ಮಲೆನಾಡ ತವರು ಜಿಲ್ಲೆ ಶಿವಮೊಗ್ಗದಲ್ಲಿ ೨೦ಕ್ಕೂ ಹೆಚ್ಚು ಬಯೋಪರ್ಟಿಲೈಸರ್‍ಸ್ ಕಂಪನಿಗಳು ರಾತ್ರೋರಾತ್ರಿ ಸಿದ್ದಪಡಿಸುವ ಬ್ರಾಂಡ್‌ಗಳ ಹೆಸರಿನಲ್ಲಿ ಸರ್ಕಾರದ ಅಧಿಕೃತ ಲ್ಯಾಬೋರೇಟರಿಗಳಿಂದ ಪರಿಶೀಲಿತ ಪರವಾನಿಗೆಗಳಿಲ್ಲದ, ISI, ISO ,AGMARK ಗಳಿಲ್ಲದ, ನಕಲಿ ಅಗ್ರೊ ಪ್ರೊಡಕ್ಟ್ (sಸಾವಯವ) ಗೊಬ್ಬರಗಳನ್ನು ರೈತರಿಗೆ ನೇರವಾಗಿ ಸಾಲದ ರೂಪದಲ್ಲಿ ಕೊಟ್ಟು ವಸೂಲಿ ನಡೆಸುವ ನಕಲಿ ದಂಧೆಗಳ ಮೇಲೆ ಕೃಷಿ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಹಾಗೂ ಪೊಲೀಸ್ ತಂಡಗಳಿಂದ ದಾಳಿ ನಡೆಸಿ ಕಾಳಸಂತೆಕೋರರನ್ನು ಬಂಧಿಸುವಂತೆ ಆಗ್ರಹಿಸಿರುವ ಬಗ್ಗೆ ,
ಕಳೆದ ಏಳೆಂಟು ವರುಷಗಳಿಂದಲೂ ಅಧಿಕ ಸಮಯದಿಂದಲೂ ಮಲೆನಾಡಿನ ಈ ನೆಲದಲ್ಲಿ ಬೀಡು ಬಿಟ್ಟು, ನಕಲಿ ಗೊಬ್ಬರಗಳನ್ನು ಏಜೆಂಟರುಗಳ ಮೂಲಕ ವಿತರಿಸುವ ಬಯೋಪರ್ಟಿಲೈಸರ್‍ಸ್ ಕಂಪನಿಗಳ ಮಾಲೀಕರೊಂದಿಗೆ ಶಾಮೀಲಾಗಿರುವ ಜಿಲ್ಲಾ ಮಟ್ಟದ ಕೃಷಿ ಅಧಿಕಾರಿಗಳನ್ನು ಅಮಾನತ್ತುಗೊಳಿಸಿ ತನಿಖಿಸುವುಂತೆ ಆಗ್ರಹಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಜಿಲ್ಲಾಧಿಕಾರಿಯವರ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿಯನ್ನು ಸಲ್ಲಿಸಿದೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ