ಕರ್ನಾಟಕ ತ್ರಿಮತಸ್ಥ ಚರ್ಮಕಾರ ಪರಿಷತ್(ರಿ) ಬೆಂಗಳೂರು ಹುಬ್ಬಳ್ಳಿ, ದಿನಾಂಕ 20/02/2022 ರಂದು ಹುಬ್ಬಳ್ಳಿಯಲ್ಲಿ ನಡೆದ ಕರ್ನಾಟಕ ತ್ರಿಮತಸ್ಥ ಚರ್ಮಕಾರ ಪರಿಷತ್ತಿನ ಸಂಚಾಲಕ ವರ್ಗದ ಸಭೆ ನಡೆಯಿತು.

ಕರ್ನಾಟಕ ತ್ರಿಮತಸ್ಥ ಚರ್ಮಕಾರ ಪರಿಷತ್ತಿನ ಸಂಚಾಲಕ ವರ್ಗದ ಸಭೆಯಲ್ಲಿ ಪ್ರಧಾನ ಸಂಚಾಲಕರಾದ ಡಾ. ಗುರುರಾಜ್ ರವರು, ಪ್ರಸ್ತಾವಿಕವಾಗಿ ಮಾತನಾಡಿದರು. ನಂತರ ನಡೆದ ಸಭೆಯ ಕಲಾಪದಲ್ಲಿ ತ್ರಿಮತಸ್ಥ ರಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮದ ಸ್ಥಾಪನೆಯ ವಿಷಯವಾಗಿ ಕೈಗೊಳ್ಳಬೇಕಿರುವ ಮುಂದಿನ ಕ್ರಮದ ಬಗೆಗೆ, ಸ್ಥಾಯಿ ನಿಧಿಗಾಗಿ ದೇಣಿಗೆ ಸಂಗ್ರಹಣೆ ಹಾಗೂ ಸದಸ್ಯತ್ವದ ಅಭಿಯಾನ (Membership Drive) ಕುರಿತು ಸವಿವರ ಚರ್ಚೆ ನಡೆಸಿದರು.

ಶಿವಮೊಗ್ಗ , ದಕ್ಷಿಣ ಕನ್ನಡ, ರಾಯಚೂರು, ಉತ್ತರ ಕನ್ನಡ ಹಾಗೂ ಬೆಳಗಾವಿ ಜಿಲ್ಲಾ ಸಂಚಾಲಕರ ನೇಮಕ, ಸನ್ಮಾನ್ಯ ಶ್ರೀ ಶಿವಣ್ಣ ಮುಳಗುಂದ ಅವರನ್ನು ಸಂಚಾಲಕ ವರ್ಗಕ್ಕೆ ಸೇರ್ಪಡೆಗಾಗಿ ಆಹ್ವಾನಿಸುವ ಹಾಗೂ ಮಹಾ ಶಿವರಾತ್ರಿಯಂದು ನಡೆಯುವ ಮಹಾಶರಣ ಕಕ್ಕಯ್ಯನವರ ಜಯಂತಿಯ ಅಂಗವಾಗಿ ಪರಿಷತ್ತಿನಿಂದ ಹುಬ್ಬಳ್ಳಿಯಲ್ಲಿ ವಿಚಾರ ಗೋಷ್ಠಿ ಏರ್ಪಡಿಸುವ ಮುಂತಾಗಿ ಇನ್ನೂ ಹಲವು ವಿಷಯಗಳ ಬಗ್ಗೆ ಚರ್ಚಿಸಿ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಸಮಸ್ತ ತ್ರಿಮತಸ್ಥ ಸಹೋದರ ಬಾಂಧವರು ಪರಸ್ಪರ ಸಮನ್ವಯ ಸಾಧಿಸಲು ಕರ್ನಾಟಕ ತ್ರಿಮತಸ್ಥ ಚರ್ಮಕಾರ ಪರಿಷತ್ತಿನ ಅಧಿಕೃತ ಪ್ರಣಾಳಿಕೆಯನ್ನು ಜಿಲ್ಲಾ ಸಮಾವೇಶಗಳನ್ನು ನಡೆಸಿ ಸಾರ್ವತ್ರಿಕವಾಗಿ ಬಿಡುಗಡೆ ಮಾಡುವ ಹಾಗೂ ಆ ಮೂಲಕ ರಾಜಕೀಯ ಜಾಗೃತಿ ಉಂಟು ಮಾಡುವ ಪರಿಷತ್ತಿನ ಕ್ರಿಯಾ ಯೋಜನೆಯ ನಿರ್ಣಯದ ಮೇಲೆ ಚರ್ಚೆ ನಡೆಯಿತು.

ಕರ್ನಾಟಕದಾದ್ಯಂತ ಪ್ರತಿ ಜಿಲ್ಲೆಯಲ್ಲಿ ಸಂಘಟನೆ ಮತ್ತು ಜಿಲ್ಲಾ ಸಂಚಾಲಕರ ನೇಮಕ, ನಿಖರವಾದ ಜನಗಣತಿ, ಮಾಹಿತಿ ಕೋಶದ ( Data Base) ರಚನೆಯ ಬಗೆಗೆ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಪ್ರತಿ ಜಿಲ್ಲೆಗೂ ಮೂವರು ತ್ರಿಮತಸ್ಥ ಸಂಚಾಲಕರು ಇರಬೇಕು ಎಂಬ ನಿಯಮಕ್ಕೆ ಬದ್ಧವಾಗಿ ಧಾರವಾಡ ಜಿಲ್ಲಾ ಸಂಚಾಲಕರನ್ನಾಗಿ ಶ್ರೀ ರವಿ ಬಂಕಾಪೂರ್ ಹಾಗೂ ಶ್ರೀ ವಿನಾಯಕ ಘೋಡಕೆ ಅವರನ್ನು, ಶಿವಮೊಗ್ಗ ಜಿಲ್ಲೆಯ ಸಂಚಾಲಕರನ್ನಾಗಿ ಶ್ರೀ ಮಂಜುನಾಥ್, ಶ್ರೀ ಚಂದ್ರಶೇಖರ ಕಾನ್ ಪೇಟ್ ಹಾಗೂ ಶ್ರೀ ಚನವೀರಪ್ಪ ಗಾಮನಗಟ್ಟಿ ಅವರನ್ನು ನೇಮಕ ಮಾಡಲಾಯಿತು.

ಧಾರವಾಡ ಜಿಲ್ಲಾ ಹಾಗೂ ಶಿವಮೊಗ್ಗ ಜಿಲ್ಲಾ ಸಂಚಾಲಕರಾಗಿ ನೇಮಕಗೊಂಡು ಉಪಸ್ಥಿತರಿದ್ದ ಶ್ರೀ ವಿನಾಯಕ ಘೋಡಕೆ ಹಾಗೂ ಶ್ರೀ ಚನ್ನವೀರಪ್ಪ ಗಾಮನಗಟ್ಟಿ ಅವರಿಗೆ ಪ್ರಮಾಣ ಪತ್ರ ನೀಡಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ತ್ರಿಮತಸ್ಥ ಚರ್ಮಕಾರ ಪರಿಷತ್ತಿನ ಮಹಾಪೋಷಕರಾದ ಶ್ರೀ ಮಂಜುನಾಥ ಅಣ್ಣಿಗೇರಿ IPS ಅವರು, ಕಾರ್ಯಕಾರಿ ಸಂಚಾಲಕರಾದ ಶ್ರೀ ರಮೇಶ ತೇರದಾಳ್ ಅವರು, ಉಪ ಪ್ರಧಾನ ಸಂಚಾಲಕರಾದ ಶ್ರೀ ಭಿಮಾಶಂಕರ ತದ್ದೇವಾಡಿ ಅವರು, ಪರಿಷತ್ತಿನ ಕೋಶ ನಿರ್ವಹಣಾ ಸಂಚಾಲಕರಾದ ಡಾ.ಕಿರಣ್ ಕುಮಾರ್ ಅವರು ಸಂಘಟನಾ ಸಂಚಾಲಕರಾದ ಶ್ರೀ ಉಮೇಶ್ ಮೀರಜಕರ್ ಅವರು, ಸಮನ್ವಯ ಸಮಿತಿಯ ಪ್ರಮುಖರಾದ ಶ್ರೀ ರಾಮಚಂದ್ರ ಗರಗ್ ಅವರು, ರಾಜ್ಯ ಸಂಚಾಲಕರಾದ ಶ್ರೀ ಪರಮಾನಂದ ಘೋಡಕೆ ಅವರು, ಸಂಘಟನಾ ಸಂಚಾಲಕರಾದ ಶ್ರೀ ರಮೇಶ ಕೋಳೂರ್ ಅವರು, ಶ್ರೀ ಚಂದ್ರಕಾಂತ ಹುಟಗಿಕರ್ ಅವರು, ಮಹಿಳಾ ವಿಭಾಗದ ಕಾರ್ಯಕರ್ತರಾದ ಶ್ರೀಮತಿ ಡಾ. ಅನಿತಾ ಹುಟಗಿ ಅವರು, ಶ್ರೀಮತಿ ಜಯಶ್ರೀ ಮಂಗಳೂರು ಅವರು, ಪರಿಷತ್ತಿನ ಪ್ರಣಾಳಿಕೆಗೆ ಸೇರಿಸಬಹುದಾದ ಹಲವಾರು ಪ್ರಮುಖ ಸಲಹೆಗಳನ್ನು ನೀಡಿದ ಸಂಘಟಕರಾದ ಶ್ರೀ ಜಿತೇಂದ್ರ ಘೋಡಕೆ ಅವರು, ಶ್ರೀ J.K. ಕಾಂಬಳೆ ಅವರು, ಹಾಗೂ ಹಿರಿಯ ಕಾರ್ಯಕರ್ತರಾದ ಶ್ರೀ ಅಶೋಕ ಬೆಣಗಿ ಅವರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…