ಆನವಟ್ಟಿ : ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಗ್ರಾಮ ಪಂಚಾಯಿತಿಯಲ್ಲಿ ಮಹಿಳೆಗೆ 50% ಮೀಸಲಾತಿಯನ್ನು ಜಾರಿಗೆ ತಂದಿದ್ದು ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪ ನವರು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಮಹಿಳೆಯರಿಗೆ ತಮ್ಮ ಶಕ್ತಿಯ ಮೇಲೆ ಸ್ವಾವಲಂಬಿಯಾಗಿ ದುಡಿಯಲು ಸಹಕಾರ ನೀಡುತ್ತಿದೆ, ಮಹಿಳಾ ರಕ್ಷಣೆಗೆ, ಮಹಿಳಾ ಸ್ವ ಸಹಾಯ ಸಂಘದ ಬಲ ನೀಡುವ ಕೆಲಸ ಮಾಡುತ್ತಿದೆ, ಶಿವ ಶರಣರ ನಾಡು ನಮ್ಮದು ಆಧುನಿಕ ಪ್ರಪಂಚದಲ್ಲಿ ತಾಯಂದಿರು ತಮ್ಮ ಮಕ್ಕಳಿಗೆ ಸರಿಯಾದ ಸಂಸ್ಕಾರವನ್ನು ನೀಡಬೇಕಿದೆ ಆಗ ಮಾತ್ರ ಸುಸಂಸ್ಕೃತ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ. ವೈ. ರಾಘವೇಂದ್ರ ಅವರು ತಿಳಿಸಿದರು.
ಸೊರಬ ತಾಲೂಕಿನ ಅನವಟ್ಟಿಯ ವೀರಶೈವ ಸಮುದಾಯ ಭವನದಲ್ಲಿ ಸುರಭಿ ಸೇವಾ ಚಾರಿಟೇಬಲ್ ಟ್ರಸ್ಟ್ ಶಿವಮೊಗ್ಗ ಜಿಲ್ಲಾ ಮಹಿಳಾ ಘಟಕದ ವತಿಯಿಂದ ‘ವಿಶ್ವ ಮಹಿಳಾ ದಿನಾಚರಣೆ ಹಾಗೂ ಸನ್ಮಾನ ಸಮಾರಂಭದ ಉದ್ಘಾಟನೆಯನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ. ವೈ. ರಾಘವೇಂದ್ರ ಅವರು ನೆರವೇರಿಸಿದರು.
ದಿವ್ಯ ಸಾನಿಧ್ಯ ವನ್ನು ಶ್ರೀ ಮ.ನಿ.ಪ್ರ ಡಾ.ಮಹಾಂತ ಸ್ವಾಮಿಗಳು, ಜಡೆ ಮಠ, ಶಿವಮೊಗ್ಗ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಸುಧಾ ಶಿವಪ್ರಸಾದ್, ಸುರಭಿ ಟ್ರಸ್ಟ್ ಅಧ್ಯಕ್ಷರಾದ ಎಸ್.ಜಿ. ರಾಮಚಂದ್ರ, ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ಶ್ರೀಮತಿ ವಾಣಿಶ್ರೀ, ಕುಸುಮಾ ಪಾಟೀಲ್, ಗೀತಾ ಮಲ್ಲಿಕಾರ್ಜುನ, ಶಿಲ್ಪಾ ಮತ್ತಿತರರು ಉಪಸ್ಥಿತರಿದ್ದರು.