ಶಿವಮೊಗ್ಗ: ವರ್ತಕರಿಗೆ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಶಿವಮೊಗ್ಗ
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ.

ಸಂಘದ ಪದಾಧಿಕಾರಿಗಳು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ,
ವ್ಯಾಪಾರಸ್ಥರ ತೊಂದರೆಗಳ ಬಗ್ಗೆ ಗಮನ ಸೆಳೆದರು.

ಸಣ್ಣ ಪುಟ್ಟ ವ್ಯಾಪಾರಸ್ಥರು, ದೊಡ್ಡ ಉದ್ಯಮಿಗಳು, ಬೀದಿಬದಿ ವ್ಯಾಪಾರಸ್ಥರು ಶಿವಮೊಗ್ಗದಲ್ಲಿ ನಡೆಯುವ ಅಹಿತಕರ ಘಟನೆಗಳಿಂದಾಗಿ ತತ್ತರಿಸಿ ಹೋಗಿದ್ದಾರೆ. ಈಗಾಗಲೇಕೊರೋನಾದ ಸಂಕಷ್ಟಕ್ಕೆ ಒಳಗಾಗಿ ಇಡೀ ಎರಡು ವರ್ಷ ಆರ್ಥಿಕ ಸಂಕಷ್ಟ ಅನುಭವಿಸಿದರೂ ನಂತರ ವೀಕೆಂಡ್ ಕರ್ಫ್ಯೂಗೆ ವ್ಯಾಪಾರವೇ ಆಗಲಿಲ್ಲ. ಬೀದಿಬದಿ ವ್ಯಾಪಾರಿಗಳಂತೂ ಸಂಕಷ್ಟ
ಅನುಭವಿಸುತ್ತಿದ್ದಾರೆ. ಒಂದು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದಾರೆ.

ದಿನಸಿ,ಬಟ್ಟೆ, ಚಿನ್ನ ಬೆಳ್ಳಿ ಅಂಗಡಿಗಳು ವ್ಯಾಪಾರವಿಲ್ಲದೇ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ. ಆದ್ದರಿಂದ ಕರ್ಫ್ಯೂವನ್ನು ತೆರವುಗೊಳಿಸಿ ವ್ಯಾಪಾರಕ್ಕೆ
ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ವರ್ಷ 365 ದಿನಗಳಲ್ಲಿ ಕೇವಲ 100ರಿಂದ 150 ದಿನಗಳ ಕಾಲ ಮಾತ್ರ ವ್ಯಾಪಾರ ಮಾಡಲು
ಸಾಧ್ಯವಾಗಿದೆ. ಜಿಲ್ಲಾಧಿಕಾರಿಗಳು ವ್ಯಾಪಾರಸ್ಥರ ಸಂಕಷ್ಟಗಳನ್ನು ಅರಿತು ವ್ಯಾಪಾರಸ್ಥರಿಗೆ ಅನುಕೂಲವಾಗುವಂತಹ ತೀರ್ಮಾನ ಕೈಗೊಳ್ಳಬೇಕು. ಕರ್ಪ್ಯೂ ತೆರವುಗೊಳಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಶನಿವಾರದ ವರೆಗೆ ಕಾಯಿರಿ. ಇಂತಹ ಘಟನೆಗಳು ನಡೆದಾಗ ಸಹಕರಿಸಬೇಕು. ಶನಿವಾರ ಮಧ್ಯಾಹ್ನದ ನಂತರ ಕರ್ಫ್ಯೂ ತೆರೆವುಗೊಳಿಸುದರ ಬಗ್ಗೆ
ಯೋಚಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎನ್. ಗೋಪಿನಾಥ್, ಪದಾಧಿಕಾರಿಗಳಾದ ಅಶ್ವತ್ಥನಾರಾಯಣ
ಶೆಟ್ಟಿ, ಜಗದೀಶ್ ಮಾತನ್ನನವರ್, ದಿನಕರ್, ವಿನೋದ್ ಕುಮಾರ್ ಜೈನ್ ಸೇರಿದಂತೆ
ಹಲವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…