26/02/2022 ಶನಿವಾರ ಬೆಳಗ್ಗೆ ಶಿವಮೊಗ್ಗ ನಗರದಲ್ಲಿ, ಜೆಡಿಎಸ್ ಮುಖಂಡರಾದ ಮಾನ್ಯ ಶ್ರೀ ಶ್ರೀಕಾಂತ್ ರವರಿಗೆ, ಶಿವಮೊಗ್ಗ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಶ್ರೀ ಯುತ ಚನ್ನವೀರಪ್ಪ ಗಾಮನಗಟ್ಟಿ ರವರು, ಭೇಟಿ ಮಾಡಿ ಒಂದು ವಾರದಿಂದ ನಗರದಲ್ಲಿ144 ಸೇಕ್ಷನ್ ಮತ್ತು ಕರ್ಫ್ಯೂ ಜಾರಿಯಿಂದ ಅ ದಿನವೇ ದುಡಿದು ತಿನ್ನುವ ಬೀದಿ ಬದಿಯ ವ್ಯಾಪಾರಿಗಳ ಜೀವನ ತೊಂದರೆಯಲ್ಲಿ ಸಿಲುಕಿದ್ದಾರೆ.

ನಗರದಲ್ಲಿ ಕರ್ಫ್ಯೂ ಜಾರಿ ವೇಳೆ ರಸ್ತೆ ಬದಿ ನಿಲ್ಲಿಸಿದ ತಳ್ಳುಗಾಡಿಗಳು ಬೆಂಕಿಗೆ ಆವುತಿಯ ದೃಶ್ಯ, ರಸ್ತೆಯಲ್ಲಿ ಇರುವ ಅಂಗಡಿಗಳ ನಾಶ, ರಸ್ತೆಯಲ್ಲಿ ಸಂಗ್ರಹಿಸಿ ಹಿಟ್ಟ ಹಣ್ಣು ಹಂಪಲುಗಳ ನಾಶ, ಇನ್ನೂ ಇತರೆ ವಸ್ತುಗಳ ನಾಶದ ದೃಶ್ಯಗಳು ಮಾಧ್ಯಮದಲ್ಲಿ ಬಂದಿವೆ, ಇದರ ಬಗ್ಗೆ ಜಿಲ್ಲಾಧಿಕಾರಿಗಳಿಗೂ ಜಿಲ್ಲೆಯ ಸಂಸದರಿಗೂ, ರಾಜ್ಯದ ಮುಖ್ಯ ಮಂತ್ರಿಗಳಿಗೂ ನಷ್ಟ ಸಂಭವಿಸಿದವರಿಗೆ ವರದಿ ಆಧರಿಸಿ ಪರಿಹಾರ ಒದಗಿಸಲು ಒಕ್ಕೂಟದಿಂದ ಆಗ್ರಹಿಸಲಾಗಿದೆ.

ಆದರೆ ಸರ್ಕಾರದ ಪರಿಹಾರ ಲಭಿಸುವ ವೇಳೆಗೆ ಬೀದಿ ಬದಿ ವ್ಯಾಪಾರಿಗಳ ಜೀವನವೇ ಕಳೆದು ಹೋಗಿರುತ್ತದೆ, ಹಾಗಾಗಿ ಇತರೆ ಸಂಘ, ಸಂಸ್ಥೆ, ಸಂಘಟನೆಗಳು ಮುಂದೆ ಬಂದು ಅವರಿಗೆ ಸ್ವಯಂ ಪ್ರೇರಿತರಾಗಿ ಸಹಾಯ ಮಾಡಬೇಕು, ನಿರುದ್ಯೋಗ ನಿವಾರಣೆ ಆಗಬೇಕಾಗಿದೆ. ಹಾಗೆಯೇ ಇತರೆ ಪಕ್ಷದ ಮುಖಂಡರಿಂದ ಅವರಿಗೆ ಸಹಾಯ ಹಸ್ತ ಆಗಬೇಕಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡರಾದ ಮಾನ್ಯ ಶ್ರೀ ಶ್ರೀಕಾಂತ್ ರವರು, ಅಂತವರ ಪಟ್ಟಿ ನೀಡಿದರೆ, ಅವರಿಗೆ ಸಹಾಯ ಮಾಡಲು ನಾವು ಸಿದ್ಧ ಎಂದರು. ಈ ಸಂದರ್ಭದಲ್ಲಿ ಜಾಮಿಯಾ ಮಸೀದಿ ಮಾಜಿ ಅಧ್ಯಕ್ಷರಾದ ಶ್ರೀ ಆಫ್ತಾ ಫರ್ವೀಜ್, ಆದೀಲ್, ಹಾಗೂ ಇತರರೂ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…