09/03/2022 ಬುಧವಾರ ಸಂಜೆ, ಶಿವಮೊಗ್ಗ ನಗರದ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆಯ ಬಿಇಓ ರವರಿಗೆ ಮೈನ್ ಮಿಡ್ಲ್ ಸ್ಕೂಲ್ ಹಳೆ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ಮನವಿ ಮಾಡಲಾಯಿತು.
ದಿನಾಂಕ:15/02/2022 ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಾನ್ಯ ಶ್ರೀ ನಾಗರಾಜ್ ರವರಿಗೆ, ಮೈನ್ ಮಿಡ್ಲ್ ಸ್ಕೂಲ್ ಗೆ 134 ವರ್ಷಗಳ ಇತಿಹಾಸವಿದೆ, ಈ ಶಾಲೆ ಕನ್ನಡ ಮಾಧ್ಯಮ ವಾಗಿದ್ದು, 6 ಮತ್ತು 7ನೇ ತರಗತಿ ಆಂಗ್ಲ ಮಾಧ್ಯಮ ವಾಗಿದೆ, ಒಂದನೇ ತರಗತಿಯಿಂದ 5ನೇ ತರಗತಿ ವರೆಗೆ ಕನ್ನಡ ಮಾಧ್ಯಮ ವಿರುವುದರಿಂದ, ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ, ಕೆಪಿಎಸ್ ಅಡಿ ಎಲ್.ಕೆ.ಜಿ ಮತ್ತು ಯು.ಕೆ.ಜಿ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮಕ್ಕೆ ಈ ಶಾಲೆಗೆ ಮೊದಲ ಆದ್ಯತೆ ನೀಡಿ, ಜೋತೆಗೆ ಸ್ಮಾರ್ಟ್ ಸಿಟಿ ಅಭಿವೃದ್ಧಿ ಆಡಿಯ ಕಾಮಗಾರಿಯನ್ನು ಬೇಗನೆ ಮುಗಿಸಿ ಕೊಠಡಿ ನೀಡಿ ಎಂದು ಹೇಳಿದರು.
ಶಾಲಾ ಅವರಣದಲ್ಲಿ ಸಾರ್ವಜನಿಕ ವಾಹನಗಳು ನಿಲ್ಲುವುದರಿಂದ ಮಕ್ಕಳಿಗೆ ಆಟವಾಡಲು ಜಾಗವಿಲ್ಲ, ಪಾಠಮಾಡುವ ಶಿಕ್ಷಕರಿಗೆ ಈ ವಾಹನಗಳ ಓಡಾಡದ ಕರ್ಕಶ ಶಬ್ದಗಳಿಂದ ಪಾಠ ಮಾಡಲು ತೊಂದರೆ ಅಗುತ್ತದೆ, ಶಾಲಾವರಣದಲ್ಲಿ ಸಾರ್ವಜನಿಕ ವಾಹನಗಳ ನಿಷೇಧ, ಹಾಗೂ ದಂಡ ವಿಧಿಸಲಾಗುತ್ತದೆ ಎಂಬ ನಾಮಫಲಕ ವಿದ್ದರು, ಪ್ರಯೋಜನವಿಲ್ಲ, ಅದಕ್ಕಾಗಿ ಇಲಾಖೆಯಿಂದ ವಾಚಮೆನ್ ಅವಕಾಶ ಕಲ್ಪಿಸಿಕೊಡಿ ಎಂದು ಹಳೇ ವಿದ್ಯಾರ್ಥಿಗಳ ಸಂಘದಿಂದ ಮನವಿ ಮಾಡಲಾಯಿತು. ಹಾಗೂ ಕೊರೋನಾದಿಂದ ಶಾಲೆ ಬಿಟ್ಟ ಮಕ್ಕಳು ಹಾಗೂ ಕೊಳಗೇರಿ ಏರಿಯಾಗಳಲ್ಲಿ ಯಾವ ಮಕ್ಕಳೂ ಶಿಕ್ಷಣದಿಂದ ವಂಚಿತರಾಬಾರದು ಎಂದು ಶಾಲೆಗೆ ಸೇರಿಸಲು ಆಂದೋಲನ ಆರಂಭಿಸಲಾಗಿದೆ, ಎಂದು ಹಳೇ ವಿದ್ಯಾರ್ಥಿಗಳು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಶಿಫಾರಸು ಮಾಡಿದರೆ, ಹಾಗೂ ಶಿಕ್ಷಣ ಸಚಿವರು ಆದೇಶ ಮಾಡಿದರೆ ಈ ಸಾಲಿನಿಂದಲೇ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮ ಸುರುವಾಗುವುದು ಎಂದು ಬಿಇಓ ರವರು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಶ್ರೀ ಚನ್ನವೀರಪ್ಪ ಗಾಮನಗಟ್ಟಿ, ಉಪಾಧ್ಯಕ್ಷರಾದ ಶ್ರೀ ಪರಶುರಾಮ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಯತೀಶ್ ರಾಜ್, ಕಾರ್ಯದರ್ಶಿ ಶ್ರೀ ಮತಿ ಸವಿತಾ ವೆಂಕಟೇಶ್, ಸಹಕಾರ್ಯದರ್ಶಿ ವಿಶ್ವನಾಥ್, ಸದಸ್ಯರಾದ ಶ್ರೀ ಚಂದ್ರನಾಯ್ಕ್, ಶ್ರೀ ವಸಂತ್ ನಾಯ್ಕ್, ಶ್ಶೀ ರಾಮು ವಿ. ಶ್ರೀ ರಮೇಶ, ಶಿವಮೊಗ್ಗ ಶ್ರೀ ಶಂಕರ್, ಶ್ರೀ ರಾಘವೇಂದ್ರ, ಶ್ರೀ ದೇವರಾಜ್, ಶ್ರೀ ಬಸವರಾಜು, ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಹಾಗೂ ಇತರರೂ ಉಪಸ್ಥಿತರಿದ್ದರು.