ನರೇಂದ್ರ ಮೋದಿಯವರ ಸರ್ಕಾರ COVID ಸಂಕಷ್ಟದ ನಡುವೆಯೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಸುವ ಮೂಲಕ ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಿದೆ ಅಚ್ಛೇ ದಿನಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ದಿನೇ ದಿನೇ ಅಗತ್ಯ ವಸ್ತುಗಳನ್ನು ಏರಿಸುವ ಮೂಲಕ ತನ್ನ ಇಬ್ಬಗೆಯ ನೀತಿ ಅನುಸರಿಸುತ್ತಿದೆ .ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತೈಲ ಬೆಲೆ ಇಳಿಕೆ ಆಗಲಿದೆ ಎಂದೇ ಎಲ್ಲರ ಭಾವನೆಯಾಗಿತ್ತು .ಇದನ್ನು ನಂಬಿ ಅನೇಕರು ಬಿಜೆಪಿಯನ್ನು ಬೆಂಬಲಿಸಿದರು ಆದರೆ ಈಗ ಬಿಜೆಪಿ ಸರ್ಕಾರ ಜನರಿಗೆ ನಂಬಿಕೆಯನ್ನು ಹುಸಿ ಮಾಡಿ ತೈಲ ಬೆಲೆ ನಿರಂತರವಾಗಿ ಏರಿಕೆ ಮಾಡುವ ಮೂಲಕ ಜನರಿಗೆ ಜನರನ್ನು ಸಂಕಷ್ಟಕ್ಕೆ ದೂಡಿದೆ .ಯುಪಿಎ ಸರ್ಕಾರ ಇದ್ದಾಗ ಪ್ರತಿ ಲೀಟರ್ ಪೆಟ್ರೋಲ್ ಗೆ 75ಹಾಗೂ ಡೀಸೆಲ್ ಬೆಲೆ 64 ರ ಆಸುಪಾಸಿನಲ್ಲಿತ್ತು .
ಆದರೆ ಎನ್ ಡಿಎ ಸರ್ಕಾರ ಬಂದ ನಂತರ ಪೆಟ್ರೋಲ್ ಬೆಲೆ ನೂರರ ಗಡಿ ದಾಟಿದೆ .ಡೀಸೆಲ್ ಬೆಲೆ ಶತಕದ ಅಂಚಿನಲ್ಲಿದ್ದ .ಮೊದಲೇ COVID ಲಾಕ್ ಡೌನ್ ಸುಳಿಗೆ ಸಿಲುಕಿ ದೈನಂದಿನ ಜೀವನ ನಡೆಸುವುದೇ ಕಷ್ಟಕರವಾಗಿರುವಾಗ ತೈಲ ಬೆಲೆ ಏರಿಕೆಯಿಂದ ಜನರು ದಿಕ್ಕು ತೋಚದಂತಾಗಿದೆ .ತೈಲ ಬೆಲೆ ಏರಿಕೆಯಿಂದಾಗಿ ಹೂಡಿದ ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರಿದೆ .ಸರ್ಕಾರ ಸುಳ್ಳು ಆಶ್ವಾಸನೆಗಳನ್ನು ನೀಡಿ ಬಡವರು ಮಧ್ಯಮ ವರ್ಗದವರು ಜೀವಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ಮಾಡಿರುವುದು ಖಂಡನೀಯವಾಗಿದೆ ಆದ್ದರಿಂದ ಇಂದು ತೀರ್ಥಹಳ್ಳಿಯಲ್ಲಿ ಮಾಜಿ ಸಚಿವರು ಕೆಪಿಸಿಸಿ ವಕ್ತಾರ ರಾದ ಶ್ರೀಮನ್ ಕಿಮ್ಮನೆ ರತ್ನಾಕರ್ ಅವರ ನೇತೃತ್ವದಲ್ಲಿ ಪೆಟ್ರೋಲ್ ಡಿಸೇಲ್ ಅಗತ್ಯವಸ್ತುಗಳ ಬೆಲೆ ಏರಿಕೆ ವಿರುದ್ಧ ಪೆಟ್ರೋಲ್ ಬಂಕ್ ಗಳ ಮುಂದೆ ಪ್ರತಿಭಟನೆ ಮಾಡಲಾಯಿತು .
ಪ್ರತಿಭಟನೆಯಲ್ಲಿ ಕೆಪಿಸಿಸಿ ಸದಸ್ಯರಾದ ಜಿ ಎಸ್ ನಾರಾಯಣ್ ರಾವ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆಸ್ತೂರ್ ಮಂಜುನಾಥ್ ಗ್ರಾಮಾಂತರ ಬ್ಲಾಕ್ ಅಧ್ಯಕ್ಷರಾದ ಮುಡುಬ ರಾಘವೇಂಯುವ ಕಾಂಗ್ರೆಸ್ ಅಧ್ಯಕ್ಷರಾದ ಅಮರನಾಥ ಶೆಟ್ಟಿ ಹಿರಿಯ ಕಾಂಗ್ರೆಸ್ ಮುಖಂಡರಾದ ಪಟಮಕ್ಕಿ ಮಹಾಬಲೇಶ್ ವಿಲಿಯಂ ಮಾರ್ಟಿಸ್ ತಾಲ್ಲೂಕು ಪಂಚಾಯತಿ ಸದಸ್ಯರಾದ ಕೆಳಕೆರೆ ದಿವಾಕರ್ ಶ್ರುತಿ ವೆಂಕಟೇಶ್ ಪಟ್ಟಣ ಪಂಚಾಯತ ಸದಸ್ಯರಾದ ಗಣಪತಿ’ ಮಂಜುಳ ನಾಗೇಂದ್ರ ನಮ್ರತ್, ಶಬ್ನಮ್ ಸುಶೀಲಾ ಶೆಟ್ಟಿ ‘ ಕಾಂಗ್ರೆಸ್ ಮುಖಂಡರುಗಳಾದ ,ಬಂಡೆ ವೆಂಕಟೇಶ್, ಆದರ್ಶ ಮತ್ತಿಕಟ್ಟೆ ಪೂರ್ಣೇಶ್ ಸುಭಾಷ್ ಕುಲಾಲ್, ಜೈಕರ್ ಶೆಟ್ಟಿ , ಸತೀಶ್ ಶೆಟ್ಟಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಮುಖಂಡರುಗಳು ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ
ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153