಗಳು, ಮಾಚೇನಹಳ್ಳಿ ಕೈಗಾರಿಕಾ ಸಂಘದ ಅಧ್ಯಕ್ಷ ಎಂ,ಎ ರಮೇಶ್ ಹೆಗಡೆ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…