ಚಿತ್ರದುರ್ಗ ಜಿಲ್ಲೆಯ ಹಿರೇಕಂದವಾಡಿ ಗ್ರಾಮದ ವಾಸಿಯೊಬ್ಬರು ಹೊಳೆಹೊನ್ನೂರು ಠಾಣಾ ವ್ಯಾಪ್ತಿಯ ಹೊಸಕೊಪ್ಪ ಗ್ರಾಮದ ಗೋಪಾಲಯ್ಯ ರವರಿಂದ ಅಡಿಕೆಯನ್ನು ಖರೀದಿ ಮಾಡಿಕೊಂಡು, ಅವರಿಗೆ 18 ಲಕ್ಷಗಳನ್ನು ಕೊಟ್ಟುಬರುವಂತೆ ತಿಳಿಸಿ ಬುಲೇರೋ ವಾಹನದಲ್ಲಿ ಚಾಲಕ ಅನಿಲನೊಂದಿಗೆ 03 ಜನ ಆಳುಗಳನ್ನು ಕಳುಹಿಸಿದ್ದು, ಅವರುಗಳು ದಿನಾಂಕಃ-02-03-2022 ರಂದು ಮಧ್ಯಾಹ್ನ ಹೊಸಕೊಪ್ಪ ಗ್ರಾಮದಲ್ಲಿ ಬುಲೇರೋ ವಾಹನವನ್ನು ನಿಲ್ಲಿಸಿ ಅದರ ಕ್ಯಾಬಿನ್ ನಲ್ಲಿ 18 ಲಕ್ಷ ರೂಗಳನ್ನು ಇರಿಸಿ ಊಟಕ್ಕೆಂದು ಹೋಗಿರುತ್ತಾರೆ.
ಊಟ ಮುಗಿಸಿಕೊಂಡು ಬಂದು ನೋಡಿದಾಗ ಕ್ಯಾಬಿನ್ ನಲ್ಲಿ ಇಟ್ಟಿದ್ದ 18 ಲಕ್ಷ ರೂಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0073/2022 ಕಲಂ 379 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ, ನಂತರ ಪಿಐ ಹೊಳೆಹೊನ್ನೂರು ಪೊಲೀಸ್ ಠಾಣೆ, ಪಿಎಸ್ಐ ಮತ್ತು ಸಿಬ್ಬಂಧಿಗಳ ತಂಡವು ತನಿಖೆ ಕೈಗೊಂಡು ಸದರಿ ಪ್ರಕರಣದ ಆರೋಪಿಗಳಾದ 1) ಅನಿಲ್ ಕುಮಾರ್ ಆರ್, 23 ವರ್ಷ, ಹಿರೇಕಂದವಾಡಿ ಗ್ರಾಮ ಹೊಳಲ್ಕೆರೆ, ಚಿತ್ರದುರ್ಗ, 2) ನಾಗರಾಜ ಜಿ, 24 ವರ್ಷ, ಹಿರೇಕಂದವಾಡಿ ಗ್ರಾಮ ಹೊಳಲ್ಕೆರೆ, ಚಿತ್ರದುರ್ಗ ರವರುಗಳನ್ನು ದಸ್ತಗಿರಿ ಮಾಡಿ ಆರೋಪಿತರಿಂದ ರೂ 17,95,000/- ಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ದ್ವಿ ಚಕ್ರ ವಾಹವನ್ನು ವಶಪಡಿಸಿಕೊಳ್ಳಲಾಗಿರುತ್ತದೆ.