ಸೊರಬ ನ್ಯೂಸ್…

ಕೇಂದ್ರ ಹಾಗು ರಾಜ್ಯ ಸಕಾ೯ರಗಳ ರೈತ ವಿರೋದಿ ನಿಲುವು ಖಂಡಿಸಿ ಸೊರಬ ಕಾಂಗ್ರೆಸ್ ವತಿಯಿಂದ ಮಧು ಬಂಗಾರಪ್ಪ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಾಯಿತು.

ರೈತರು ಕಂಗಾಲಾಗಿ ಇಂದು ಬೀದಿಗೆ ಬಂದಿದ್ದಾರೆ ಬಂಡವಾಳ ಶಾಯಿಗಳಿಗೆ ಶರಣಾಗಿರುವ ಇಂದಿನ ಕೇಂದ್ರ ಹಾಗು ರಾಜ್ಯ ಸಕಾ೯ರಗಳು ರೈತರು,ಬಡವರು,ಜನಸಾಮಾನ್ಯರ ವಿರುದ್ದ ತೀಮಾ೯ನ ಗಳನ್ನು ಕೈಗೊಳ್ಳುವ ಮೂಲಕ ಈಗ ರೈತರನ್ನು ಅದೋಗತಿಗೆ ತಂದು ನಿಲ್ಲಿಸಿದ್ದಾರೆ.ಹಲವಾರು ವಷ೯ಗಳಿಂದ ತಮ್ಮ ಜೀವನೋಪಯೊಗಕ್ಕಾಗಿ,ಅರಣ್ಯ ಭೂಮಿ,ಹಾಗು ಕಂದಾಯ ಭೂಮಿಗಳಲ್ಲಿ ಬಗರ್ ಹುಕುಂ ಸಾಗುವಳಿ ಮಾಡಿಕೊಂಡು ಅದರಿಂದಲೆ ಬದುಕು ಕಟ್ಟಿಕೊಂಡ ಲಕ್ಷಾಂತರ ಬಗರ್ ಹುಕುಂ ಸಾಗುವಳಿದಾರರುನಮ್ಮನ್ನಾಳುವ ಇಂದಿನ ಕೇಂದ್ರ ಹಾಗು ರಾಜ್ಯ ಸಕಾ೯ರಗಳ ನಿಲ೯ಕ್ಷ್ಯ ಹಾಗು ಇಚ್ಛಾಶಕ್ತಿಯ ಕೊರತೆಯಿಂದಾಗಿ ತುತ್ತು ಅನ್ನಕ್ಕು ಪರಿತಪಿಸುವಂತಾಗಿದೆ.

ಹಿಂದೆ ಕಾಂಗ್ರೇಸ್ ಸಕಾ೯ರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಭೂಮಿಯ ಹಕ್ಕು ನೀಡಿ ರೈತರಿಗೆ ಅನುಕೂಲ ಮಾಡುವ ಇಚ್ಛಾಶಕ್ತಿಯಿಂದ ಅರಣ್ಯ ಹಕ್ಕು ಕಾಯ್ದೆಯನ್ನು2005ರಲ್ಲಿ ಜಾರಿಗೆ ತಂದು ಆ ಮೂಲಕ ಗ್ರಾಮ ಅರಣ್ಯ ಸಮಿತಿಗಳನ್ನು ರಚಿಸಿ,ಈ ಅರಣ್ಯ ಸಮಿತಿಗಳ ಮೂಲಕ ಅರಣ್ಯ ಭೂಮಿಯಲ್ಲಿಸಾಗುವಳಿ ಮಾಡುವ ರೈತರಿಂದ ಅಜಿ೯ಗಳನ್ನು ಪಡೆದು,ಗ್ರಾಮ ಅರಣ್ಯ ಸಮಿತಿ ಅಂಗೀಕರಿಸಿದ ಲಕ್ಷಾಂತರ ರೈತರ ಅಜಿ೯ಗಳನ್ನಾ ಆಯಾ ಬಾಗದ ವಿಬಾಗಾಧಿಕಾರಿಗಳು ಕಾಯ್ದೆ ಪ್ರಕಾರ, ಅಜಿ೯ಗಳ ಆದಾರದ ಮೇಲೆ ಕ್ರಮಬದ್ದವಾಗಿ ಅಜಿ೯ಗನುಗುಣವಾಗಿ ಪರಿಶೀಲಿಸದೆ,ವಿಚಾರಣೆ ಮಾಡದೆ,ಸಾರಸಗಟು ಎಲ್ಲಾ ಅಜಿ೯ಗಳನ್ನು ಏಕ ಆದೇಶ(ಕಾಮನ್)ದಲ್ಲಿ ಲಕ್ಷಾಂತರ ಅಜಿ೯ಗಳನ್ನು ಶಿವಮೊಗ್ಗ ಜಿಲ್ಲೆ,ಹಾಗು ಅದರಲ್ಲೂ ಹೆಚ್ಚಾಗಿ ಸೊರಬ ವಿದಾನ ಸಬಾ ಕ್ಷೇತ್ರ ವ್ಯಾಪ್ತಿಯಲ್ಲಿ ವಜಾಗೋಳಿಸಿರುವುದು ಕಾನೂನಿಗೆ ವಿರುದ್ದವಾಗಿರುತ್ತದೆ.

ಈ ರೀತಿ ಕಾಮನ್ ಆದೇಶದ ಮೂಲಕ ವಜಾಮಡಿದ ಅಜಿ೯ದಾರರಿಗೆ ಈಗಾಗಲೆ ನೋಟೀಸ್ ನೀಡಿದ್ದು.ಈ ರೀತಿಯ ಕಾನೂನು ಬಾಹೀರವಾಗಿ ರೈತರ ಅಜಿ೯ಗಳನ್ನಾ ವಜಾಗೊಳಿಸಿದ್ದರೂ ಸಹ ನಮ್ಮನ್ನಾಳುವ ಕೇಂದ್ರ ಸಕಾ೯ರವಾಗಲಿ,ರಾಜ್ಯ ಸಕಾ೯ವಾಗಲಿ ರೈತರ ನೆರವಿಗೆ ಬಾರದಿರುವುದು ,ಹಾಗು ಅದೇ ರೀತಿ ಈ ಹಿಂದೆ ಬಗರ್ ಹುಕುಂ ಸಮಿತಿಯಿಂದ ಕಂದಾಯ ಭೂಮಿ ಸಾಗುವಳಿ ರೈತರಿಗೆ ಮಂಜೂರು ಮಾಡಿ ಹಕ್ಕು ಪತ್ರ ಪಡೆದ ಸಾವಿರಾರು ರೈತರ ಹಕ್ಕುಪತ್ರಗಳನ್ನು ಕುಂಟು ನೆಪಗಳನ್ನು ಹೇಳಿಕೊಂಡು ವಜಾಮಾಡಿರುವುದು ಕಾನೂನು ಬದ್ದವಾಗಿರುವುದಿಲ್ಲ,ಈರೀತಿ ನಿಯಮ ಬಾಹೀರವಾಗಿ ರೈತರ ಅಜಿ೯ಗಳನ್ನು ವಜಾ ಮಾಡುವ ಮೂಲಕ ಸಕಾ೯ಗಳು ರೈತರನ್ನು ವಿನಃಹ ಕಾರಣ ಕೋಟು೯ ಕಛೇರಿಗಳಿಗೆ ಅಲೆದಾಡುವಂತೆ ಮಾಡಿವೆ,ಕೇಂದ್ರ ಹಾಗು ರಾಜ್ಯ ಸಕಾ೯ರಗಳ ಈ ರೈತ ವಿರೋಧಿ ದೋರಣೆ ಖಂಡಿಸಿ,ರೈತರನ್ನು ಒಕ್ಕಲೆಬಿಸದಂತೆ ಸಕಾ೯ರಗಳನ್ನು ಒತ್ತಾಯಿಸಲಾಯಿತು.

ರೈತರು ಜೀವನೋಪಯೋಗಕ್ಕಾಗಿ ಪಾರಂಪಾರ್ಯವಾಗಿ ಸಾಗುವಳಿ ಮಾಡುತ್ತಿರುವ ರೈತರನ್ನು ಅರಣ್ಯ ಭೂಮಿಯಿಂದ ಒಕ್ಕಲೆಬ್ಬಿಸದಂತೆಯೂ,ಮತ್ತು ಅರಣ್ಯ. ಹಕ್ಕು ಕಾಯ್ದೆ ಯಲ್ಲಿ ಮೂರು ತಲೆಮಾರಿನ ದಾಖಲೆಯಿಂದ ಸಾಗುವಳಿಯನ್ನು ರುಜುವಾತು ಪಡಿಸಬೇಕು ಎಂಬುವುದರ ಬದಲಾಗಿ ಸ್ಥಳ ಪರಿಶೀಲಿಸಿ ಸಾಗುವಳಿ ಇರುವುದನ್ನು ಖಚಿತಪಡಿಸಿಕೊಂಡು ಒಂದು ತಲೆಮಾರಿನ ದಾಖಲೆಯಿಂದ ರುಜುವಾತು ಪಡಿಸುವಂತೆ ಇಗಿರುವ ಕಾಯ್ದೆಗೆ ತಿದ್ದುಪಡಿ ಮಾಡುವಂತೆ.ಕೇಂದ್ರ ಸಕಾ೯ರದ ಗಮನಕ್ಕೆ ತರುವಂತೆಯೂ .ಈಗಾಗಲೆ ವಿಬಾಗಾಧಿಕಾರಿಗಳು ಏಕ ಪಕ್ಷೀಯವಾಗಿ,ಅಜಿ೯ಗಳನ್ನು ಕೂಲಂಕುಷವಾಗಿ ಪರಿಶೀಲಿಸದೆ ನಿಯಮ ಬಾಹೀರವಾಗಿ ವಜಾಮಾಡಿದ ಅಜಿ೯ಗಳನ್ನು ಪುನರಾ ಪರಶೀಲನೆ ಮಾಡಿ ರೈತರ ಅಜಿ೯ಅಂಗೀಕರಿಸಲು ಕೇಂದ್ರ ಹಾಗು ರಾಜ್ಯ ಸಕಾ೯ರಗಳಿಗೆ ಸೂಚಿಸಬೇಕು.

ಬಗರ್ ಹುಕುಂ ಸಮಿತಿ ಮಂಜೂರು ಮಾಡಿದ್ದ ಹಕ್ಕು ಪತ್ರಗಳನ್ನು ವಜಾ ಮಾಡದೆ ಸಾಗುವಳಿ ಹಕ್ಕನ್ನು ಉಜಿ೯ತಗೊಳಿಸವಂತೆಯೂ,ಜನಸಾಮಾನ್ಯರು ಬಳಸುವ,ಪೆಟ್ರೊಲ್ ಡಿಸೇಲ್,ಅಡಿಗೆ ಎಣ್ಣೆ,ಗಗನಕ್ಕೇರಿದ ರಸಗೊಬ್ಬರ ಬೆಲೆ ಕಡಿಮೆ ಮಾಡುವಂತೆಯೂ,ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ನಿಗದಿ ಪಡಿಸುವಂತೆಯೂ,ಇಂದಿನ ಪ್ರತಿಭಟನಾನಿರತ ಸಾವಿರಾರು ರೈತರು ಒಕ್ಕೊರಲಿನಿಂದ ತಮ್ಮ ಮೂಲಕ ಕೇಂದ್ರ ಹಾಗು ರಾಜ್ಯ ಸಕಾ೯ರಗಳನ್ನು ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ ಮತ್ತು ಪದಾಧಿಕಾರಿಗಳು ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ ಮಂಜುನಾಥ್ ಶೆಟ್ಟಿ…