
24/02/2022 ಗುರುವಾರ ಬೆಳಿಗ್ಗೆ ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳಾದ ಮಾನ್ಯ ಶ್ರೀ ಡಾ.ಸೇಲ್ವಮಣಿ ರವರ ಮೂಲಕ ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ರವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಶ್ರೀಯುತ ಚನ್ನವೀರಪ್ಪ ಗಾಮನಗಟ್ಟಿ ರವರು, ಎರಡು ವರ್ಷಗಳಿಂದ ಲಾಕ್ ಡೌನ್ ನಿಂದ ಬೀದಿ ಬದಿ ವ್ಯಾಪಾರಸ್ಥರ ಜೀವನ ಅತಂತ್ರವಾಗಿದೆ, ದೂರದ ಊರಿಗೆ ಹೋದವರು ಈಗ ಬಂದು ವ್ಯಾಪಾರ ಮಾಡಲು ಕೈ ಗೊಳ್ಳುವ ವೇಳೆಗೆ ಹಿಜಾಬ್ ಹಾಗೂ ಹರ್ಷ ಎಂಬ ಯುವಕನ ಹತ್ಯೆಯಿಂದ ಪೊಲೀಸ್ ಇಲಾಖೆಯು ಐಪಿಸಿ 144 ಸೇಕ್ಷನ್ ಜಾರಿ ಮಾಡಿದರೆ, ಜಿಲ್ಲಾಡಳಿತ ಕರ್ಫ್ಯೂ ಜಾರಿ ಮಾಡಿದೆ, ಇದರಿಂದ ಅ ದಿನವೇ ದುಡಿದು ತಿನ್ನುವ ಬೀದಿ ಬದಿ ವ್ಯಾಪಾರಿಗಳ ಹೊಟ್ಟೆಯ ಮೇಲೆ ಬರೆ ಬಿದ್ದಂತೆಯಾಗಿದೆ.

ಕರ್ಫ್ಯೂ ಜಾರಿ ಇದ್ದರು ಕೂಡ ರಸ್ತೆಯ ಬದಿ ನಿಲ್ಲಿಸಿದ ಬೀದಿ ಬದಿ ವ್ಯಾಪಾರಿಗಳ ತಳ್ಳು ಗಾಡಿ, ವಾಹನಗಳು ಬೆಂಕಿಗೆ ದಹನವಾಗುತ್ತಿರುವ ದೃಶ್ಯಗಳು ಮಾಧ್ಯಮಗಳಲ್ಲಿ ಕಾಣುತ್ತಿರುವೇವೂ, ಅಂತಹ ಬೀದಿ ಬದಿಯ ತಳ್ಳು ಗಾಡಿಗಳು ಹಾಗೂ ವಾಹನಗಳನ್ನು ಕಳೆದುಕೊಂಡವರಿಗೆ ಬೇಗನೆ ಸರ್ಕಾರದ ಪರಿಹಾರ ದೊಂದಿಗೆ ದುಡುಮೆಗೆ ಅವಕಾಶ ಕಲ್ಪಿಸಿ ಕೊಡಿ ಎಂದು ಮುಖ್ಯಮಂತ್ರಿ ರವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.

ಶಿವಮೊಗ್ಗ ನಗರದಲ್ಲಿ ಕರ್ಫ್ಯೂವನ್ನು ತೆರವುಗೊಳಿಸಿ ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅವಕಾಶ ಕಲ್ಲಿಸಿಕೊಡಿ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಯಿತು. ನಿನ್ನೆ ಶಿವಮೊಗ್ಗ ಜಿಲ್ಲೆಯ ಸಂಸದರಾದ ಸನ್ಮಾನ್ಯ ಶ್ರೀ ಬಿವೈ. ರಾಘವೇಂದ್ರ ರವರಿಗೆ, ಇದರ ಬಗ್ಗೆ ಮನವಿ ಸಲ್ಲಿಸಲಾಯಿತು. ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ಬೀದಿ ಬದಿಯಲ್ಲಿ ನಿಲ್ಲಿಸಿದ ವ್ಯಾಪಾರಸ್ಥರ ಯಾರ ಯಾರ ತಳ್ಳು ಗಾಡಿಗಳು ಹಾಗೂ ವಾಹನಗಳು ಅಗ್ನಿಗೆ ಆವುತಿಯಾಗಿವೆ, ಅದರ ಬಗ್ಗೆ ಸಂಬಂಧಪಟ್ಟ ಪಟ್ಟ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿ ಅದರ ವರದಿಯನ್ನು ನಮಗೆ ನೀಡಿದಲ್ಲಿ ಅವರ ಪರಿಹಾರಕ್ಕೆ ಸರ್ಕಾರಕ್ಕೆ ವರದಿ ಕಳಿಸಿ ಪರಿಹಾರ ನೀಡುತ್ತೇವೆ ಎಂದು ತಿಳಿಸಿದರು.