ಶಿವಮೊಗ್ಗ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಇಂದು ಜೆಸಿಐ ಶಿವಮೊಗ್ಗದ ವತಿಯಿಂದ ಮಡಿಲು ಶೀರ್ಷಿಕೆ ಅಡಿಯ ಸೀಮಂತ ಕಾರ್ಯಕ್ರಮವನ್ನು ಅನುಪಿನಕಟ್ಟೆಯ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಲಾಗಿತ್ತು.ಪ್ರಪಂಚ ಎಷ್ಟೇ ಆಧುನಿಕತೆಯನ್ನು ಅನುಸರಿಸುತ್ತಿದ್ದರೂ ನಮ್ಮ ಸಂಪ್ರದಾಯಗಳನ್ನು ಇಂದಿಗೂ ನಾವು ಬಿಟ್ಟಿಲ್ಲ. ಅಂತಹ ಸಂಪ್ರದಾಯದಲ್ಲಿ ಒಂದು ಮಡಿಲು ಸೀಮಂತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಅಧ್ಯಕ್ಷೆ ಶಾರದಾ ಶೇಷಗಿರಿಗೌಡ ತಿಳಿಸಿದರು.
ಇಂದಿನ ಒತ್ತಡದ ಬದುಕಿನ ಜಂಜಾಟಕ್ಕೆ ಹಾಗೂ ಮನೆಯ ತಾಪತ್ರಯಕ್ಕೆ ಸಿಲುಕಿ ಹಲವಾರು ಕಾರಣಗಳಿಂದ ಸೀಮಂತದ ಸವಿ ಕಾಣದ ಸಾಕಷ್ಟು ಗ್ರಾಮೀಣ ಹೆಣ್ಣುಮಕ್ಕಳಿದ್ದಾರೆ. ಗ್ರಾಮೀಣ ಭಾಗದ ಗರ್ಭಿಣಿಯರಿಗೆ ತಾಯಿತನದ ಆಸೆ ಪೂರೈಸುವ ಸಂಪ್ರದಾಯದ ಸೀಮಂತ ಕಾರ್ಯಕ್ರಮವನ್ನು ಮಹಿಳಾ ದಿನಾಚರಣೆ ಯ ದಿವಸ ಮಾಡಿರುವುದು ನಮ್ಮ ಜೆಸಿಐ ಶಿವಮೊಗ್ಗ ಭಾವನಕ್ಕೆ ಅತ್ಯಂತ ತೃಪ್ತಿ ತಂದಿದೆ ಎಂದರು.ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದಂತಹ ಸಾಧಕಿಯರಿಗೆ ಸನ್ಮಾನಿಲಾಯಿತು. ಕೋವಿಡ್ ನಂತಹ ಮಹಾಮಾರಿ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಡೆಲಿವರಿ ಮಾಡಿದಂತಹ ಸರ್ಜಿ ಆಸ್ಪತ್ರೆಯ ಖ್ಯಾತ ಸ್ತ್ರೀರೋಗ ತಜ್ಞರು ಮತ್ತು ಪ್ರಸೂತಿ ತಜ್ಞರಾದ ಡಾ. ದ್ರಾಕ್ಷಾಯಿಣಿ
ಶಿವಮೊಗ್ಗ ತಾಲ್ಲೂಕು ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿ ಜೆಸಿ ಪ್ರತಿಮಾ ಡಾಕಪ್ಪಗೌಡ, ಸರ್ಜಿ ಹಾಸ್ಪಿಟಲ್ ನ ಮೆಟರ್ನಿಟಿ ಭಾಗದಲ್ಲಿ ಓಟಿ ಇಂಚಾರ್ಜ್ ಮತ್ತು ನರ್ಸಿಂಗ್ ಕೋ-ಆರ್ಡಿನೇಟರ್ ಶಾಂತ ಆರ್., ಫ್ರಂಟ್ಲೈನ್ ಕರೋನ ವಾರಿಯರ್ಸ್ ಆದ ಸರ್ಜಿ ಆಸ್ಪತ್ರೆಯ ಮೇರಿ ಸಿಸ್ಟರ್, ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವಂತಹ ಅನುಪಿನಕಟ್ಟೆಯ ಆಶಾ ಶ್ರೀನಿವಾಸ್, ತಾಲೂಕು ಮಹಿಳಾ ಆರೋಗ್ಯ ಶಿಕ್ಷಣಾಧಿಕಾರಿ ರಜನಿ ಕುಮಾರಿ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿಕಾರ್ಯದರ್ಶಿ ಜೆಸಿ ಪೂರ್ಣಿಮಾ , ಜೆಸಿ ಜಯಲಕ್ಷ್ಮಿ, ಜೆಸಿ ಲಲಿತಾ, ಜೆಸಿ ಶೋಭಾ, ಜೆಸಿ ಉಷಾ ಕುಲಕರ್ಣಿ, ಜೆಸಿ ಕನ್ನಿಕಾ, ಜೆಸಿ ಕರಿಬಸಮ್ಮ, ಜೆಸಿ ಕವಿತಾ, ನಾಗಮ್ಮ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಅನುಪಿನಕಟ್ಟೆಯ ಗ್ರಾಮಸ್ಥರು ಭಾಗವಹಿಸಿದ್ದರು.