04/03/2022 ಶುಕ್ರವಾರ ಬೆಳಗ್ಗೆ ಶಿವಮೊಗ್ಗ ನಗರದ, ಬಿ.ಹೆಚ್.ರಸ್ತೆ ಬೆಕ್ಕಿನ ಕಲ್ಮಠ ವೃತ್ತದ ಮಹಾನಗರ ಪಾಲಿಕೆಯ ವಾಣಿಜ್ಯ ಸಂಕೀರ್ಣದಲ್ಲಿ, ಮಹಾನಗರ ಪಾಲಿಕೆ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಜಿಲ್ಲಾ ಕೌಶಲ್ಯ ಮೀಷನ್ ಶಿವಮೊಗ್ಗ, ಡೆ-ನಲ್ಮ್ ಅಭಿಯಾನ ಇವರ ಸಂಯುಕ್ತಾಶ್ರಯದಲ್ಲಿ, ಬೀದಿ ಬದಿ ವ್ಯಾಪಾರಿಗಳ ಬೆಂಬಲ ಉಪಘಟಕದಡಿ ಎರಡು ದಿನಗಳ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರಕ್ಕೆ ಸಿವಿಲ್ ಕೋರ್ಟ್ ನ್ಯಾಯಾಧೀಶರಾದ ಶ್ರೀ ಮತಿ ಸರಸ್ವತಿ ರವರು ತುಳಸಿ ಗಿಡಕ್ಕೆ ನೀರು ಎರೆಯುದರ ಮೂಲಕ ಚಾಲನೆ ನೀಡಿ, 2014ನೇ ಅಧಿನಿಯಮದ ಬಗ್ಗೆ ಬೀದಿ ಬದಿ ವ್ಯಾಪಾರಿಗಳಿಗೆ ಕಾನೂನು ಪ್ರಾಧಿಕಾರದ ಅರಿವು ತಿಳಿಸಿದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಅಧಿಕಾರಿಗಳಾದ ಶ್ರೀ ಸುರೇಶ್ ರವರು, ಸರ್ಕಾರಿ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು, ಪಿಎಂ ಸ್ವ ನಿಧಿ ಸಾಲ ಪಡೆಯಲು ಎಲ್ಲರಿಗೂ ತಿಳಿಸಿದರು. ಪಾಲಿಕೆಯ ಸಮುದಾಯದತ್ತ ಅಧಿಕಾರಿಗಳಾದ ಶ್ರೀ ಮತಿ ಅನುಪಮಾ ರವರು, ಬೀದಿ ಬದಿ ವ್ಯಾಪಾರಿಗಳ ಸ್ವಚ್ಛತೆ, ಶುಚಿತ್ವ, ಕಾರ್ಡ್ ಪರಭಾರೆ ಮಾಡುವಂತಿಲ್ಲ ಎಂದು ತಿಳಿಸಿದರು. ಕೌಶಲ್ಯ ಅಭಿವೃದ್ಧಿ ವ್ಯವಹಾರಿಕ ಅಧಿಕಾರಿಗಳಾದ ಶ್ರೀ ದೆವೇಂದ್ರ ನಾಯ್ಕ್ ರವರು, ಬೀದಿ ಬದಿ ವ್ಯಾಪಾರಿಗಳ ಡೇ-ನಲ್ಮ್ ಬಗ್ಗೆ ನಿರಾಶ್ರಿತರ ತಾಣದ ಬಗ್ಗೆ ಮಾಹಿತಿ ನೀಡಿದರು.
ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರು, ಶಿವಮೊಗ್ಗ ಮಹಾನಗರ ಪಾಲಿಕೆ ಪಟ್ಟಣ ಮಾರಾಟ ಸಮಿತಿಯ ಸದಸ್ಯರಾದ ಶ್ರೀ ಚನ್ನವೀರಪ್ಪ ಗಾಮನಗಟ್ಟಿ ರವರು, ಕಾನೂನು ನಿಯಮಗಳನ್ನು ಉಲ್ಲಂಘಿನೆ ಮಾಡಿದೆ, ವ್ಯಾಪಾರ ಮಾಡುವ ಆರ್ಥಿಕ ದುರ್ಬಲರಿಗೆ ನಮ್ಮ ಸಂಘಟನೆಯು ಸದಾ ನಿಮ್ಮ ಬೆಂಬಲಕ್ಕೆ ನಿಂತ್ತಿರುತ್ತದೆ, ನಿಮ್ಮ ವ್ಯಾಪಾರ ಮಾಡುವ ಸ್ಥಳದಲ್ಲಿ ಎಲ್ಲರೂ ಸೌಹಾರ್ದದಿಂದ ಇರಿ, ಯಾರೆ ಗ್ರಾಹಕರಾದರು ವಸ್ತುಗಳನ್ನು ನೋಡಿ ಕೋಳ್ಳುವರೆ ಹೊರತು, ಜಾತಿ, ಧರ್ಮ, ವರ್ಗ, ನೋಡಿ ವ್ಯಾಪಾರ ಮಾಡುವುದಿಲ್ಲ, ಬೇಡವಾದ ವದಂತಿಗಳಿಗೆ ಕಿವಿಗೋಡದೆ, ಕಷ್ಟಗಳು ಬಂದಾಗ ಎಲ್ಲರೂ ಸೇರಿ ಎದುರಿಸಬೇಕು, ಎಂದು ಹೇಳಿದರು, ಹಾಗೂ ಮೊನ್ನೆ ನಗರದಲ್ಲಿ ನಡೆದ ಅಹಿತಕರ ಘಟನೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ದುಷ್ಕರ್ಮಿಗಳಿಂದ ನಷ್ಟವಾದಲ್ಲಿ ಸಮೀಪದ ಠಾಣೆಯಲ್ಲಿ ದೂರನ್ನು ನೀಡಿ, ಅದರ ಪಂಚನಾಮೆ ವರದಿ ನೀಡಿದಲ್ಲಿ ಅವರಿಗೆ ಪರಿಹಾರ ಕೋಡಿಸಲು ಸಂಘಟನೆಯು ಪ್ರಯತ್ನಿಸುತ್ತದೆ ಎಂದು ತಿಳಿಸಿದರು.
ಸ್ವಾಗತವನ್ನು ಪಾಲಿಕೆ ಸಮುದಾಯ ಸಂಘಟಕರಾದ ಶ್ರೀ ರತ್ನಾಕರ್ ರವರು, ಮಾಡಿದರು, ನಿರೂಪಣೆಯನ್ನು ಸಮುದಾಯ ವ್ಯವಾಹರಿಕ ಅಧಿಕಾರಿಗಳಾದ ಶ್ರೀ ಲೋಕೇಶಪ್ಪ ನವರು, ನೀಡಿದರು, ಈ ಸಂದರ್ಭದಲ್ಲಿ ಟಿವಿಸಿ ಸದಸ್ಯರಾದ ನಾರಾಯಣ, ವಿನಯ್ ಕುಮಾರ್,ಶೇಷಯ್ಯ, ಪಾಲಿಕೆಯ ಶ್ರೀ ಮತಿ ಗೀತಾ ರವರು, ಶ್ರೀ ಮತಿ ರೇಣುಕಾ ಹಾಗೂ ಬೀದಿ ಬದಿ ವ್ಯಾಪಾರಿಗಳು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.