ಶಿವಮೊಗ್ಗ: ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಸಂಘ, ಸಂಸ್ಥೆಗಳ ಪಾತ್ರ ಮಹತ್ವದ್ದು. ಮಠಗಳಲ್ಲಿ ನಿರ್ದಿಷ್ಟ ಚೌಕಟ್ಟು ಇರುತ್ತದೆ. ಇಂತಹ ಚೌಕಟ್ಟನ್ನು ಮೀರಿ ಸೇವೆ ಮಾಡಲು ಸಂಘ, ಸಂಸ್ಥೆಗಳಿಂದ ಸಾಧ್ಯ. ಈ ನಿಟ್ಟಿನಲ್ಲಿ ರೋಟರಿ ಸಂಸ್ಥೆ ಕಾರ್ಯ ಮಾದರಿಯಾಗಿದೆ. ಸಾಮಾಜಿಕ ಸೇವೆಯಿಂದ ವ್ಯಕ್ತಿಯ ಘನತೆ ವೃದ್ಧಿಸುತ್ತದೆ ಎಂದು ಅವಧೂತ ಶ್ರೀ ವಿನಯ್ ಗುರೂಜಿ ಹೇಳಿದರು.
ರೋಟರಿ ಅಂತರಾಷ್ಟ್ರೀಯ ಜಿಲ್ಲೆ 3182 ವತಿಯಿಂದ ನಗರದ ಹೊರವಲಯದಲ್ಲಿನ ಪೆಸಿಟ್ ಕಾಲೇಜಿನಲ್ಲಿ ಹಮ್ಮಿಕೊಂಡಿರುವ 3 ದಿನಗಳ 6ನೇ ಜಿಲ್ಲಾ ಸಮಾವೇಶ ರಾಮ ಸಂಭ್ರಮಕ್ಕೆ 11-03-2022ರ ಶುಕ್ರವಾರ ಸಂಜೆ ನಡೆದ ಚಾಲನಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.ನಾಡಿನ ಅಭಿವೃದ್ಧಿಯಲ್ಲಿ ಸರ್ಕಾರೇತರ ಸಂಸ್ಥೆಗಳ ಪಾತ್ರ ಪ್ರಮುಖವಾಗಿದೆ. ಅದರಲ್ಲೂ ರೋಟರಿಯ ಕೊಡುಗೆ ಮಹತ್ವದ್ದು. ಪ್ರಕೃತಿ ವಿಕೋಪ, ಕೋವಿಡ್ನ ಪರಿಣಾಮ ಸೇರಿದಂತೆ ಎಂತಹ ಕಠಿಣ ಪರಿಸ್ಥಿತಿಯಲ್ಲೂ ಮನುಕುಲದ ಒಳಿತಿಗಾಗಿ ಈ ಸಂಸ್ಥೆ ನಿರ್ವಹಿಸುತ್ತಿರುವ ಪಾತ್ರ ಅವಿಸ್ಮರಣೀಯ ಎಂದರು.
ನಂತರ ಜೀವನ ಮೌಲ್ಯಗಳು ಎಂಬ ವಿಷಯ ಕುರಿತು ಪ್ರವಚನ ನೀಡಿದ ಅವಧೂತರು, ಜೀವನ ಮೌಲ್ಯಾಧಾರಿತವಾಗಿರಬೇಕು. ಜೀವನ ಮೌಲ್ಯಗಳ ಅಳವಡಿಕೆಯಿಂದ ವ್ಯಕ್ತಿಯ ಗೌರವ, ಘನತೆ ವೃದ್ಧಿಸುತ್ತದೆ. ಮೌಲ್ಯಗಳು ನಮ್ಮ ಬದುಕಿನ ಬಹು ದೊಡ್ಡ ಆಸ್ತಿ ಇದ್ದಂತೆ. ಸಂಸ್ಕøತಿ ಮತ್ತು ಸಂಸ್ಕಾರದಂತಹ ಮೌಲ್ಯಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.ನ್ಯಾಯ ಮತ್ತು ಪ್ರಾಮಾಣಿಕತನಕ್ಕಿರುವ ಪ್ರಾಧಾನ್ಯ ಹಾಗೂ ಅವುಗಳ ಬಳಕೆ ನಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಮೌಲ್ಯಗಳು ಎಲ್ಲಾ ಜೀವಿಗಳಲ್ಲಿ ಅಂತರ್ಗತವಾಗಿರುತ್ತದೆ. ಮೌಲ್ಯವರ್ಧನೆ ಎಂದರೆ ವ್ಯಕ್ತಿಗಳಲ್ಲಿ ನೈತಿಕ ಸದ್ಗುಣಗಳಾದ ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆ, ಸಹನೆ, ಅನುಕಂಪ, ಸತ್ಯ, ನ್ಯಾಯ, ಸಚ್ಚಾರಿತ್ರ್ಯ, ಅಹಿಂಸೆ, ಸಹಕಾರ, ಸಹೋದರತ್ವ, ಸಹಿಷ್ಣುತಭಾವಗಳನ್ನು ಬೆಳೆಸುವುದಾಗಿದೆ ಎಂದರು.
ಮಠಗಳಲ್ಲಿತಕ್ಕಮಟ್ಟಿಗಿನಚೌಕಟ್ಟುಇರುತ್ತದೆ. ಚೌಕಟ್ಟನ್ನು ಮೀರಿ ಹೃದಯದಿಂದ ಸೇವೆ ಮಾಡಬೇಕು ಅಂದ್ರೆ ಅದು ಸಂಘ ಸಂಸ್ಥೆಗಳಿಂದ ಮಾತ್ರ ಸಾಧ್ಯ. ಅದರಲ್ಲೂ ರೋಟರಿ ಅಂತಹ ಸಂಸ್ಥೆಗಳು ಆ ಕೆಲಸ ಮಾಡ್ತಿದೆ. ಯಾರೆಲ್ಲಾ ತಮ್ಮನ್ನು ತಾವು ಸೇವೆಗೆ ಸಮರ್ಪಿಸಿಕೊಂಡಿದ್ದೀರಿ ಪ್ರತಿಯೊಬ್ಬರಿಗೂ ನನ್ನ ಹೃದಯದಿಂದ ನಮಸ್ಕಾರಗಳು ಎಂದರು.ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಡಿ.ಎಸ್.ಅರುಣ್, ಎಸ್.ದತ್ತಾತ್ರಿ, ಮೇಯರ್ ಸುನೀತಾ ಅಣ್ಣಪ್ಪ, ರವಿ ದೋತ್ರೆ, ರೋಟರಿ ಜಿಲ್ಲಾ ಗೌವರ್ನರ್ ರಾಮಚಂದ್ರ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.