05/03/2022 ಶನಿವಾರ ಬೆಳಗ್ಗೆ ಶಿವಮೊಗ್ಗ ನಗರದ ಸರ್ಕಾರಿ ಕನ್ನಡ ಮತ್ತು ಆಂಗ್ಲ ಪ್ರಧಾನ ಹಿರಿಯ ಪ್ರಾಥಮಿಕ ಶಾಲೆಗೆ (ಮೈನ್ ಮಿಡ್ಲ್ ಸ್ಕೂಲ್) 2022/23 ಸಾಲಿಗೆ ಮಕ್ಕಳ ದಾಖಲಾತಿಗಾಗಿ ಹಳೇ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು, ಎಸ್ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು, ಶಾಲಾ ಶಿಕ್ಷಕರು ಮಕ್ಕಳೊಂದಿಗೆ ಸಾವರ್ಕರ್ ನಗರ, ರಷ್ಕಲ್ ಮೊಹಲ್ಲಾ, ತಿಗಳರ ಬೀದಿ, ಧರ್ಮರಾಯನ ಕೇರಿ, ಬೇಡರ ಕೇರಿ, ಮೀನು, ಮಟನ್ ಮಾರ್ಕೆಟ್, ಶಿವಾಜಿ ರಸ್ತೆ, ಅಶೋಕ ರಸ್ತೆ, ಬಾಲಕೃಷ್ಣ ಏರಿಯಾ, ಮೊಹಿದ್ದೀನ್ ಗಲ್ಲಿ, ಮತ್ತು 06/03/2022ರ ಭಾನುವಾರ ಕೂಡ ರಾಜೀವ್ ಗಾಂಧಿ ನಗರ ಇನ್ನೂ ಹಲವು ಗಲ್ಲಿಗಳಲ್ಲಿ ಪಾದಯಾತ್ರೆಯ ಮೂಲಕ 5 ವರ್ಷ 5 ತಿಂಗಳು ತುಂಬಿದ ಮಕ್ಕಳಿಗೆ ಹಾಗೂ 1ರಿಂದ 7ನೇ ತರಗತಿಯ ಮಕ್ಕಳನ್ನು ಶಾಲೆಗೆ ಸೇರಿಸಿ, ಸರ್ಕಾರಿ ಶಾಲೆಯಲ್ಲಿ ಇರುವ ಸವಲತ್ತುಗಳು ಸೌಲಭ್ಯಗಳ ಬಗ್ಗೆ ಮಕ್ಕಳ ಪೋಷಕರಿಗೆ ಮಾಹಿತಿ ನೀಡಲಾಯಿತು.
ಉಚಿತ ಮಕ್ಕಳಿಗೆ ಇರುವ ಸೌಲಭ್ಯಗಳು (ಪ್ರೋತ್ಸಾಹದಾಯಕ ಯೋಜನೆಗಳು)…
- ಶೂ ಮತ್ತು ಸಾಕ್ಸ್,
- ಮಧ್ಯಾಹ್ನ ಬಿಸಿಯೂಟ,
- ರಾಷ್ಟ್ರೀಯ ಶಿಕ್ಷಣ ನೀತಿ 2020 ರಂತೆ,
- ನಲಿ- ಕಲಿ ಶಿಕ್ಷಣ,
- ಸ್ಮಾರ್ಟ್ ಕ್ಲಾಸ್ ಶಿಕ್ಷಣ,
*ಒಂದನೇ ತರಗತಿಯಿಂದ ಚಟುವಟಿಕೆ ಆಧಾರಿತ ಶಿಕ್ಷಣ, - ನುರಿತ ತರಬೇತಿ ಹೊಂದಿದ ಶಿಕ್ಷಕರ ಮಾರ್ಗದರ್ಶನದಲ್ಲಿ,
*ವಿಶೇಷ ವಿಜ್ಞಾನ ಶಿಕ್ಷಕರಿಂದ ವಿಜ್ಞಾನ ಬೋಧನೆ, - ಉಚಿತ ನೋಟ್ ಬುಕ್, ಬ್ಯಾಗ್, ಲೇಖನ ಸಾಮಗ್ರಿ,
- ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ವಿದ್ಯಾರ್ಥಿ ವೇತನ,
- ಎಸ್.ಸಿ/ಎಸ್.ಟಿ. ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ,
- ಬಸ್ ಪಾಸ್ ಸೌಲಭ್ಯ,
- ವಸತಿ ಸೌಲಭ್ಯ,
- ವಾರದಲ್ಲಿ ಮೂರು ದಿನ ಕಬ್ಬಿಣಾಂಶ ಮಾತ್ರೆ ವಿತರಣೆ,
*ನಿಯಮಿತ ಆರೋಗ್ಯ ತಪಾಸಣೆ, - ಸುಸಜ್ಜಿತವಾದ ಶಾಲಾ ಆಟದ ಮೈದಾನ,
- ಸುಸಜ್ಜಿತ ವಿಜ್ಞಾನ ಪ್ರಯೋಗಶಾಲೆ,
- ಕಂಪ್ಯೂಟರ್ ಶಿಕ್ಷಣ ಸೌಲಭ್ಯ,
- ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ಧನ ವಿತರಣೆ,
- ಲಿಡರ್ ಶಿಪ್ (ನಾಯಕತ್ವ ಗುಣಕ್ಕಾಗಿ) ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್, ಇನ್ನೂ ಹಲವಾರು ಪ್ರೋತ್ಸಾಹದಾಯಕ ಯೋಜನೆ ಬಗ್ಗೆ ಮಕ್ಕಳ ತಂದೆ, ತಾಯಿ ಹಾಗೂ ಪೋಷಕರಿಗೆ ತಿಳಿಸಲಾಯಿತು.
ಈ ಆಂದೋಲನದಲ್ಲಿ ಹಳೇಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಶ್ರೀ ಚನ್ನವೀರಪ್ಪ ಗಾಮನಗಟ್ಟಿ, ಉಪಾಧ್ಯಕ್ಷರಾದ ಶ್ರೀ ಪರಶುರಾಮ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಯತೀಶ್ ರಾಜ್, ಕಾರ್ಯದರ್ಶಿಗಳಾದ ಶ್ರೀ ಮತಿ ಸವಿತಾ ವೆಂಕಟೇಶ್, ಸಹ ಕಾರ್ಯದರ್ಶಿ ವಿಶ್ವನಾಥ್, ಖಜಾಂಚಿ ಶ್ರೀ ಪ್ರಕಾಶ್, ಸದಸ್ಯರಾದ ಶ್ರೀ ರಾಘವೇಂದ್ರ, ಶ್ರೀ ವಸಂತ್ ನಾಯ್ಕ್,ಲಿಂಗರಾಜು, ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀ ಚಂದ್ರಶೇಖರ, ಮುಖ್ಯ ಶಿಕ್ಷಕಿಯಾದ ಶ್ರೀ ಮತಿ ಶಾಂತಾ ಬಾಯಿ, ಸಹ ಶಿಕ್ಷಕರಾದ ಶ್ರೀ ಮತಿ ಕವಿತ, ಶ್ರೀ ಮತಿ ಶಶಿ ವರ್ಣ, ಶ್ರೀ ಪ್ರಕಾಶ್, ಬಿಸಿಯೂಟ ತಯಾರಕರು, ಮತ್ತು ಸ್ಥಳೀಯ ಮುಖಂಡರು ಬಸಿರ್, ಕೃಷ್ಣ ನಾಯ್ಕ್, ಮಕ್ಕಳು ಹಾಗೂ ಇತರರೂ ಪಾದಯಾತ್ರೆಯ ಆಂದೋಲನದಲ್ಲಿ ಭಾಗವಹಿಸಿದ್ದರು.