ಶಿವಮೊಗ್ಗ ನಗರದಲ್ಲಿ ನಡೆದ ದುಷ್ಕರ್ಮಿಗಳ ಕುಕೃತ್ಯದಿಂದ ಹತ್ಯೆಯಾದ ಬಜರಂಗದಳ ಕಾರ್ಯಕರ್ತ ಶ್ರೀ ಹರ್ಷ ಅವರ ಮನೆಗೆ ಪ್ರಮುಖರೊಂದಿಗೆ ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ.ಬಿ.ಅಶೋಕ ನಾಯ್ಕ ರವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಶಾಸಕರಾದ ಅಶೋಕ್ ನಾಯ್ಕ ರವರು ವೈಯಕ್ತಿಕವಾಗಿ 1 ಲಕ್ಷ ರೂ. ಹಾಗೂ ಶಿವಮೊಗ್ಗ ತಾಲ್ಲೂಕು ಮತ್ತು ಹೊಳೆಹೊನ್ನೂರು ಮಂಡಲದ ವತಿಯಿಂದ 1 ಲಕ್ಷ ರೂ. ಕುಟುಂಬಸ್ಥರಿಗೆ ನೀಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ರುದ್ರೇಗೌಡ್ರು, ನಿಕಟ ಪೂರ್ವ ಜಿ.ಪಂ ಸದಸ್ಯರಾದ ಕೆ.ಇ. ಕಾಂತೇಶ್ ರವರು, ಹಾಗೂ ಬಿ.ಜೆ.ಪಿ ಮಂಡಲ ಅಧ್ಯಕ್ಷರುಗಳಾದ ರತ್ನಾಕರ ಶೆಣೈ, ಮಂಜುನಾಥ್ ರವರು, ಪ್ರಧಾನ ಕಾರ್ಯದರ್ಶಿಗಳು, ಪಕ್ಷದ ಮುಖಂಡರು, ಪ್ರಮುಖರು, ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…