ಶಿವಮೊಗ್ಗ: ಪಲ್ಸ್ ಪೊಲಿಯೋ ಅಭಿಯಾನ ಶೇ. 100ರಷ್ಟು ಯಶಸ್ವಿಗೊಳಿಸಲು ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಹಾಗೂ ಸಂಪೂರ್ಣ ಕ್ರಮ ವಹಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ನಾಗೇಂದ್ರ ಎಸ್ ಹೊನ್ನಳ್ಳಿ ಹೇಳಿದರು.

ರಾಜೇಂದ್ರನಗರದ ರೋಟರಿ ಶಾಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಎಲ್ಲ ರೋಟರಿ ಕ್ಲಬ್‌ಗಳ ಸಹಯೋಗದಲ್ಲಿ ಆಯೋಜಿಸಿದ್ದ ಪಲ್ಸ್ ಪೊಲಿಯೋ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಲ್ಸ್ ಪೊಲಿಯೋ ಅಭಿಯಾನವನ್ನು ಆರೋಗ್ಯ ಇಲಾಖೆಯಿಂದ ಯಶಸ್ವಿಯಾಗಿ ನಡೆದುಕೊಂಡು ಬರಲಾಗುತ್ತಿದೆ. ಐದು ವರ್ಷದೊಳಗಿನ ಶೇ. 90ಕ್ಕೂ ಅಧಿಕ ಮಕ್ಕಳಿಗೆ ಲಸಿಕೆ ನೀಡಬೇಕು. ಇನ್ನುಳಿದ ಮಕ್ಕಳನ್ನು ಎರಡು ಮೂರು ದಿನಗಳಲ್ಲಿ ಲಸಿಕೆ ನೀಡುವ ಅಭಿಯಾನ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ಡಾ. ಎಲ್.ನಾಗರಾಜನಾಯ್ಕ್ ಮಾತನಾಡಿ, ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಫೆ. 27ರ ಭಾನುವಾರ ಪಲ್ಸ್ ಪೊಲಿಯೋ ಅಭಿಯಾನ ಯಶಸ್ವಿಗೊಳಿಸಿದ್ದು, ಮಾ. 6ರಂದು ನಗರ ಪ್ರದೇಶಗಳಲ್ಲಿ ಪಲ್ಸ್ ಪೊಲಿಯೋ ಅಭಿಯಾನ ನಡೆಸಲಾಗಿದೆ.

ಐದು ವರ್ಷದೊಳಗಿನ ಮಕ್ಕಳಿಗೆ ಪಾಲಕರು ಹತ್ತಿರದ ಆರೋಗ್ಯ ಕೇಂದ್ರಗಳಲ್ಲಿ ಪಲ್ಸ್ ಪೊಲಿಯೋ ಲಸಿಕೆ ಹಾಕಿಸಬೇಕು ಎಂದರು.
ಡಾ. ಪಿ.ನಾರಾಯಣ ಮಾತನಾಡಿ, ಪೊಲಿಯೋ ಮುಕ್ತ ವಿಶ್ವ ಆಗುವ ಸದ್ಯದಲ್ಲೇ ನನಸು ಆಗಲಿದೆ. ಎಲ್ಲರೂ ಪಲ್ಸ್ ಪೊಲಿಯೋ ಲಸಿಕೆ ಹಾಕಿಸಬೇಕು. ಪಾಲಕರು ಆದ್ಯತೆ ಕರ್ತವ್ಯವಾಗಿ ಪಲ್ಸ್ ಪೊಲಿಯೋ ಲಸಿಕೆ ಹಾಕಿಸಬೇಕು. ವಿಶೇಷ ಪ್ರಯತ್ನದೊಂದಿಗೆ ರೋಟರಿ ಸಂಸ್ಥೆಗಳ ಸಹಕಾರದೊಂದಿಗೆ ಎಲ್ಲ ಕಡೆಗೂ ಅಭಿಯಾನ ಯಶಸ್ವಿಗೊಳಿಸಲಾಗುತ್ತಿದೆ ಎಂದು ಹೇಳಿದರು.
ಡಾ. ಸತೀಶ್‌ಚಂದ್ರ, ಪ್ರಮೋದ್, ಡಾ. ಚಂದ್ರಶೇಖರ್, ಡಾ. ಪಿ.ನಾರಾಯಣ್, ಜಿ.ವಿಜಯ್‌ಕುಮಾರ್, ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಮಂಜುನಾಥ್ ಕದಂ, ಡಾ. ಹರ್ಷ, ಎಂ.ಪಿ.ಆನAದಮೂರ್ತಿ, ಎಸ್.ಗಣೇಶ್, ರಾಜಶೇಖರ್ ಮತ್ತಿತರರು ಹಾಜರಿದ್ದರು.

ವರದಿ ಮಂಜುನಾಥ್ ಶೆಟ್ಟಿ…