ಶಿವಮೊಗ್ಗ: ಖಾಸಗಿ ಆಸ್ಪತ್ರೆಗಳು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಬೇಕು ಎಂದು ಸಂಸದ
ಬಿ.ವೈ. ರಾಘವೇಂದ್ರ ಹೇಳಿದರು.

ಅವರು ಇಂದು ಕುವೆಂಪು ರಸ್ತೆಯಲ್ಲಿರುವ ಎನ್.ಯು. ಸೂಪರ್ ಸ್ಪೆಷಾಲಿಟಿ ಕಿಡ್ನಿ
ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.

ಶಿವಮೊಗ್ಗದಲ್ಲಿ ಆರೋಗ್ಯದ ಬಗ್ಗೆ ಒಳ್ಳೆಯ ವಾತಾವರಣ ನಿರ್ಮಾಣವಾಗಿದೆ. ಆಸ್ಪತ್ರೆಗಳು
ಸಹ ಉತ್ತಮ ಸೇವೆ ಸಲ್ಲಿಸುತ್ತಿವೆ. ಚಿಕಿತ್ಸೆಯ ಸೌಲಭ್ಯಗಳು ಹೆಚ್ಚಾಗುತ್ತಿವೆ. ದೂರದ
ನಗರಗಳಿಗೆ ಹೋಗುವುದು ತಪ್ಪುತ್ತಿದೆ. ಇಲ್ಲಿಯೇ ಉತ್ತಮ ಅವಕಾಶಗಳು ಇವೆ. ಯು.ಎನ್.
ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮತ್ತು ಕ್ಲಿನಿಕ್ ಅನ್ನು ಸ್ಥಾಪಿಸಿರುವುದು ಸಂತೋಷದ
ವಿಷಯ. ಸಾರ್ವಜನಿಕರಿಗೆ ಇದರಿಂದ ಅನುಕೂಲವಾಗಲಿ. ಚಿಕಿತ್ಸೆಗೆ ಹೆಚ್ಚಿನ ಆದ್ಯತೆ
ನೀಡಿ, ಸೇವೆಗೆ ಆದ್ಯತೆ ನೀಡಿ, ನಿಮಗೆ ಯಶಸ್ಸು ಸಿಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಡಾ. ದಿಲೀಪ್ ರಂಗರಾಜನ್, ಡಾ. ಪ್ರವೀಣ್ ಮಾಳವಾದೆ, ಡಾ. ಪ್ರದೀಪ್
ಎಂ.ಜಿ., ಸತೀಶ್ ಸೇರಿದಂತೆ ಹಲವರಿದ್ದರು

ವರದಿ ಮಂಜುನಾಥ್ ಶೆಟ್ಟಿ…